ಮಧುಗಿರಿ : ಪರಿಹಾರ ಹಣಕ್ಕಾಗಿ ಒತ್ತಾಯಿಸಿ ಕೆಶಿಪ್ ಬೈಪಾಸ್ ರಸ್ತೆಗೆ ತಡೆ

 ಮಧುಗಿರಿ :

     ಮಧುಗಿರಿ ಪಟ್ಟಣದಲ್ಲಿ ಹಾದುಹೋಗಿರುವ ಕೆ .ಶಿಪ್ ಬೈಪಾಸ್ ರಸ್ತೆಗೆ ಜಮೀನು ಬಿಟ್ಟುಕೊಟ್ಟ ರೈತರು ಪರಿಹಾರ ಹಣಕ್ಕಾಗಿ ರಸ್ತೆ ಗೆ ಹಾಕಿ ಪರಿಹಾರ ಹಣ ಬಿಡುಗಡೆಗಾಗಿ ಆಗ್ರಹಿಸಿದ್ದಾರೆ.

      ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನವನದ ಮುಂಭಾಗದಿಂದ ಆರಂಭಗೊಳ್ಳುವ ಬೈಪಾಸ್ ರಸ್ತೆಯ ಬಸವನಹಳ್ಳಿ ಸಮೀಪ ಇರುವ ಕೆಎಸ್‍ಆರ್‍ಟಿಸಿ ಡಿಪೋ ವರೆಗೂ ಇದ್ದೂ ಮಧುಗಿರಿ ಹಿಂದೂಪುರ ರಸ್ತೆಗೆ ಹೊಂದಿಕೊಂಡಿರುವ ಬೈಪಾಸ್ ರಸ್ತೆಯಲ್ಲಿ ಕಳೆದ 4ದಿನಗಳಿಂದ ಕಲ್ಲಿನ ಗುಂಡುಗಳನ್ನು ಹಾಕಿದ್ದಾರೆ. ಇನ್ನೊಂದು ರಸ್ತೆಗೆ ಮಣ್ಣಿನಿಂದ ತುಂಬಿ ಬೈಪಾಸ್ ರಸ್ತೆಯನ್ನು ಬಂದ್ ಮಾಡಲಾಗಿದೆ.

      ಖಾಲಿ ಕಾಗದದ ಮೇಲೆ ಸಹಿ ಆರೋಪ:

      ಹಿಂದೂಪುರ ರಸ್ತೆ ಮತ್ತು ಬಸವನಹಳ್ಳಿ ರಸ್ತೆಗೆ ಸಂಭಂದಿಸಿದಂತೆ ಇದೂವರೆವಿಗೂ ನಾಲ್ವರು ರೈತರಿಗೆ ಮತ್ತು ಗೌರಿಬಿದನೂರು ಹಿಂದೂಪುರ ರಸ್ತೆಯಲ್ಲಿನ ನಾಲ್ವರು ರೈತರಿಗೆ ಸರಕಾರದಿಂದ ಇಲ್ಲಿಯವರೆಗೂ ಸೂಕ್ತ ಪರಿಹಾರ ಹಣ ನೀಡಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ 8 ರೈತರಿಗೆ ಕೆಶಿಪ್ ನವರು ಖಾಲಿ ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡು ಕಾಮಗಾರಿ ನಡೆಸಿದ್ದಾರೆ ಎನ್ನಲಾಗಿದೆ.

      ಭೂಸ್ವಾಧೀನದ ಪರಿಹಾರದ ಹಣವನ್ನು 3ಪಟ್ಟು ನೀಡುವ ಬದಲು 1ಪಟ್ಟಿನಷ್ಟು ಮಾತ್ರ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಈ ಪರಿಹಾರದ ಹಣವನ್ನು 3ಪಟ್ಟು ನೀಡಬೇಕೆಂದು ಕಾನೂನು ಹೇಳುತ್ತಿದೆ. ಇದನ್ನು ಒಪ್ಪಿಕೊಳ್ಳದ ರೈತರು ಶಾಸಕ ವೀರಭದ್ರಯ್ಯನವರ ಗಮನಕ್ಕೆ ಹಲವು ಬಾರಿ ತಂದರೂ ಕೂಡ ಪರಿಹಾರದ ಹಣ ಕೊಡಿಸಲು ಮುಂದಾಗಿಲ್ಲ ಇದರಿಂದ ಬೇಸತ್ತ ರೈತರು ಬೇರೆ ದಾರಿ ಕಾಣದೆ ಬೈಪಾಸ್ ರಸ್ತೆಗೆ ಅಡ್ಡಪಡಿಸಿದ್ದಾರೆನ್ನಲಾಗುತ್ತಿದೆ.

      ಪುರಸಭಾ ಸದಸ್ಯರಾದ ಲಾಲಾಪೇಟೆ ಮಂಜುನಾಥ್ ಮಾತನಾಡಿ ರೈತರಿಗೆ ಸೂಕ್ತ ಪರಿಹಾರ ನೀಡಿ ರಸ್ತೆ ತೆರವಿಗೆ ಮುಂದಾಗಿ. ಹಲವು ವರ್ಷಗಳಿಂದ ರೈತರಿಗೆ ಹಣ ಸಂದಾಯವಾಗಿಲ್ಲ. ಜಮೀನು ಕಳೆದುಕೊಂಡು ಹಣ ಕಳೆದುಕೊಂಡ ರೈತರು ಹತಾಶರಾಗಿದ್ದಾರೆ.ಸೂಕ್ತ ಪರಿಹಾರ ನೀಡಿ ರಸ್ತೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ರೈತರು ಮುಂದಾಗಬೇಕಾಗುತ್ತದೆ ಎಂದು ಸಂಭಂಧಪಟ್ಟವರಿಗೆ ಎಚ್ಚರಿಸಿದ್ದಾರೆ.

      ರೈತರುಗಳಾದ ಹನುಮಂತರಾಯಪ್ಪ, ನರಸಮ್ಮ , ದೊಡ್ಡಹನುಮಂತಪ್ಪ, ಹನುಮಂತರಾಯ, ಪಾಲ್ಕಿರಣ್ಣ, ಹೊನ್ನಕ್ಕ ,ಬೈರಣ್ಣ ,ಮುದ್ದಪ್ಪ ರವರುಗಳಿಗೆ ಸೂಕ್ತ ಪರಿಹಾರ ನೀಡದ ಹೊರತು ರಸ್ತೆ ತೆರವುಗೊಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap