ಮಧುಗಿರಿ : ಕೊರೋನಾ ಕುರಿತು ತಹಸೀಲ್ದಾರ್ ಎಚ್ಚರಿಕೆ

 ಮಧುಗಿರಿ : 

      ಕೊರೊನಾ ಸಾಂಕ್ರಾಮಿಕ ರೋಗವು ಸಮುದಾಯಗಳಿಗೆ ಹರಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬುಧವಾರ ನಡೆಯುತ್ತಿದ್ದ ಸಂತೆ, ದಿನನಿತ್ಯ ನಡೆಯುವ ತರಕಾರಿ ಅಂಗಡಿಗಳನ್ನು ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುವುದು ಎಂದು ತಹಸೀಲ್ದಾರ್ ವೈ.ರವಿ ತಿಳಿಸಿದರು.

      ಅವರು ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷರು, ಸದಸ್ಯರುಗಳು, ಪುರಸಭಾ ಅಧಿಕಾರಿಗಳು ಹಾಗೂ ಪೆÇೀಲಿಸ್ ಇಲಾಖೆಯವರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾರ್ವಜನಿಕರು ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಹೊರಗಿನಿಂದ ಬಂದವರಿಗೆ ಕಡ್ಡಾಯವಾಗಿ ಕರೋನಾ ಪರೀಕ್ಷೆ ಮಾಡಿಸಬೇಕು. ವೃದ್ದರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬಾರದಂತೆ ಕ್ರಮಕೈಗೊಳ್ಳಲು ಪುರಸಭೆಯ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

      45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ. ಮಧುಗಿರಿ ಪಟ್ಟಣದಲ್ಲಿ ಕೋವಿಡ್ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಬೆಂಗಳೂರು, ಕೇರಳ, ಮಹಾರಾಷ್ಟ್ರ ಇನ್ನೂ ಮುಂತಾದ ಕಡೆಗಳಿಂದ ಬಂದಲ್ಲಿ ಸಾರ್ವಜನಿಕರು ಪುರಸಭೆ ಮತ್ತು ನಮ್ಮ ಗಮನಕ್ಕೆ ತರಬೇಕು. ಮಕ್ಕಳು, 60 ವರ್ಷ ಮೇಲ್ಪಟ್ಟವರು, ಹೋಮ್ ಕ್ವಾರೆಂಟೈನ್ ಮತ್ತು ಐಸೋಲೇಷನ್‍ನಲ್ಲಿ ಇರುವವರು ಮನೆಯಿಂದ ಆಚೆ ಬರಬಾರದು. ಅನವಶ್ಯಕವಾಗಿ ಓಡಾಡುವವರ ಮೇಲೆ ಕಡ್ಡಾಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

       ಪುರಸಭೆ ಅಧ್ಯಕ್ಷ ತಿಮ್ಮರಾಜು, ಮುಖ್ಯಾಧಿಕಾರಿ ಅಮರನಾರಾಯಣ್, ಸದಸ್ಯರುಗಳಾದ ಲಾಲಾಪೇಟೆ ಮಂಜುನಾಥ್, ಗೋವಿಂದರಾಜು, ಅಲೀಮ್, ಮುಖಂಡರಾದ ಎಸ್.ಬಿ.ಟಿ.ರಾಮು, ಆನಂದ್, ಕಿಶೋರ್, ಶಹಜು, ಕಂದಾಯ ಇಲಾಖೆಯ ನವೀನ್, ಪುರಸಭೆಯ ವರಲಕ್ಷ್ಮಮ್ಮ, ಪಿ.ಎಸ್.ಐ ಮಂಗಳಗೌರಮ್ಮ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link