ಮಧುಗಿರಿ :
ತಾಲ್ಲೂಕಿನ ಕೊರೋನಾ ಎರಡನೆ ಅಲೆಯ ಹಿನ್ನೆಲೆಯಲ್ಲಿ ಕೆಂಪು ವಲಯ ಮತ್ತು ಹಾಟ್ ಸ್ಪಾಟ್ ಗ್ರಾಮಗಳಿಗೆ ಜಿಪಂ ಸಿಇಓ ಕೆ.ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್‍ಗಳ ಗ್ರಾಮಗಳಲ್ಲಿ ಕೋವಿಡ್ 19 ಧನಾತ್ಮಕ ಪ್ರಕರಣಗಳು ದೃಢಪಟ್ಟ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಸಾರ್ವಜನಿಕರಲ್ಲಿ ಕೋವಿಡ್ ನಿಯಂತ್ರಿಸುವ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೋವಿಡ್-19 ಧನಾತ್ಮಕ ಪ್ರಕರಣಗಳು ಇಳಿಮುಖ ವಾಗುತ್ತಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಕೋವಿಡ್ ಮುಕ್ತ ಗ್ರಾಪಂ ಆಗಿ ಮಾಡಲು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಓ ಡಿ.ದೊಡ್ಡಸಿದ್ದಯ್ಯ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಹಾಗೂ ಕೊರೋನಾ ವೈರಸ್ ಹರಡದಂತೆ ಗ್ರಾಮಗಳ ಪ್ರಮುಖ ರಸ್ತೆಗಳನ್ನು ಸ್ಯಾನಿಟೈಸಿಂಗ್ ಮಾಡಿಸಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದರು.
ತಾಪಂ ಎಡಿಎ ಮಧುಸೂದನ್, ಸಿಡಿಪಿಓ ಅನಿತಾ, ಆರ್‍ಐ ಸಿದ್ದರಾಜು ಹಾಗೂ ಪಿಡಿಓ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ