1 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ : ಆರೋಪಿ ಬಂಧನ

 ಮಧುಗಿರಿ : 

      ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ 1.03 ಲಕ್ಷ ರೂ. ಬೆಲೆ ಬಾಳುವ 216 ಲೀಟರ್‍ನಷ್ಟು ಮದ್ಯ, 46.80 ಲೀಟರ್‍ನಷ್ಟು ಬಿಯರ್‍ನ್ನು ಸೋಮವಾರ ಸಂಜೆ ನಡೆಸಿದ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.

      ಕೊರೋನ ಲಾಕ್ ಡೌನ್‍ನಿಂದಾಗಿ ಮದ್ಯ ಮಾರಾಟಕ್ಕೆ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. ಅವಧಿ ಮುಗಿದ ನಂತರ ಆಂಧ್ರದವರು ಗಡಿ ಭಾಗಕ್ಕೆ ಬಂದು ಮದ್ಯವನ್ನು ದುಪ್ಪಟ್ಟು ದರಕ್ಕೆ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಹಣ ಗಳಿಸಬಹುದೆಂಬ ಉದ್ದೇಶದಿಂದ ಕೆಲವು ಯುವಕರು ಸಹ ಈ ದಂಧೆಯಲ್ಲಿ ಪಾಲ್ಗೊಂಡಿರುವುದು ವಿμÁದನೀಯವೆಂದು ಗ್ರಾಮಸ್ಥರು ಅಬಕಾರಿ ಅಧಿಕಾರಿಗಳಿಗೆ ದಾಳಿ ವೇಳೆ ದೂರಿದ್ದಾರೆ.

     ಪ್ರಕರಣಗಳು ದಾಖಲು:

      ತಾಲ್ಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿ ಗ್ರಾಮದ ತಾಯಮ್ಮರವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಅಕ್ರಮವಾಗಿ ವಿವಿಧ ಬ್ರ್ಯಾಂಡ್‍ನ 146.80 ಲೀಟರ್‍ನಷ್ಟು ಮದ್ಯ ಹಾಗೂ 46.80 ಲೀಟರ್ ಬಿಯರನ್ನು ಮಾರಾಟದ ಅಕ್ರಮವಾಗಿ ದಾಸ್ತಾನು ಮಾಡಿದ್ದು ಕಂಡು ಬಂದ ಮೇರೆಗೆ ಆರೋಪಿ ಲೋಕೇಶ್‍ನನ್ನು ವಶ ಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 74,248 ರೂ.ಗಳಷ್ಟಿದೆ. ಮಧುಗಿರಿಯ ಅಬಕಾರಿ ಉಪ ನಿರೀಕ್ಷಕ ಡಿ.ನಾಗಲಿಂಗಾಚಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಚಂದ್ರಬಾವಿ ಗ್ರಾಮದ ಆಂಧ್ರಪ್ರದೇಶ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವಂ ತೆ ರಾಜ್ಯ ಹೆದ್ದಾರಿ 3 ರ ಪಕ್ಕದಲ್ಲಿರುವ ರೂಮ್‍ನಲ್ಲಿ 69.12 ಲೀಟರ್ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಇದರ ಮೌಲ್ಯ 29,354 ರೂ.ಗಳಾಗಿರುತ್ತದೆ. ಈ ಪ್ರಕರಣದ ಆರೋಪಿ ಪರಾರಿಯಾಗಿದ್ದು, ಪ್ರಕರಣವನ್ನು ಅಬಕಾರಿ ನಿರೀಕ್ಷಕ ಎಸ್.ರಾಮಮೂರ್ತಿ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link