ಮಧುಗಿರಿ :
ಯಾತ್ರಿ ನಿವಾಸ ಹಾಗೂ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವುದು ಬೇಡ ಎಂದು ಸ್ಥಳೀಯ ನಿವಾಸಿಗಳು ಕೆಲ ಹೊತ್ತು ಪ್ರತಿಭಟಿಸಿದರು.
ಮುಖಂಡ ಟಿ.ಗಿರೀಶ್ ತಿಮ್ಮರಾಯಪ್ಪ ಮಾತನಾಡಿ, ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ದೇವಾಲಯದ ಆವರಣದ ಅಕ್ಕ ಪಕ್ಕದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಬಡವರು ವಾಸ ಮಾಡುತ್ತಿದ್ದು, ಕಣ್ಣಿಗೆ ಕಾಣದ ಈ ಮಹಾಮಾರಿ ಕೊರೊನಾ ವೈರಸ್ ಸೋಂಕು ಇವರಿಗೂ ಹರಡಿದರೆ ಯಾರು ಹೊಣೆ? ವಿದ್ಯಾರ್ಥಿ ನಿಲಯದಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆಂಬ ಮಾಹಿತಿ ಇದೆ. ಈ ಸುದ್ದಿಯಿಂದ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ತಕ್ಷಣವೆ ಅಧಿಕಾರಿಗಳು ಜನ ಸಂದಣಿ ಇಲ್ಲದ ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಇತರೆ ಪ್ರದೇಶಗಳಿಂದ ಬಂದಂತಹ ಜನರನ್ನು ಕ್ವಾರಂಟೈನ್ ಮಾಡಿ ಬಡ ಜನರನ್ನು ಸೋಂಕಿನಿಂದ ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.
ನಿವಾಸಿಗಳಾದ ನಾಗರಾಜು, ರಂಗನಾಥ, ಮೂರ್ತಿ, ರವಿಕುಮಾರ್, ಅಂಜನ್‍ಮೂರ್ತಿ, ಅಂಜಿ, ವರಾಲಮ್ಮ, ಲಕ್ಷ್ಮಮ್ಮ, ನಾಗಮಣಿ, ಕುಮಾರ್, ನಾಗರಾಜು, ಶಿವಕುಮಾರ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ