ಹಳೆ ಪದ್ಧತಿಯಂತೆ ಎಫ್.ಸಿ. ನವೀಕರಿಸಿ :ಲಾರಿ ಮಾಲೀಕರ ಸಂಘ

ತುಮಕೂರು:

      ಸಾರಿಗೆ ಇಲಾಖೆ ವತಿಯಿಂದ ಸುತ್ತೋಲೆಯನ್ನು ಹೊರಡಿಸಿ ವಾಣಿಜ್ಯ ವಾಹನಗಳ ಎಫ್.ಸಿ. ನವೀಕರಣ ಮಾಡಲು ಕ್ಯೂಆರ್ ಕ್ರೋಡ್ ಬಳಸಲು ಪ್ರಾದೇಶಿಕ ಅಧಿಕಾರಿಗಳು ಸೂಚಿಸುತ್ತಿರುವ ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಎಲ್ಲಾ ವಾಣಿಜ್ಯ ವಾಹನಗಳಿಗೆ ರೆಟ್ರೋ ರೀಫ್ಲೆಕ್ಟೀವ್ ಟ್ಯಾಪ್‌ನ್ನು ಅಳವಡಿಸಿಕೊಂಡು ವಾಹನಗಳ ಎಫ್.ಸಿ. ನವೀಕರಿಸಿಕೊಳ್ಳಬಹುದು.

      ಎ.ಆರ್.ಎ.ಐ. ಅನುಮೋದನೆ ಪಡೆದಿರುವ ರೀಫ್ಲೆಕ್ಟೀವ್ ಟ್ಯಾಪ್‌ನ್ನು ಎಫ್.ಸಿ. ನವೀಕರಣ ಸಮಯದಲ್ಲಿ ಬಳಸಿಕೊಂಡು ನವೀಕರಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಸಾರಿಗೆ ಇಲಾಖೆಯವರು ಸುತ್ತೋಲೆ ಹೊರಡಿಸಿ ಖಾಸಗಿ ವ್ಯಕ್ತಿಗಳು ತಯಾರಿಸುವ ಕ್ಯೂಆರ್ ಕೋಡ್ ಟ್ಯಾಪ್ ಬಳಸಲು ಸೂಚಿಸುತ್ತಿರುವುದು. ಅದರ ಬೆಲೆ 120 ರಿಂದ 150 ಆಗುತ್ತದೆ. ವಾಸ್ತವವಾಗಿ ಕ್ಯೂಆರ್ ಕೋಡ್ ಟ್ಯಾಪ್ ಬೆಲೆ 50 ರೂ. ಆಗುತ್ತದೆ. ಇದು ಅನಾವಶ್ಯಕ ಹಾಗೂ ಹೊರೆಯಾಗುತ್ತದೆ.

     ಕೇಂದ್ರ ಸರ್ಕಾರ ಟೋಲ್ ದರವನ್ನು ಏಪ್ರಿಲ್‌ನಿಂದ ಮತ್ತೆ ಜಾಸ್ತಿ ಮಾಡುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಆಟೋ ಡ್ರೈವರ್, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ವಿದ್ಯಾಸಿರಿ ನಿಧಿ ಯೋಜನೆ ಅಡಿಯಲ್ಲಿ ವಿದ್ಯಾಭ್ಯಾಸದ ಸಹಾಯ ಧನವನ್ನು ಲಾರಿ ಹಾಗೂ ಬಸ್ ಚಾಲಕರ ಮಕ್ಕಳಿಗೂ ಸಹ ವಿಸ್ತರಿಸಲು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘ ಸರ್ಕಾರವನ್ನು ಆಗ್ರಹಿಸುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap