ಉತ್ತರ ಪ್ರದೇಶ:
ಮಹಾಕುಂಭ ಎಂಬ ಪದ ಕೇಳುತ್ತಿದ್ದಂತೆ 15 ವರ್ಷಗಳಿಂದ ನೆನಪಿನ ಶಕ್ತಿ ಕಳೆದುಕೊಂಡು ಬದುಕುತ್ತಿದ್ದ ವ್ಯಕ್ತಿಗೆ ಎಲ್ಲವೂ ನೆನಪಿಗೆ ಬಂದಿದ್ದು, ತನ್ನ ಕುಟುಂಬದವರನ್ನು ಅರಸಿ ಊರಿಗೆ ತೆರಳಿದ್ದಾರೆ. ಇದನ್ನು ಎಲ್ಲರೂ ಪವಾಡವೆಂದೇ ಹೇಳುತ್ತಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಕಾಣೆಯಾಗಿದ್ದ ಜಾರ್ಖಂಡ್ ವ್ಯಕ್ತಿ ಈಗ ಮರಳಿ ಮನೆಗೆ ಬಂದಿದ್ದಾರೆ.
ಕೊಡೆರ್ಮಾ ನಿವಾಸಿ ಪ್ರಕಾಶ್ ಮಹಾತೋ ಅವರು ಕೆಲಸದ ನಿಮಿತ್ತ ಕೋಲ್ಕತ್ತಾಗೆ ಹೋಗುವಾಗ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೂ ಅಲ್ಲೆಲ್ಲೋ ಕಣ್ಮರೆಯಾಗಿದ್ದರು. ಈಗ ಮಹಾಕುಂಭ ಎಂಬ ಪದವನ್ನು ಕೇಳಿದಾಕ್ಷಣ ಇದ್ದಕ್ಕಿಂತದ್ದಂತೆ ಅವರ ನೆನಪಿನ ಶಕ್ತಿ ಮರಳಿದ್ದು, ಕೂಡಲೇ ಊರನ್ನು ಹುಡುಕಿಕೊಂಡು ತೆರಳಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ.
ಮಹಾತೋ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗದಲ್ಲಿದ್ದರು ಮತ್ತು ಮೇ 9, 2010 ರಂದು ನಾಪತ್ತೆಯಾಗಿದ್ದರು. ಅವರ ಕುಟುಂಬವು ಅವರು ಕಾಣೆಯಾಗಿದ್ದಾರೆ ಎಂದು ಮಾರ್ಕಾಚೊ ಪೊಲೀಸರಿಗೆ ದೂರು ನೀಡಿತು, ಅವರು ವ್ಯಾಪಕ ಹುಡುಕಾಟ ನಡೆಸಿದರು, ಆದರೆ ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಪತ್ತೆಯಾಗಿರಲಿಲ್ಲ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ ಭಾಗವಹಿಸುವ ಯೋಜನೆಗಳನ್ನು ಮಹತೋ ಎದುರು ಕೆಲವರು ಚರ್ಚಿಸುತ್ತಿರುವಾಗ, ಮಹತ್ವದ ತಿರುವು ಸಿಕ್ಕಿತ್ತು, ಮಾತು ಕತೆ ಸಮಯದಲ್ಲಿ ತಮ್ಮ ಮನೆ ಅದೇ ಮಾರ್ಗದಲ್ಲಿದ್ದು, ತಾವು ಕೂಡ ಕುಂಭ ಮೇಳಕ್ಕೆ ಹೋಗಬೇಕು ಎಂದು ಹೇಳಲು ಶುರು ಮಾಡಿದ್ದರು.
ಅಲ್ಲಿದ್ದವರು ಕೂಡಲೇ ಮಹತೋ ಬಳಿ ಮಾಹಿತಿ ಪಡೆದು, ಮಾರ್ಕಾಚೋ ಪೊಲೀಸರಿಗೆ ಮಾಹಿತಿ ನೀಡಿ ಕೊನೆಗೂ ಕುಟುಂಬದವರ ಜತೆ ಒಂದಾಗುವಂತೆ ಮಾಡಿದರು. ಅವರು 10 ವರ್ಷವಾದರೂ ಸಿಕ್ಕಿರಲಿಲ್ಲವೆಂದು ಕುಟುಂಬವು ಇತ್ತೀಚೆಗಷ್ಟೇ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿತ್ತು.
