ಮಧುಗಿರಿ : ಬೋರ್’ವೆಲ್ ಲಾರಿ ತಡೆದು ನೀರಿಗಾಗಿ ಪ್ರತಿಭಟನೆ

ಮಧುಗಿರಿ : 

     ಕಸಬಾ ವ್ಯಾಪ್ತಿಯ ಹಳೆಹಟ್ಟಿ ಗ್ರಾಮದಲ್ಲಿ ಕೊರೆದ ಕೊಳವೆ ಬಾವಿ ವಿಫಲವಾದ ಹಿನ್ನಲೆಯಲ್ಲಿ ಮತೊಂದು ಕೊಳವೆ ಬಾವಿ ಕೊರೆಸಿ ಎಂದು ಆಗ್ರಹಿಸಿ ಬೋರ್ ವೆಲ್ ನ ಲಾರಿಯನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

      ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಯುಂಟಾಗಿದ್ದರಿಂದ ಗ್ರಾ.ಪಂ ವತಿಯಿಂದ ಶುಕ್ರವಾರ ಬೋರ್ ವೆಲ್ ಕೊರೆಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸುಮಾರು 1500 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿರಲಿಲ್ಲ. ಇದರಿಂದ ವಿಧಿಯಿಲ್ಲದೇ ಬೋರ್ ವೆಲ್ ಕೊರೆಯುವುದನ್ನು ನಿಲ್ಲಿಸಿ ಬೋತ್ ವೆಲ್ ಲಾರಿ ವಾಪಾಸ್ಸಾಗುತ್ತಿದ್ದಾಗ ನಮ್ಮ ಗ್ರಾಮದಲ್ಲಿ ನೀರಿನ ಅಭಾವ ಬಹಳಷ್ಟಿದ್ದು, ಮತ್ತೊಂದು ಬೋರ್ ವೆಲ್ ಕೊರೆಯಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ಮಹಿಳೆಯರು ಬೋರ್ ವೆಲ್ ಲಾರಿ ತಡೆದು ಪ್ರತಿಭಟನೆ ನಡೆಸಿದರು.

      ಗ್ರಾಮದ ವಿಜಯಲಕ್ಷ್ಮಮ್ಮ ಮಾತನಾಡಿ ಗ್ರಾಮದಲ್ಲಿ ಸುಮಾರು 15 ದಿನಗಳಿಂದ ನೀರಿನ ಅಬಾವ ಉಂಟಾಗಿದ್ದು, ಶಾಸಕರ ಎಂ.ವಿ.ವೀರಭದ್ರಯ್ಯ ನವರಿಗೆ ಗ್ರಾಮದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಿದಾಗ ಬೋರ್ ವೆಲ್ ಕೊರೆಸಲು ಸೂಚಿಸಿದ್ದರು ಅದರಂತೆ ಇಂದು ಬೋರ್ ವೆಲ್ ಕೊರೆಸಲಾಗಿದ್ದು, ವಿಫಲವಾಗಿದೆ ಆದ್ದರಿಂದ ಮತ್ತೊಂದು ಬೋರ್ ವೆಲ್ ಕೊರೆಸಬೇಕೆಂದು ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದಾಗ ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನಿವಾರ್ಯವಾಗಿ ಬೋರ್ ವೆಲ್ ಲಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap