ಮಧುಗಿರಿ : ಕಾಮಗಾರಿ ಆರಂಭಕ್ಕೂ ಮುನ್ನವೇ ಕಾರ್ಮಿಕರ ಖಾತೆಗೆ ಹಣ ಜಮಾ!!

ಮಧುಗಿರಿ :  

     ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿನ ಕಾಮಗಾರಿ ಆರಂಭಕ್ಕೂ ಮುನ್ನಾವೆ ಕಾರ್ಮಿಕರ ಖಾತೆಗೆ ಕೂಲಿ ಹಣವನ್ನು ಜಮಾ ಮಾಡಿರುವುದು ಕಂಡು ಬಂದಿದೆ.

     ತಾಲ್ಲೂಕಿನ ಮಿಡಗೇಶಿ ಹೋಬಳಿಯ ಬೇಡತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಡತ್ತೂರು ಗ್ರಾಮದ ಚೆನ್ನರಾಯಪ್ಪನ ಜಮೀನಿನಿಂದ ಶಿವಶಂಕರ್ ಎನ್ನುವವರ ಜಮೀನಿನ ವರೆಗೆ ಕಾಮಗಾರಿ ಸಂಖ್ಯೆ 93393042892298838 ದೊಡ್ಡಕೆರೆ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗಿದೆ ಎಂದು ಹೇಳಿ 2021ರ ಫೆ.20 ರಂದು ಸಂಭಂಧಪಟ್ಟ ಕಾಮಗಾರಿಯ ಕೂಲಿ ಕಾರ್ಮಿರ ಖಾತೆಗಳಿಗೆ ಒಟ್ಟು 22 ಸಾವಿರ ರೂಗಳನ್ನು ಪಾವತಿಸಲಾಗಿದೆ ಎನ್ನಲಾಗುತ್ತಿದೆ.

      ನಿರ್ವಹಿಸದ ಕಾಮಗಾರಿಗೆ ಹಣ ಬಿಡುಗಡೆ ಮಾಡಿರುವುದು ಹಾಗೂ ಕಾಮಗಾರಿಗೆ ಸಂಬಂಧಪಟ್ಟ ನಾಮಫಲಕಗಳನ್ನು ಸ್ಥಳದಲ್ಲಿ ಆಳವಡಿಸಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ ಈ ಬಗ್ಗೆ ಗ್ರಾಮದ ಜಗನ್ ಮೋಹನ್ ಎನ್ನುವವರು ತಾಪಂ ಇಓ ರವರಿಗೆ ದೂರು ನೀಡಿದ್ದು ಅಂದಿನ ದಿನವೇ ರಾತ್ರಿ ಸುಮಾರು 10ರ ಸಮಯದಲ್ಲಿ ಮಾಜಿ ಗ್ರಾಪಂ ಸದಸ್ಯರೊಬ್ಬರು ಜೆಸಿಬಿ ಮೂಲಕ ಕಾಮಗಾರಿಯ ಮಾಡಲು ಮುಂದಾಗಿದ್ದು ಇದನ್ನು ತಡೆಯಬೇಕು.

      ಕಾಮಗಾರಿಯು ಆಕ್ರಮವಾಗಿದೆ ನೆಡೆಯದ ಕಾಮಗಾರಿಗೆ ಹಣ ಪಾವತಿ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುಬೇಕೆಂದು ಇಒ ರವರನ್ನು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link