ಮಧುಗಿರಿ : ಹಾಸ್ಟ್ಟೆಲ್‍ನಲ್ಲಿ ಕ್ವಾರಂಟೈನ್ : ಭೀತರಾಗಿರುವ ಸ್ಥಳೀಯರು

ಮಧುಗಿರಿ :

     ಇಲ್ಲಿನ ಹಾಸ್ಟ್ಟೆಲ್‍ನಲ್ಲಿ ಕೆಲ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಹಾಸ್ಟ್ಟೆಲ್ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.

      ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪದಲ್ಲಿರುವ ಹಾಸ್ಟ್ಟೆಲ್‍ನಲ್ಲಿ, ಬೇರೆ ಪ್ರದೇಶಗಳಿಗೆ ಹೋಗಿ ಬಂದಿರುವ 6 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಗುಜರಾತಿನ ಅಹಮದಾಬಾದ್ ನಿಂದ ಬಂದಿರುವ ಇಬ್ಬರು ಮತ್ತು ತಮಿಳುನಾಡಿನ ಕರೂರ್‍ನಿಂದ ಬಂದಿರುವ ನಾಲ್ವರನ್ನು ಹಾಸ್ಟ್ಟೆಲ್‍ನಲ್ಲಿ ಇರಿಸಲಾಗಿದೆ.

      ಹಾಸ್ಟೆಲ್‍ನಲ್ಲಿರುವ 6 ಜನರನ್ನು ಪ್ರತ್ಯೇಕವಾಗಿ ಇರಿಸಿದ್ದು, ಬೆಂಗಳೂರಿನಿಂದ ಬಂದಿರುವ ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇವರನ್ನು ಪ್ರತ್ಯೇಕ ವಾಹನದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯಾಧಿಕಾರಿಗಳು ಈಗಾಗಲೆ ಇವರ ಗಂಟಲು ದ್ರವವನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಿದ್ದಾರೆ. ಫಲಿತಾಂಶ ಇನ್ನೆರಡು ದಿನಗಳಲ್ಲಿ ಏನೆಂದು ತಿಳಿಯಲಿದೆ.

      ಇವರಲ್ಲಿ ಕೆಲವರು ಪ್ರತ್ಯೇಕವಾಗಿ ನಮಾಜ್ ಮಾಡಲು ಅವಕಾಶ ಕೋರುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿಯೇ ಇರಲು ತಮಗೆ ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

      ಲಾಕ್ ಡೌನ್ ಸಡಿಲಿಕೆಯಿಂದಾಗಿ ಬೆಳಗ್ಗೆ 7ರಿಂದ ಸಂಜೆ 7 ರವರೆವಿಗೂ ಅಂಗಡಿಗಳು ತೆರೆಯಲು ಅವಕಾಶ ನೀಡಿರುವುದರಿಂದ ಕೆಲ ಜನರು ಸರಕಾರದ ಆದೇಶಗಳನ್ನು ಗಾಳಿ ತೂರಿ ಮನ ಬಂದಂತೆ ಸಂಚರಿಸುತ್ತಿದ್ದಾರೆ. ಅಂಗಡಿ ಮಾಲೀಕರು ಈಗ ನೀಡಿರುವ ಸಮಯವನ್ನು ಕಡಿತ ಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

        ಇತರೆ ಪ್ರದೇಶಗಳಿಂದ ಬಂದವರ ಬಗ್ಗೆ ಜನರಲ್ಲಿ ಅನೇಕ ಗೊಂದಲಗಳು ಉಂಟಾಗಿದೆ. ಹೆಚ್ಚಾಗಿ ಸ್ಥಳಿಯರೆ ಇರುವುದರಿಂದ ಇವರನ್ನು ಭೇಟಿ ಮಾಡಲು ಅನೇಕರು ಪಟ್ಟಣದ ಮಧ್ಯ ಭಾಗದಲ್ಲಿರುವ ಹಾಸ್ಟೆಲ್‍ಗೆ ಬರುತ್ತಾರೆ. ಇವರನ್ನು ಇಲ್ಲಿ ಇಡುವುದರ ಬದಲು ಬೇರೆ ಕಡೆ ವರ್ಗಾಯಿಸಿ. ಹಾಸ್ಟೆಲ್ ಸಮೀಪ ಸೂಕ್ತ ಬಂದೋಬಸ್ತ್ ಮಾಡಬೇಕು.

      -ಕೇಬಲ್ ಸುಬ್ಬು, ತಾಲ್ಲೂಕು ಅಧ್ಯಕ್ಷ, ಕನ್ನಡ ಗಡಿನಾಡು ರಕ್ಷಣಾ ವೇದಿಕೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 
 

Recent Articles

spot_img

Related Stories

Share via
Copy link