ಮಧುಗಿರಿ, ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸಿ

ತುಮಕೂರು:

ಬಜೆಟ್‍ನಲ್ಲಿ ಮೆಟ್ರೊ, ಕ್ರೀಡಾವಿವಿ ಸೇರಿ ಹಲವು ಯೋಜನೆಗಳ ಸೇರ್ಪಡೆಗೆ ಆಗ್ರಹ

ಹತ್ತು ತಾಲೂಕು, ಹನ್ನೊಂದು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ತುಮಕೂರು ಭೌಗೋಳಿಕವಾಗಿ ಅತೀದೊಡ್ಡ ಜಿಲ್ಲೆಯಾಗಿದÀ್ದು, ಮಧುಗಿರಿ, ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸಿ ಬಜೆಟ್‍ನಲ್ಲಿ ಘೋಷಿಸÀಬೇಕೆಂದು ಸಿಎಂಗೆ ಮನವಿ ಮಾಡಿರುವುದಾಗಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2022-23ನೆ ಸಾಲಿನ ಆಯ-ವ್ಯಯದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರು-ತುಮಕೂರು-ವಸಂತನರಸಾಪುರದವರೆಗೂ ಮೆಟ್ರೋ ಯೋಜನೆ ಜಾರಿ,

ವಸಂತನರಸಾಪುರದ ಇಂಡಸ್ಟ್ರಿಯಲ್ ನೋಡ್ ಮತ್ತು ಉದ್ದೇಶಿತ ರಿಂಗ್ ರಸ್ತೆಯ ಮಧ್ಯದ ಪ್ರದೇಶಗಳೂ ಸೇರಿದಂತೆ ತ್ರಿವಳಿ ನಗರಗಳನ್ನು ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಹಬ್ ಮತ್ತು ಕೈಗಾರಿಕಾ ಹಬ್ ಅಗಿ ಪರಿವರ್ತಿಸಬೇಕು.

ವಸಂತನರಸಾಪುರ ಇಂಡಸ್ಟ್ರಿಯಲ್ ನೋಡ್ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2 ಸ್ಥಾಪನೆ ಸಂಬಂಧ ಯೋಜನೆಗಳನ್ನು ಪ್ರಸ್ತುತ ಆಯ-ವ್ಯಯದಲ್ಲಿ ಸೇರ್ಪಡೆ ಮಾಡಲು ಕೋರಿರುವುದಾಗಿ ತಿಳಿಸಿದರು.

ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‍ನಲ್ಲಿ 40 ಎಕರೆ ಜಮೀನಿನಲ್ಲಿ ಕ್ರೀಡಾ ಗ್ರಾಮ ಸ್ಥಾಪಿಸಬೇಕು. ಹೇಮಾವತಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಮೈಕ್ರೋ ಇರಿಗೇಷನ್ ಪದ್ದತಿ ಅಳವಡಿಸಿ, ಉಳಿಯುವ ನೀರನ್ನು ಆ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆಗೆ ಬಳಸಲು ಕೆರೆಗಳಿಗೆ ಅಲೋಕೇಷನ್ ಮಾಡುವ ಯೋಜನೆಯನ್ನು ಬಜೆಟ್‍ನಲ್ಲಿ ಸೇರ್ಪಡೆ ಮಾಡಬೇಕು.

ಜಿಲ್ಲೆಯನ್ನು ಡಿಜಿಟಲ್ ಡಾಟಾ ಡಿಸ್ಟ್ರಿಕ್ಟ್ ಜಿಲ್ಲೆಯಾಗಿ ಘೋಷಣೆ ಮಾಡಬೇಕು. ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಂಜೂರು ಮಾಡಬೇಕು. ಸ್ಮಾರ್ಟ್‍ಸಿಟಿ ನಿರ್ಮಾಣ ಮಾಡಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‍ನ್ನು ತುಮಕೂರು ಜಿಲ್ಲೆ ಡಾಟಾ ಬ್ಯಾಂಕ್ ಆಗಿ ಪರಿವರ್ತಿಸಬೇಕು. ಎಂದರು.

ತುಮಕೂರು ವಿವಿ ಕ್ಯಾಂಪಸ್‍ಗೂ ಅನುದಾನಕ್ಕೂ ಬೇಡಿಕೆ: ಗುಬ್ಬಿಯಲ್ಲಿ ಕೆಎಸ್ಸಾರ್ಟಿಸಿ ಡಿಪೆÇೀ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ವಾಟರ್ ಬ್ಯಾಂಕ್ ಡ್ಯಾಂ ನಿರ್ಮಾಣ ಮಾಡಲು ಸಮೀಕ್ಷೆ ನಡೆಸಬೇಕು. ಕೊರಟಗೆರೆಗೆ ಒಳಚರಂಡಿ ಯೋಜನೆ ಜಾರಿಗೊಳಿಸಬೇಕು. ತುಮಕೂರು ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್‍ಗೆ ಅನುದಾನ ನೀಡಬೇಕು.

ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕು. ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಬೇಕು. ಜಿ.ಪಂ. ಹಳೆ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡದ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕು. ಇದಕ್ಕೆ ಅನುದಾನ ಒದಗಿಸಬೇಕು ಎಂದರು.

ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆ ನಿರ್ಮಾಣ ಹಾಗೂ ಮಧುಗಿರಿ-ಸಿರಾ-ಕೊರಟಗೆರೆ ತಾಲ್ಲೂಕುಗಳ ಸಂಗಮದಲ್ಲಿ ಮೆಗಾ ಟೆಕ್ಸ್‍ಟೈಲ್ಸ್ ಪಾರ್ಕ್ ನಿರ್ಮಾಣ ಮಾಡುವುದು ಸೇರಿದಂತೆ ರಾಜ್ಯದ ರೈಲ್ವೆ ಯೋಜನೆಗಳಿಗೆ ಒತ್ತು, ಜಿಲ್ಲೆಯ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಈ ಸಾಲಿನ ಬಜೆಟ್‍ನಲ್ಲಿ ಘೋಷಣೆ ಮಾಡುವಂತೆ ಸಂಸದ ಜಿ.ಎಸ್. ಬಸವರಾಜು ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿಯಲ್ಲಿ ಒತ್ತಾಯಿಸಿದ್ದಾರೆಂದರು.

ಪತ್ರಿಕಾಗೋಷ್ಠಿಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಎಪಿಎಂಸಿ ನಿರ್ದೇಶಕ ಹೊನ್ನೇಶ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಊರಿಗೊಂದು ಕೆರೆ, ಕೆರೆಗೆ ನದಿ ನೀರು ಯೋಜನೆಗೆ ಘೋಷಣೆಗೆ ಆಗ್ರಹ

ಜಿಲ್ಲೆಯಲ್ಲಿ ಕೋಕೊನಟ್ ಸ್ಪೆಷಲ್ ಎಕಾನಾಮಿಕಲ್ ಝೋನ್ ಸ್ಥಾಪಿಸಬೇಕು. ನನೆಗುದಿಗೆ ಬಿದ್ದಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ಯೋಜನೆ ಘೋಷಣೆಯಾಗಬೇಕು. ಕ್ರೀಡಾ ಯೂನಿವರ್ಸಿಟಿ ಸ್ಥಾಪಿಸಬೇಕು.

ಸಿರಾ ತಾಲ್ಲೂಕಿನಲ್ಲಿ 811 ಎಕರೆ ಸರ್ಕಾರಿ ಜಮೀನು ಮೀಸಲಿರಿಸಿ ನನೆಗುದಿಗೆ ಬಿದ್ದಿರುವ ಕರ್ನಾಟಕ ಹೆರಿಟೇಜ್ ಹಬ್ ಸ್ಥಾಪಿಸಬೇಕು. ಗುಬ್ಬಿ ತಾಲ್ಲೂಕು ಎಚ್‍ಎಎಲ್ ಘಟಕಕ್ಕೆ ಅಗತ್ಯವಿರುವ ಹೆಚ್ಚುವರಿ ಜಮೀನು ನೀಡುವ ಸಂಬಂಧವೂ ಬಜೆಟ್‍ನಲ್ಲಿ ಘೋಷಿಸಬೇಕು.

ಜಿಲ್ಲೆಯನ್ನು ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು ಯೋಜನೆಯನ್ನು ಪೈಲಟ್ ಯೋಜನೆಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link