ಶಿರಸಿ:
19-08-2025 ರಂದು ಬನವಾಸಿಯ ಕಾಂಗ್ರೆಸ್ ಕಚೇರಿಯಲ್ಲಿ,ಶ್ರಾವಣ ಮಾಸದ ಅಂಗವಾಗಿ, ಮಹಾಲಕ್ಷ್ಮೀ ಪೂಜೆ ಹಾಗೂ ಸುಮಂಗಲಿಯರಿಗೆ ಅರಿಶಿಣ ಕುಂಕುಮ ನೀಡುವ ಕಾರ್ಯಕ್ರಮ ಮಹಿಳಾ ಕಾಂಗ್ರೆಸ್ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಈ ಕಾರ್ಯಕ್ರಮ ದಲ್ಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶ್ರೀಲತಾ ಕಾಳೇರಮನೆ, ಮಾಜಿ ಅಧ್ಯಕ್ಷರಾದ ಸಿ.ಎಫ್.ನಾಯ್ಕ,ಹಾಲಿ ಅಧ್ಯಕ್ಷರಾದ ಗಣಪತಿ ಈರಪ್ಪ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ರೂಪಾ ನಾಯ್ಕ, ಮುಖಂಡರಾದ ಬಿ ಶಿವಾಜಿ ಬನವಾಸಿ, ಹಾಗೂ ಮಹಿಳಾ ಮುಖಂಡರುಗಳು ಪಾಲ್ಗೊಂಡಿದ್ದರು.








