ಅಕ್ರಮ ಮದ್ಯ ವಶ : ನಾಲ್ವರ ಬಂಧನ

ಮಧುಗಿರಿ : 

      ಅಕ್ರಮವಾಗಿ ಡಾಬಾವೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಮಧುಗಿರಿ ಪೆÇೀಲೀಸರು ಬಂಧಿಸಿ ಸುಮಾರು 49.89 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

      ಭಾನುವಾರ ಮಧ್ಯಾಹ್ನ ಮಧುಗಿರಿ ಸಿ.ಪಿ.ಐ ಎಂ.ಎಸ್. ಸರ್ದಾರ್ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿಯ ಸಮೀಪವಿರುವ ಆಂಧ್ರದಗಡಿ ಭಾಗದಲ್ಲಿರುವ ಕಾಶ್ಮೀರಿ ಫ್ಯಾಮಿಲಿ ಡಾಬಾದಲ್ಲಿ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.

      ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ, ಪಂಚರುಗಳ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಕ್ರಮ ಮದ್ಯದ ಜೊತೆ ಡಾಬಾದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳಾದ ಕೋಟ್ಲಾ ರವಿ ಬಿನ್ ಅಶ್ವತ್ಥಪ್ಪ (32) ಮಡಕಶಿರಾ, ಸುನೀಲ ಬಿನ್ ಲೋಕೇಶ್ (25 ) ಹಾಸನ, ಕೃಷ್ಣಮೂರ್ತಿ ಬಿನ್ ಪೆನ್ನಪ್ಪ(40 ), ಮಿಡಿಗೇಶಿಯ ನಾಗರಾಜು ಬಿನ್ ದಾಸಪ್ಪ(35) ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

      ಕಾರ್ಯಾಚರಣೆಯಲ್ಲಿ ಮಿಡಿಗೇಶಿ ಪೊಲೀಸ್ ಠಾಣೆಯ ಎ.ಎಸ್.ಐ ರವಿ, ತಾರಾಸಿಂಗ್ ಹಾಗೂ ಮುಖ್ಯಪೇದೆಗಳಾದ ಸಂಜೀವರಾಜು, ಲಕ್ಷ್ಮೀನಾರಾಯಣ, ಪೊಲೀಸ್ ಪೇದೆಗಳಾದ ರವಿಕುಮಾರ್ ಹಾಗೂ ಮಧುಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಯಾದ ರಾಮಕೃಷ್ಣ, ರಂಗನಾಥ್, ಸಿದ್ದೇಶ್, ನಟರಾಜು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap