ಮಧುಗಿರಿ :
ರಾಜಕೀಯವನ್ನು ಬದಿಗೊತ್ತಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿ ಒಂದಾಲ್ಲಾ ಒಂದು ರೀತಿಯಲ್ಲಿ ಜಿಲ್ಲೆಯ ಜನರಿಗಾಗಿ ಸಹಾಯದ ನೆರವು ಚಾಚುತ್ತಾ ಸೇವಾ ಮನೋಭಾವದ ಯುವ ನಾಯಕ ಆರ್. ರಾಜೇಂದ್ರ ರವರು ಸದಾ ಮಂಚೂಣಿಯಲ್ಲಿದ್ದು ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಕಳೆದ ವರ್ಷ ಆರಂಭವಾದ ಇಡೀ ಜಗತ್ತನ್ನೇ ತಲ್ಲಣ ಗೊಳಿಸಿದ ಕೊರೊನಾ ಸಾಂಕ್ರಾಮಿಕ ರೋಗದ ಮತ್ತೊಂದು ಬಾಹುವು ಮತ್ತೆ ಮಂದುವರೆಯುತ್ತಿದ್ದು ಅಂದೂ ಮೊದಲನೇಯ ಅಲೆಯಲ್ಲಿ ಕಾರ್ಯೊನ್ಮಖರಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೂ ಮಾಸ್ಕ್ ಹಾಗೂ ಸ್ಯಾನಿಟೈಜರ್ ಪ್ರತಿಯೊಂದು ಸಮುದಾಯಗಳ, ವೃತ್ತಿ ಭಾಂಧವರಿಗೂ, ಕೂಲಿ ಕಾರ್ಮಿಕರಿಗೂ , ಬಸ್, ಆಟೋ, ಕಾರು ಚಾಲಕರಿಗೂ, ದಿನಗೂಲಿ ಕೆಲಸಗಾರರಿಗೂ ಆಹಾರದ ಕಿಟ್‍ಗಳನ್ನು ಹಂಚಿದ್ದರು ಜೊತೆಯಲ್ಲಿ ತುಮಕೂರಿನಲ್ಲಿ ತನ್ನ ಅಭಿಮಾನಿ ಬಳಗದ ಮೂಲಕ ಕರ್ತವ್ಯದಲ್ಲಿದ್ದ ಕೊರೊನಾ ವ್ಯಾರಿಯರ್ಸ್ ಹಾಗೂ ವಲಸೆ ಕಾರ್ಮಿಕರಿಗೂ ಸುಮಾರು 2ಲಕ್ಷ ಜನಕ್ಕೆ ಬೆಳಗ್ಗೆ ಮತ್ತು ಮಧ್ಯಾಹ್ನ ಅನ್ನದಾಸೋಹ ಸೇವೆ ಆರಂಭಿಸುವುದರ ಮೂಲಕ ಯುವಕರ ಐಕಾನ್ ಆರ್ ರಾಜೇಂದ್ರರವರು ಗಣ್ಯರಿಂದ ಪ್ರಶಂಸೆಗಳಿಸಿ ಕೊಂಡಿದ್ದಾರೆ.
ಈಗ ಮತ್ತೆ ಕೊರೊನಾ 2ನೇ ಅಲೆ ಆರಂಭವಾಗಿದ್ದು ಮಧುಗಿರಿ ತಾಲ್ಲೂಕಿನಲ್ಲಿ ಸಾವುಗಳು ಹೆಚ್ಚಾಗಿ ಸಂಭಂವಿಸುತ್ತಿರುವುದರಿಂದ ಪಟ್ಟಣದ ಮುಸ್ಲಿಂ ಭಾಂದವರ ತಂಡವೊಂದು ಮೃತ ಪಟ್ಟ ದೇಹಗಳ ಅಂತ್ಯ ಸಂಸ್ಕಾರ ಮಾಡುತ್ತಿದ್ದು ಅವರು ಸೇವೆಯನ್ನು ಮುಂದುವರೆಸುವ ಸಲುವಾಗಿ ಅವರ ಅಗತ್ಯಕ್ಕೆ ಅನುಗುಣವಾಗಿ ಉತ್ತಮ ಗುಣಮಟ್ಟದ ಪಿ.ಪಿ ಕಿಟ್, ಶೀಲ್ಡ್ ಮಾಸ್ಕ್, ಗ್ಲೌಸ್‍ಗಳನ್ನು ವಿತರಿಸಲು ಮುಂದಾಗಿ ಅವರ ಸೇವೆಯನ್ನು ಬೆಂಬಲಿಸಿದ್ದಾರೆ.
ಸಹಕಾರಿ ಕ್ಷೇತ್ರದ ಆಲದಮರ ಎಂದೇ ಖ್ಯಾತಿ ಪಡೆದಿರುವ ಕೆ.ಎನ್.ರಾಜಣ್ಣ ನವರಿಗೆ ತಕ್ಕ ಮಗನಾಗಿ ತನ್ನ ಕುಟುಂಬದ ಬೆಂಬಲದೊಂದಿಗೆ ನೊಂದ ಜನರಿಗೆ ಆಶಾದೀಪಾವಾಗಿ ಜನ ಸೇವೆಯಲ್ಲಿ ತೊಡಗಿರುವ ಆರ್ ರಾಜೇಂದ್ರರವರು ಕೊರೊನಾ 2ನೇ ಅಲೆಯನ್ನು ತಡೆಗಟ್ಟಲು ಭಗೀರಥ ಪ್ರಯತ್ನ ಮಾಡುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಿಗೆ ಅನೂಕೂಲ ಮಾಡಿಕೊಡುವ ಉದ್ದೇಶ ಹಾಗೂ ಸರಕಾರಿ ಕಛೇರಿಗೆ ಜನರು ಅಲೆದಾಡುವಂತಹವುದನ್ನು ತಪ್ಪಿಸಲು ತುಮಕೂರಿನಲ್ಲಿ ಜನ ಸಂಪರ್ಕ ಕಛೇರಿಯನ್ನು ತೆರೆದು ತಮ್ಮ ಜನ ಸೇವೆಯನ್ನು ಮುಂದುವರೆಸಿದ್ದಾರೆ.
ಹಲವಾರು ಜನಪರ ಕಾಯಿದೆಗಳ ಪರವಾಗಿ ಹೋರಾಟ ನಡೆಸುತ್ತಿದ್ದು ಏಳು ರಾಜ್ಯಗಳ ಪರವಾಗಿ ಅವಿರೋಧವಾಗಿ ಕ್ರಿಬ್ಕೊ ನಿರ್ದೇಶರಾಗಿ ಆಯ್ಕೆಯಾದ ನಂತರ ಜಿಲ್ಲೆಯ ಕೆಲವು ಪ್ರಾಥಮಿಕ ಸಹಕಾರ ಸಂಘಗಳಿಗೆ ಪೀಟೋಪಕರಣ ಖರೀದಿಗಾಗಿ ಸಂಸ್ಥೆಯ ವತಿಯಿಂದ ಹಣ ಸಹಾಯ , ಜಿಲ್ಲೆಯಲ್ಲಿ ರಸಗೊಬ್ಬರದ ಸಮಸ್ಯೆಯಾಗದಂತೆ ಕೇಂದ್ರ ಸಚಿವ ಸದಾನಂದ ಗೌಡರವರಿಗೆ ಮನವಿ ಸಲ್ಲಿಸಿ ರೈತ ಪರವಾಗಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾಗಿ, ಟಿಎಪಿಸಿಎಂಎಸ್, ಕೆಎನ್‍ಆರ್, ಸೌಹರ್ದಯುತ ಕೋ ಆಪರೇಟಿವ್ ಅಧ್ಯಕ್ಷರಾಗಿ, ವಿದ್ಯಾರ್ಥಿಗಳ ಯುವ ನಾಯಕರಾಗಿ ತಮ್ಮ ತಂದೆಯವರ ಅನುಪಸ್ಥಿತಿಯಲ್ಲಿ ಕೆಲವೊಂದು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ ತಮ್ಮ ಜನ ಸೇವೆಯನ್ನು ಮುಂದುವರೆಸುತ್ತಿದ್ದಾರೆ ಆರ್.ರಾಜೇಂದ್ರ.
ಮಾಜಿ ಮುಖ್ಯ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ಸಿರಾ ಉಪ ಚುನಾವಣೆಯಲ್ಲಿ ಯುವ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಒಡೆದ ಮನಸ್ಸುಗಳನ್ನು ಒಂದು ಮಾಡಿದ ರೂವಾರಿಯಾಗಿ, ತಾಲ್ಲೂಕಿನ ವಿಡಿಯೋ ಕಾನ್ಫರೈನ್ಸ್ ಕಾರ್ಯಕ್ರಮಗಳನ್ನು, ಯುವ ಕಾಂಗ್ರೆಸ್, ಗ್ರಾಮ ಪಂಚಾಯತಿ ಚುನಾವಣೆಗಳನ್ನು ಯಶಸ್ವಿಯಾಗಿಸಿ ಕೈ ಪಕ್ಷವನ್ನು ತಾಲ್ಲೂಕಿನಲ್ಲಿ ಭದ್ರಗೊಳಿಸಿದರು.
2012ರಲ್ಲಿ ಆಧಾರ್ ಕಾರ್ಡ್ ಅರಿವಿನ ಬಗ್ಗೆ ತಿಪಟೂರಿನಿಂದ ತುಮಕೂರಿನ ವರೆಗೆ ಪಾದಯಾತ್ರೆ, ತಾಲ್ಲೂಕಿನ ಬಸ್ಮಂಗಿ ಕಾವಲ್ ನಲ್ಲಿ ಗ್ರಾಮ ವಾಸ್ವ್ಯ, ವಿವಿಧ ಗಣ್ಯರ ಹುಟ್ಟು ಹಬ್ಬಗಳ ದಿನದಂದು ರಕ್ತದಾನ ಶಿಬಿರಗಳನ್ನು ಏರ್ಪಡಿಸಿರುವುದು, ವಿದ್ಯಾರ್ಥಿಗಳ ಶಾಲಾ ಶುಲ್ಕಗಳನ್ನು ಪಾವತಿಸುವುದು, ಇತ್ತೀಚೆಗೆ ತನ್ನ ಜನ್ಮ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಮಾಡಗಾನಹಟ್ಟಿಯ ಶಾಲೆಯನ್ನು ಅಭಿವೃದ್ಧಿ ಹಾಗೂ ಅನಾಥಶ್ರಮ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಲನ್ನು ಕಡು ಬಡುವರಿಗೆ, ಕ್ರೀಡಾಪಟುಗಳಿಗೆ ಧನ ಸಹಾಯ ಮಾಡುವುದನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದಾರೆ.
ಮಧುಗಿರಿ ಕ್ಷೇತ್ರದ ಜನರಿಗೆ ನೆರವು:
ರಾಜಕೀಯದಲ್ಲಿ ಸೋತರು ಗೆದ್ದರೂ ಕ್ಷೇತ್ರವನ್ನು ಬಿಡದೆ ಈ ಹಿಂದೆ ಘೋಷಣೆಯಾಗಿದ್ದ ಲಾಕ್ ಡೌನ್ ಸಮಯದಲ್ಲಿ ಹೋಬಳಿ ವಾರು ಪಕ್ಷಾತೀತಾ ಜಾತ್ಯಾತೀತಾವಾಗಿ ಕೆಎನ್‍ಆರ್ ಮತ್ತು ಆರ್‍ಆರ್ ಅಭಿಮಾನಿಗಳ ಬಳಗದ ವತಿಯಿಂದ ಹಿಂದುಳಿದ ಸಮುದಾಯಗಳ ಜನರಿಗೆ ಅಗತ್ಯ ಆಹಾರ ಕಿಟ್‍ಗಳನ್ನು, ತರಕಾರಿ, ಮಾಸ್ಕ್, ಸ್ಯಾನಿಟೈಜರ್‍ಗಳನ್ನು ತಮ್ಮ ಅಪಾರ ಅಭಿಮಾನಿ ಬಳಗದ ಮೂಲಕ ಪಟ್ಟಣದಲ್ಲಿ ಆಹಾರವನ್ನು ವಿತರಿಸಿ ಜನರ ಮೆಚ್ಚೆಗೆ ಗಳಿಸಿಕೊಂಡರು ಈಗ ಮತ್ತೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ 10 ಆಕ್ಸಿಜನ್ ಸಿಲಿಂಡರ್, 2 ಅಂಬುಲೈನ್ಸ್ , 1000 ಪಿ.ಪಿಕಿಟ್, ಗ್ಲೌಸ್, ಎನ್.95ಮಾಸ್ಕ್, ಸ್ಯಾನಿಟೈಜರ್‍ಗಳನ್ನು ಕೊರೊನಾ ಸೇವೆಯಲ್ಲಿ ಮಂಚೂಣಿಯಲ್ಲಿರುವ ನಾನ ಅಧಿಕಾರಿ ವರ್ಗದವರಿಗೆ ವಿತರಿಸಲು ಸಜ್ಜಾಗಿದ್ದಾರೆ.
ಸಾರ್ವಜನಿಕರಿಗೆ ಸಾಹಾಯ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ನಾವುಗಳು ಕಷ್ಟ ಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೆವೆ ಇಂತಹ ವಿಷಮ ಪರಿಸಿತ್ಥಿಯಲ್ಲಿ ರಾಜೇಂದ್ರರವರು ಮುಂದೆ ಒಂದು ಸಹಾಯ ಮಾಡುತ್ತಿರುವುದು ಒಳ್ಳೆಯ ಕಾರ್ಯವಾಗಿದ್ದು ನಮಗೂ ಧೈರ್ಯ ತುಂಬಿ ದಂತಾಗುತ್ತದೆ.
-ರಮೇಶ್ ಬಾಬು, ತಾಲ್ಲೂಕು ಆರೋಗ್ಯಧಿಕಾರಿ
ಇಡೀ ದೇಶವೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ ಇದೊಂದು ಅತ್ಯುತ್ತಮವಾದ ಜನಪರ ಕಾರ್ಯವಾಗಿದ್ದು ಅವರಿಗೆ ಜನರ ಬಗ್ಗೆ ಇರುವ ಸೇವಾ ಮನೋಭಾವವನ್ನು ತೋರುತ್ತದೆ. ಎಲ್ಲಾ ಅಧಿಕಾರಿ ವರ್ಗದವರಿಗೆ ಮಾನಸಿಕವಾಗಿ ಆತ್ಮ ಸ್ಥೈರ್ಯವನ್ನು ತುಂಬಿದಂತಾಗುತ್ತದೆ.
-ಎನ್.ಮಹಾಲಿಂಗೇಶ್ ಪ್ರಗತಿ ಪರ ಚಿಂತಕರು.
ಕೆಎನ್‍ಆರ್ ಮತ್ತು ಆರ್‍ಆರ್ ಅಭಿಮಾನಿ ಬಳಗದವರು ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಜನರಿಗೆ ಅಗತ್ಯವಿರುವ ಸೇವೆಗಳನ್ನು ಈ ಹಿಂದೆಯೂ ಮಾಡಿದ್ದರೂ ಈಗ ಕೊರೊನಾ 2ನೇ ಅಲೆಯ ಸಂಧರ್ಭದಲ್ಲೂ ಮುಂದಾಗಿದ್ದಾರೆ. ಜನ ಸೇವೆಯೇ ಜನಾರ್ಧನ ಸೇವೆಯಾಗಿದ್ದು ತಂದೆಯವರಂತೆಯೇ ರಾಜೇಂದ್ರರವರು ಸಹ ಇಂತಹ ಅಪತ್ ಕಾಲದಲ್ಲಿ ಜನರ ಕೈ ಹಿಡಿದಿರುವುದು ನಿಜಕ್ಕೂ ಶ್ಲಾಘನೀಯ.
– ಪಿ.ಸಿ ಕೃಷ್ಣರೆಡ್ಡಿ ಅಧ್ಯಕ್ಷರು ತಾಲ್ಲೂಕು ವಕೀಲರ ಸಂಘ.