ಮಧುಗಿರಿ ಮಾರ್ಗ KSRTC ಬಸ್ ದರ 42 ರಿಂದ 35 ರೂ. ಗೆ ಇಳಿಕೆ!!

ತುಮಕೂರು : 

      ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ತುಮಕೂರು-ಮಧುಗಿರಿ ಹಾಗೂ ತುಮಕೂರು-ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ ಎಂದು ನಿಗಮದ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಫಕೃದ್ದೀನ್ ತಿಳಿಸಿದ್ದಾರೆ.

      ಈ ಪರಿಷ್ಕøತ ದರ ಡಿಸೆಂಬರ್ 4 ರಿಂದ ಜಾರಿಗೆ ಬರಲಿದೆ. ಪರಿಷ್ಕರಣೆಯಾಗಿರುವ ದರದನ್ವಯ ತುಮಕೂರು-ಮಧುಗಿರಿ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 42 ರೂ.ಗಳ ಪ್ರಯಾಣ ದರವನ್ನು 35 ರೂ.ಗಳಿಗೆ ಇಳಿಸಲಾಗಿದೆ.

      ಅದೇ ರೀತಿ ತುಮಕೂರು-ಪಾವಗಡ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ ನಿಗಧಿತ ನಿಲುಗಡೆ(ವೇಗಧೂತ)ಯಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 47 ರೂ.ಗಳ ಪ್ರಯಾಣ ದರವನ್ನು 40 ರೂ.ಗಳಿಗೆ ಇಳಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಪರಿಷ್ಕøತ ಸಾರಿಗೆ ದರ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap