ಮಡಿಕೇರಿ ರಾಜಶೀಟ್‌ ಕಾಮಗಾರಿಯಲ್ಲಿ ಅಕ್ರಮದ ವಾಸನೆ….!

ಮಡಿಕೇರಿ

    ಮಡಿಕೇರಿ ರಾಜಾಸೀಟು ಪ್ರವಾಸಿಗರ ನೆಚ್ಚಿನ ತಾಣ. ಮಡಿಕೇರಿಗೆ ಬಂದಮೇಲೆ‌ ಒಂದು ಬಾರಿಯಾದರೂ ರಾಜಾಸೀಟ್​ಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಸುಂದರ ಸೂರ್ಯಾಸ್ತವನ್ನು ವೀಕ್ಷಣೆ ಮಾಡುವುದು ಅಂದರೆ ಖುಷಿ. ಈ ಸಂಭ್ರಮವನ್ನು ಹೆಚ್ಚು ಮಾಡಲೆಂದೇ ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ‌ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಜತೆಗೂಡಿ ‘ಗ್ರೇಟರ್ ರಾಜಾಸೀಟ್’ ಅಭಿವೃದ್ಧಿ ಪಡಿಸಿವೆ.

    ಐದು ಕೋಟಿ ರೂ. ವೆಚ್ಚದ ಈ ಕಾಮಗಾರಿ ಬಹುತೇಕ ಸಂಪೂರ್ಣವಾಗಿದ್ದು ಈಗಾಗಲೇ ಲೋಕಾರ್ಪಣೆಗೊಂಡಿದೆ. ಆದರೆ, ಕಾಮಗಾರಿಯಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿಯಷ್ಟು ಅಕ್ರಮ ನಡೆದಿದೆ ಎಂದು ಅಂತ ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಸದ್ಯ ಮಹಿನಾ ಅವರು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

   ಈ ದೂರನ್ನು ಕೈಗೆತ್ತಿಕೊಂಡಿರುವ ಅಧಿಕಾರಿಗಳು ಈಗಾಲೇ ತನಿಖೆ ಶುರು ಮಾಡಿದ್ದಾರೆ. ಆದರೆ, ಯಾವಾಗ ವಿಚಾರಣೆ ಶುರುವಾಯಿತೋ ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಮುಖ್ಯ ಎಂಜಿನಿಯರ್ ಏಕಾಏಕಿ ಫೈಲ್​ಗಳನ್ನ ಈಗಾಗಲೇ ನಿವೃತ್ತರಾಗಿರುವ ಮುಖ್ಯ ಎಂಜಿನಿಯರ್​ಗಳ ಮನೆಗೆ ಕೊಂಡೊಯ್ದು ಅದಕ್ಕೆ ಬಲವಂತದಿಂದ ಸಹಿ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಡಗು ಜಿಲ್ಲಾಧಿಕಾರಿ ಹಾರಿಕೆಯ ಉತ್ತರ ನೀಡಿದ್ದಾರೆ. 

   ಒಟ್ಟಿನಲ್ಲಿ ಕೊಡಗು ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಿದೆ. ಪ್ರವಾಸಿಗರ ಮನ ತಣಿಸಲು ಹೊಸ ಹೊಸ ಯೋಜನೆಗಳು ಅನುಷ್ಠಾಗೊಳುತ್ತಿವೆ. ಪ್ರವಾಸೋದ್ಯಮದ ಜತೆಗೆ ಕೊಡಗಿನ‌ ಅಭಿವೃದ್ಧಿಯೂ ಆಗುತ್ತಿದೆ. ಆದರೆ, ಇಲ್ಲಿಯೂ ಅಕ್ರಮ, ಭ್ರಷ್ಟಾಚಾರದ ವಾಸನೆ ಬಂದಿರುವುದು ವಿಪರ್ಯಾಸ.

Recent Articles

spot_img

Related Stories

Share via
Copy link