ಮಧುಗಿರಿ :
ಪಟ್ಟಣದಲ್ಲಿ ಶುಕ್ರವಾರದಿಂದ ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳು, ಕಟ್ಟಡ ಕಾಮಗಾರಿಗಳಿಗೆ ಬೇಕಾಗುವ ವಸ್ತುಗಳ ಅಂಗಡಿಗಳು, ಮೆಡಿಕಲ್ ಸ್ಟೋರ್‍ಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ತಹಸೀಲ್ದಾರ್ ವೈ.ರವಿ ತಿಳಿಸಿದ್ದಾರೆ.
ತಹಶೀಲ್ದಾರರ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷರು, ಸದಸ್ಯರುಗಳು ಮತ್ತು ಪೊಲೀಸ್ ಇಲಾಖೆಯವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದರು. ಪಟ್ಟಣದಲ್ಲಿ ಯಾವ ವ್ಯಾಪಾರಗಳು ನಡೆಸಲು ಅವಕಾಶವಿದೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆಯವರಿಗೆ ಗೊಂದಲ ಇತ್ತು, ಸರ್ಕಾರದ ಆದೇಶವನ್ನು ವಿವರಿಸಲಾಗಿದೆ.
ಮಧ್ಯಾಹ್ನ 2 ಗಂಟೆವರೆಗೂ ಬ್ಯಾಂಕಿನ ವಹಿವಾಟು ಇರುವುದರಿಂದ ಖಾತೆದಾರ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಅಧಿಕಾರಿಗಳು ಯಾರಾದರೂ ಕೇಳಿದರೆ ಪಾಸ್ ಪುಸ್ತಕ ತೋರಿಸುವುದು ಕಡ್ಡಾಯ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ತಹಸೀಲ್ದಾರ್ ವೈ.ರವಿ ಎಚ್ಚರಿಸಿದ್ದಾರೆ.
ವ್ಯಾಪಾರಸ್ಥರಲ್ಲಿ ಹೆಚ್ಚಿದ ಆತಂಕ:
ಪಟ್ಟಣದಲ್ಲಿರುವ ವ್ಯಾಪಾರಸ್ಥರಲ್ಲಿ ಹೆಚ್ಚು ಕರೋನ ವ್ಯೆರಸ್ಸ್ ಹರಡುವ ಹಂತ ತಲುಪುತ್ತಿರುವುದು ಅಲ್ಲದೆ ಯುವ ವ್ಯಾಪಾರಿಗಳು ಮೃತಪಡುತ್ತಿರುವುದರಿಂದ ಆತಂಕದ ವಾತಾವರಣದಲ್ಲಿ ವ್ಯಾಪಾರ ವಹಿವಾಟು ನಡೆಸುವಂತಾಗಿದೆ.
ಬುಧವಾರದಂದು ವಿಆರ್‍ಎಸ್‍ಟಿ ರಸ್ತೆಯಲ್ಲಿರುವ ಪ್ರಾವಿಷನ್ ಸ್ಟೋರ್‍ನ ಮಾಲೀಕ ಗುರುವಾರ ಶಿರಾ ಗೇಟ್ ಬಳಿಯ ವ್ಯಾಪಾರಸ್ಥ ಇವರಿಬ್ಬರೂ ಯುವಕರಾಗಿದ್ದು ಕರೋನಾ ಕಾರಣದಿಂದಾಗಿ ಮೃತಪಟ್ಟಿದ್ದರಿಂದ ನಿನ್ನೆ ಇದ್ದವರು ಇವತ್ತಿಲ್ಲ ಎನ್ನುವಂತಾಗಿದೆ.
ಶಿರಾ ಗೇಟ್ ಬಳಿ ಮೃತಪಟ್ಟ ಯುವ ವ್ಯಾಪಾರಸ್ಥನಿಗೆ ಸೋಂಕಿನ ಅರಿವೆ ಆಗಿಲ್ಲವೆಂದು ತನ್ನ ಅಂಗಡಿಯ ಸಮೀಪದ ಬಡಾವಣೆಯಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು ಇವರುಗಳು ಈ ಅಂಗಡಿಯಲ್ಲೇ ವ್ಯಾಪಾರ ಮಾಡಿದ್ದರ ಫಲ ಸಾವು ಉಂಟಾಗಲು ಕಾರಣ ಎಂಬುದು ಸಾರ್ವಜನಿಕರ ಮಾತಾಗಿದೆ.
ತಾಲ್ಲೂಕು ಆಡಳಿತ ಮತ್ತು ಪುರಸಭೆ ವತಿಯಿಂದ ಪದೇಪದೆ ವ್ಯಾಪಾರಸ್ಥರು ಗ್ರಾಹಕರಿಗಾಗಿ ಸ್ಯಾನಿಟೈಜರ್ ನೀಡಿ ವ್ಯಾಪಾರ ಮಾಡಿ, ವ್ಯಕ್ತಿಗತ ಅಂತರ, ಮಾಸ್ಕ್ ಕಡ್ಡಾಯದ ಬಗ್ಗೆ ಹೇಳುತ್ತಿದ್ದರೂ ಇದರ ಪರಿವೇ ಇಲ್ಲದಂತೆ ವರ್ತಿಸುವುದರಿಂದ ಇದನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಗಿದೆ.
ಸಾಮಾಜಿಕ ಅಂತರಕಾಯ್ದು ಕೊಳ್ಳುವ ಸಲುವಾಗಿ ಹೂವು ಹಣ್ಣು ತರಕಾರಿ ವ್ಯಾಪಾರವನ್ನು ಶ್ರೀರಾಜೀವ್‍ಗಾಂಧಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದ್ದರೂ ಸಹ ಕೆಲ ವ್ಯಾಪಾರಸ್ಥರ ಉದ್ದಟತನದ ಬಗ್ಗೆ ತಹಶೀಲ್ದಾರ್‍ಗೆ ವ್ಯಾಪಾರದ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದಾರೆ. ಇನ್ನಾದರೂ ವ್ಯಾಪಾರಸ್ಥರು ಕೊರೋನಾ ವೈರಸ್ ಬಾರದಂತೆ ಹಲವು ಕ್ರಮಗಳನ್ನು ತೆಗೆದುಕೊಂಡು ವ್ಯಾಪಾರ ಮಾಡಿದರೆ ಒಳಿತು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ