ಮಧುಗಿರಿ :

ನೀಲಾಕಾಶದಲ್ಲಿ ಸೂರ್ಯನ ಸುತ್ತ ಬೆಳ್ಳಿ ಬಳೆ ನಿರ್ಮಾಣವಾಗಿರುವ, ಬಳೆಯ ವಿಭಿನ್ನ ರೀತಿಯ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಪಟ್ಟಣದ ನಾಗರಿಕ ಮಂಜುನಾಥ್ ಮೇ 23 ರಂದೆ 2011 ರ ಸೂರ್ಯನ ಸುತ್ತಲಿನ ಬಳೆಯ ಫೋಟೋವನ್ನು ಅಪ್‍ಲೋಡ್ ಮಾಡಿದ್ದರು. ಮೇ 24 ರಂದು ಇದೇ ರೀತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ವಾಟ್ಸ್‍ಆ್ಯಪ್ ಸ್ಟೇಟಸ್‍ಗಳಲ್ಲಿ ನಾಗರಿಕರು ಅಪ್‍ಲೋಡ್ ಮಾಡಿ, ಇದು ಕಲಿಯುಗಕ್ಕೆ ಅಂತ್ಯನಾ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಶಿಕ್ಷಕ ಮುಂಜುಮ್ ದಾರ್ ಪತ್ರಿಕೆಯೊಂದಿಗೆ ಮಾತನಾಡಿ, ಇದೊಂದು ಬೆಳಕಿನ ಸಾಮಾನ್ಯ ವಿದ್ಯಮಾನವಾಗಿದೆ. ಇಂಥಾ ಘಟನೆಗಳು ಆಕಾಶದಲ್ಲಿ ಕಂಡು ಬರುತ್ತವೆ. ಕೆಲವೊಮ್ಮೆ 24 ಘಂಟೆಗಳೊಗೆ ಮಳೆಯಾಗುವ ಸೂಚನೆ ನೀಡುತ್ತದೆ. ಬಳೆಯು ಒಮ್ಮೊಮ್ಮೆ ಚಂದ್ರ ಹಾಗೂ ಸೂರ್ಯನ ನಡುವೆಯು ಕಂಡು ಬರುತ್ತದೆ. ಸೂರ್ಯನ ಸುತ್ತ ಕಾಣುವ ಉಂಗುರವು ಮೋಡಗಳಲ್ಲಿ ಸಣ್ಣ ಸಣ್ಣ ಮಂಜುಗಡ್ಡೆಯ ಸ್ಪಟಿಕಗಳಿಂದ ಬೆಳಕಿನ ವಕ್ರೀಭವನ, ಪ್ರತಿಫಲನಗಳ ಚದುರಿಕೆಯಂತಹ ಸಂಯೋಜನೆಯಿಂದ ನಡೆದು ವಾತಾವರಣದ ವೈಪರೀತ್ಯದ ಈ ವಿದ್ಯಮಾನ ಕಂಡು ಬರುತ್ತದೆ. ಬೆಳಕು ಭೂಮಿಗೆ ತಲುಪುವಾಗ ಗಾಳಿ ಮತ್ತು ಮೋಡಗಳ ಚದುರುವಿಕೆಯು ಆಕಾಶ-ಭೂಮಿಗಳ ನಡುವೆ ತೆಳುವಾದ ಮೋಡಗಳಲ್ಲಿ ಸಣ್ಣ ಸಣ್ಣ ಸ್ಪಟಿಕಗಳಿಂದ ನೀರು ಮತ್ತು ಗಾಳಿಯಲ್ಲಿನ ಕಣಗಳ ಚದುರುವಿಕೆಯಿಂದ ಇವುಗಳ ನಡುವೆ ಬೆಳಕು ಹರಿದಾಗ ಈ ರೀತಿಯ ಬಳೆ ಕಂಡು ಬರುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
