ಭ್ರಷ್ಟಾಚಾರ ನಿಗ್ರಹಕ್ಕೆ ಯುವ ಪೀಳಿಗೆ ಜಾಗೃತರಾಗಬೇಕು

 ಕೊಡಿಗೇನಹಳ್ಳಿ : 

     ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕೇಳು ಬರುತ್ತಿದ್ದು ಇದು ಒಂದು ಪಿಡುಗಾಗಿ ಕಾಡತೊಡಗಿದೆ ಇದನ್ನು ನಿಗ್ರಹ ಮಾಡಲು ಯುವ ಪೀಳಿಗೆ ಜಾಗೃತರಾಗಬೇಕು ಎಂದು ತುಮಕೂರು ಭ್ರಷ್ಠಾಚಾರ ನಿಗ್ರÀಹದಳದ ಪಿ.ಎಸ್.ಐ. ವಿಜಯಲಕ್ಷ್ಮೀ ರವರು ತಿಳಿಸಿದರು.

      ಭಷ್ಟಾಚಾರ ನಿಗ್ರಹದಳ ಪೊಲೀಸ್‍ಠಾಣೆ ತುಮಕೂರು ರವರು ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೂರು ದಾರರಿಂದ ಅರ್ಜಿ ಸ್ವಿಕರಿಸಿ ಮಾತನಾಡಿದ ಅವರು ಸಾರ್ವಜನಿಕರು ಇತ್ತೀಚಿಗೆ ಅನಾಮದೇಯ ಪತ್ರಗಳ ಮೂಲಕ ದೂರುಗಳನ್ನು ನೀಡುತ್ತಿದು ತನಿಖೆ ನಡೆಸಲು ಕಷ್ಟಕರ ವಾಗುತ್ತಿದ್ದು ದೂರು ನೀಡುವವರ ಹೆಸರು ಮತ್ತು ವಿಳಾಸ ಗೌಫ್ಯವಾಗಿಡಲಾಗುವುದು. ವಿಳಾಸ ಸ್ಪಷ್ಠಾವಾಗಿದ್ದರೆ ಹೆಚ್ಚಿನ ಮಾಹಿತಿ ಪಡೆದು ತನಿಖೆಗೆ ಸಹಕಾರಿಯಾಗುವುದು.
ಭ್ರಷ್ಟಾಚಾರ ನಿಗ್ರಹದಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಇಲ್ಲ ಎಂದು ತಿಳಿದು ಬರುತ್ತದೆ. ಮಾರ್ಚ್ 14.2016 ರಂದು ಸ್ಥಾಪಿಸಿದು.್ದ ಭ್ರಷ್ಟಾಚಾರ ತಡೆ ಕಾಯ್ದೆ 1988ರ ನಿಬಂದನೆಗಳ ಅಡಿಯಲ್ಲಿ ನೋದಾಯಿಸಲಾದ ಎಲ್ಲಾ ಪ್ರಕರಣಗಳನ್ನು ಎ.ಸಿ.ಬಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು ಯಾವುದೇ ಕಚೇರಿಯಲ್ಲಿ ಕೆಲಸಕ್ಕೆ ವಿಲಂಭಮಾಡುವುದಾಗಳಿ ಅಥವಾ ಲಚ್ಚಪಡೆಯಲು ಮುಂದಾದಾಗ ಸಾರ್ವಜನಿಕರು ಪ್ರಶ್ನೆಮಾಡಿ ಕೆಲಸವನ್ನು ಲಂಚ ನೀಡದೆ ತಮ್ಮ ಕಾರ್ಯಗಳನ್ನು ಮಾಡಿಸಿಕೊಳ್ಳಿ ಮಧ್ಯವರ್ತಿಗಳ ಮೊರೆ ಹೋಗಬೇಡಿ ಕೆಲ ಅಧಿಕಾರಿಗಳು ಕಚೇರಿಗೆ ಬರುವವರನ್ನು ನೋಡಿಕೊಳ್ಳುವ ರೀತಿ ಇತ್ತಿಚೀಗೆ ಅನೇಕ ದೂರುಗಳು ಕೇಳಿ ಬರುತ್ತಿವೆ. ಸಾರ್ವಜನಿಕರ ಜಾಗೃತರಾಗಿ ನಮ್ಮ ಹಕ್ಕುಗಳು ಏನು ಸುಶಿಕ್ಷಕರಾಗಿ ಸೌಲಭ್ಯಗಳನ್ನು ಭ್ರಷ್ಟಾಚಾರರಹಿತವಾಗಿ ಮಾಡಿಕೊಳ್ಳಬೇಕು. ಎಲ್ಲಿಯವರೆಗೂ ನಾವು ಪ್ರಶ್ನೆ ಮಾಡುವುದಿಲ್ಲವೂ ಅಲ್ಲಿಯವರೆಗೆ ಇರುತ್ತದೆ ಸಮಾಜದಲ್ಲಿ ಬಡವರು ಬಡವರಾಗಿ ಇರುತ್ತಾರೆ ಸಾಮಾಜಿಕ ಅಂತರ ಹೆಚ್ಚಾಗುತ್ತಿದೆ.

      ತಾವುಗಳು ದೈರ್ಯವಾಗಿ ದೂರು ನೀಡಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಸರ್ಕಾರಿ ಕಚೇರಿಯಲ್ಲಿ ನಮ್ಮ ದೂರವಾಣಿ ಸಂಖ್ಯೆ ಇರುತ್ತದೆ ತಕ್ಷಣ ದೂರು ನೀಡಿ ತಮ್ಮ ಮಾಹಿತಿ ಗೌಫ್ಯವಾಗಿಡಲಾಗುವು ಎಂದರು. ಈ ಕಾರ್ಯಕ್ರಮದಲ್ಲಿ 4 ಅರ್ಜಿಗಳು ಬಂದಿದ್ದು ಸಾರ್ವಜನಿಕರು ಜಾಗೃತರಾಗಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link