ತೆಲಂಗಾಣ :
ಮಹೇಶ್ ಬಾಬು ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಅವರ ಕೂದಲು ಸದಾ ಗಮನ ಸೆಳೆಯುತ್ತದೆ. ಪ್ರತಿ ಚಿತ್ರಕ್ಕೆ ಅವರು ಭಿನ್ನ ಗೆಟಪ್ ತಾಳುತ್ತಾರೆ. ಅವರದ್ದು ನಿಜವಾದ ಕೂದಲೋ ಅಥವಾ ಫೇಕ್ ಕೂದಲೋ ಎನ್ನುವ ಬಗ್ಗೆ ಚರ್ಚೆಗಳು ಮೊದಲಿನಿಂದಲೂ ಇವೆ. ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.
ಮಹೇಶ್ ಬಾಬು ಅವರ ನಟನೆಯ ‘ಪೋಕಿರಿ’ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರು ಚಿತ್ರದಿಂದ ಚಿತ್ರಕ್ಕೆ ಬೇರೆ ಬೇರೆ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡರು. ಮಹೇಶ್ ಬಾಬು ಅವರು ಇತ್ತೀಚೆಗೆ ಮುಕೇಶ್ ಅಂಬಾನಿ ಮನೆಯ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಉದ್ದ ಕೂದಲು ಬಿಟ್ಟಿದ್ದು ಸಾಕಷ್ಟು ಹೈಲೈಟ್ ಆಯಿತು. ಇದು ಅವರ ಮುಂದಿನ ಚಿತ್ರದ ಲುಕ್ ಎನ್ನಲಾಗಿದೆ.
ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ತಲೆಯಲ್ಲಿ ಕೂದಲು ಇರಲಿಲ್ಲ. ಮಹೇಶ್ ಬಾಬು ಸಹೋದರ ರಮೇಶ್ ಬಾಬು ತಲೆಯಲ್ಲೂ ಕೂದಲು ಇಲ್ಲ. ಅವರ ಕುಟುಂಬದಲ್ಲೇ ಕೂದಲು ಉದುರುವಿಕೆಯ ಸಮಸ್ಯೆ ಇದೆ. ಹೀಗಿರುವಾಗ ಮಹೇಶ್ ಬಾಬುಗೆ ಮಾತ್ರ ಇಷ್ಟು ಉದ್ದ ಕೂದಲು ಇರೋಕೆ ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದರು.