ಮಧುಗಿರಿ :
15 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನ ಲಸಿಕೆ ಹಾಕುತ್ತಿರುವುದರಿಂದ ಅವರು ಮುಂದಿನ 2 ತಿಂಗಳು ರಕ್ತದಾನ ಮಾಡಲು ಸಾಧ್ಯವಿಲ್ಲದ ಕಾರಣ, ರಕ್ತದಾನ ಶಿಬಿರವನ್ನು ಏರ್ಪಾಡು ಮಾಡಲಾಗಿದೆ ಎಂದು ರಕ್ತದಾನಿ ಬಳಗದ ಶಶಿಕುಮಾರ್ ತಿಳಿಸಿದರು.
ಪಟ್ಟಣದ ಮಹಿಳಾ ಸಮಾಜದಲ್ಲಿ ಸಮರ್ಥ ಭಾರತ, ರಕ್ತದಾನಿ ಬಳಗ, ಮಹಿಳಾ ಸಮಾಜ, ಜಿಲ್ಲಾಸ್ಪತ್ರೆ ತುಮಕೂರು ಇವರ ನೇತೃತ್ವದಲ್ಲಿ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಯುನಿಟ್‍ಗಳ ರಕ್ತ ಸಂಗ್ರಹಣೆ ಆಗಿದೆ ಎಂದರು.
ಜಿಲ್ಲಾಸ್ಪತ್ರೆಯ ವೈದ್ಯ ಡಾ||ಶೇಖ್ ಮಾತನಾಡಿ, ಮಧುಗಿರಿ ತಾಲ್ಲೂಕಿನ ರಕ್ತದಾನಿಗಳಿಗೆ ಅಭಿನಂದನೆಗಳು. ರಕ್ತದ ಅವಶ್ಯಕತೆ ತೀರಾ ಅಗತ್ಯತೆ ಇರುವುದರಿಂದ ನೀವುಗಳು ರಕ್ತದಾನ ಏರ್ಪಡಿಸಿ ಯಶಸ್ವಿಗೊಳಿಸಿದ್ದಕ್ಕೆ ಆಯೋಜಕರಿಗೆ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಜಿಲ್ಲಾ ಸಂಚಾಲಕ ನವೀನ್, ತಾಲ್ಲೂಕು ನೌಕರರ ಸಂಘದ ಕಾರ್ಯದರ್ಶಿ ನಟರಾಜು, ಸಮರ್ಥ ಭಾರತದ ಹಿತೇಶ್, ಕಾರ್ತಿಕ್, ಡಾ.ಮೋಹನ್, ಸೀತಾರಾಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ