ಮಹಾಶಿವರಾತ್ರಿ ಶ್ರಿ ಹೋಳೆನಂಜುಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ.

ಕೊರಟಗೆರೆ:-

    ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಪುಣ್ಯಕ್ಷೆತ್ರ ಶ್ರಿ ಹೊಳೆನಂಜಂಡೇಶ್ವರ ಸ್ವಾಮಿ ಸನ್ನಿದಿಯಲ್ಲಿ ವಿಶೇಪೂಜಾ ಕೈಂಕರ್ಯಗಳು ಜರುಗಿದವು.

    ಕೊರಟಗೆರೆ ತಾಲೂಕಿನ ಕೋಳಾಲ ಹೊಬಳಿ ಚಿನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆದ್ಮೆನಹಳ್ಳಿ ಗ್ರಾಮದ ಸುಂದರ ಪ್ರಕೃತಿಯ ನಡುವೆ ನೆಲೆಸಿರುವ ಸ್ವಾಮಿಯವರ ಸನ್ನಿದಾನದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಅದ್ದೂರಿಯಾಗಿ ಪೂಜಾಕಾರ್ಯಗಳು ನಡೆಯುತ್ತವೆ .

     ಮಹಾಶಿವರಾತ್ರಿ ಪ್ರಯುಕ್ತ ಹೊಳ್ಳೆ ನಂಜುಂಡೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮುಂಜಾನೆಯಿಂದಲೆ ಗಂಗಾಭಿಷೆಕ.ಕ್ಷಿರಾಭಿಷೆಕ.ಬಿಲ್ವಾರ್ಚನೆ. ಮಹಾಮಂಗಳಾರತಿ ಸೆರಿದಂತೆ ವಿವಿದ ಪೂಜಾ ಸೆವೆಗಳು ಶ್ರದ್ದಾಭಕ್ತಿಯಿಂದ ನೆರವೆರಿದವು‌

   ಬೆಂಗಳೂರು .ತುಮಕೂರು .ಕೊರಟಗೆರೆ .ದೊಡ್ಡಬಳ್ಳಾಪುರ. ಚಿಕ್ಕಬಳ್ಳಾಪುರ ಸೆರಿದಂತೆ ರಾಜ್ಯದ ವಿವಿದೆಡೆ ಅಪಾರ ಭಕ್ತ ಸಮೂಹವಿದ್ದು ಸುಡುವ ಬಿಸಿಲನ್ನು ಲೆಕ್ಕಿಸದೆ ಉಪವಾಸದೊಂದಿಗೆ ಶ್ರೀ ಕ್ಷೆತ್ರಕ್ಕೆ ಆಗಮಿಸಿ ದೆವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

     ಹೊಳೆ ನಂಜುಂಡೇಶ್ವರ ಸ್ವಾಮಿಗೆ ಹೊಳೆಯ ದಡದಲ್ಲಿ ನೆಲೆಸಿರುವುದರಿಂದ ಈ ಕ್ಷೆತ್ರಕ್ಕೆ ಹೊಳೆನಂಜುಂಡೇಶ್ವರ ಎಂದು ಹೆಸರು ಬಂತು ಎಂಬುದು ಇತಿಹಾಸವಾದರೆ, ಅಪಾರ ಶಕ್ತಿ ಕ್ಷೇತ್ರವೂ ಹೌದು ಕೆಲವೊಂದು ವೈದ್ಯಲೊಕಕ್ಕೆ ಸವಾಲದ ಕಾಯಿಲೆಗಳು ಗುಣವಾದ ನಿದರ್ಶನ ಗಳು ಸಾಕಷ್ಟು ಇವೆ, ಭಕ್ತಿಯಿಂದ ಹರಕೆ ಕಟ್ಟಿ .ಪೂಜೆ ಸಲ್ಲಿಸಿ ನಿಯಮದಂತೆ ನಡೆದು ಕೊಂಡರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬುದು ಈ ಭಾಗದ ಭಕ್ತರ ನಂಭಿಕೆಯಾಗಿದೆ.

     ದೇವರಿಗೆ ವಿವಿಧ ಬಗೆಯ ಪುಷ್ಪಗಳು.ಹಣ್ಣುಗಳಿಂದ ಆಕರ್ಷಕ ಅಲಂಕಾರ ಮಾಡಲಾಗಿದ್ದು ಸರದಿ ಸಾಲಿನಲ್ಲಿ ನಿಂತು ಭಕ್ತರು ದೆವರ ದರ್ಶನ ಪಡೆದು ಪುರಿತ ಭಾವನೆಯಲ್ಲಿ ಸಾಗುತ್ತಿದ್ದು ಕಂಡು ಬಂತು, ಇಲ್ಲಿನ ಸಾವಿರಾರು ಭಕ್ತರಿಗೆ ಕುಡಿಯುವ ನೀರು.ವಾಹನ ನಿಲುಗಡೆ ಸೆರಿದಂತೆ ಮೂಲಭೂತ ಸೌಕರ್ಯಗಳ ನ್ನು ದೆವಾಲಯದ ಪ್ರಧಾನ ಅರ್ಚಕರು ಹಾಗೂ ದೆವಾಲಯದ ಆಡಳಿತ ಮಂಡಳಿವತಿಯಿಂದ ಕಲ್ಪಿಸಲಾಗಿತ್ತು.