ರಾಜ್ಯವನ್ನು ‘ಬಾಬು-ರಾಜ್’ ನಿಂದ ಮುಕ್ತಗೊಳಿಸಿ : ಅಮಿತ್‌ ಷಾ

ಸಂಬಲ್ಪುರ :

     ಲೋಕಸಭೆ ಚುನಾವಣೆಯ ಐದು ಹಂತಗಳು ಪೂರ್ಣಗೊಂಡ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) 310 ಸ್ಥಾನಗಳನ್ನು ಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಒಡಿಶಾದಲ್ಲಿ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ರಾಜ್ಯವನ್ನು ‘ಬಾಬು-ರಾಜ್’ ನಿಂದ ಮುಕ್ತಗೊಳಿಸುವಂತೆ ಒಡಿಶಾದ ಜನರಿಗೆ ಕರೆ ನೀಡಿದ್ದು ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

    ಸಂಬಲ್ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಈ ಬಾರಿ ಒಡಿಶಾದಲ್ಲಿ ಬಿಜೆಪಿಯ ಚುನಾವಣಾ ಚಿಹ್ನೆ ‘ಕಮಲ’ ಅರಳಲಿದೆ ಎಂದರು. ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಒಡಿಶಾದ ಸಂಬಲ್ಪುರ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. 

    ಐದನೇ ಹಂತದ ಮತದಾನದ ನಂತರ ಬಿಜೆಪಿ ಈಗಾಗಲೇ 310 ಸ್ಥಾನಗಳನ್ನು ಪಡೆದುಕೊಂಡಿದೆ. ಆರು ಮತ್ತು ಏಳನೇ ಸುತ್ತಿನ ಮತದಾನದ ನಂತರ ನಮಗೆ 400ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ. ಈ ಚುನಾವಣೆಯು ರಾಜ್ಯದಲ್ಲಿ ಪ್ರಸ್ತುತ ‘ಬಾಬು ರಾಜ್’ ಅನ್ನು ಕೊನೆಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
 
    ರಾಜ್ಯದಲ್ಲಿನ ಬಿಜು ಜನತಾ ದಳ (ಬಿಜೆಡಿ) ಸರ್ಕಾರವು ಒಡಿಶಾದ ಹೆಮ್ಮೆ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅವಮಾನಿಸಿದೆ ಎಂದು ಶಾ ಆರೋಪಿಸಿದರು. ಜಗನ್ನಾಥ ದೇವಾಲಯವನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಬಿಜೆಡಿ ಸರ್ಕಾರ ಬಯಸಿದೆ. ಮಠಗಳು ಮತ್ತು ದೇವಾಲಯಗಳನ್ನು ನಾಶಪಡಿಸಲಾಗಿದೆ ಮತ್ತು ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಇನ್ನೂ ಸಾರ್ವಜನಿಕರಿಗೆ ತೆರೆಯಲಾಗಿಲ್ಲ ಎಂದು ಆರೋಪಿಸಿದರು.
   ‘ಅಧಿಕಾರಿ ರಾಜ್’ ಹೇರುವ ಮೂಲಕ ನವೀನ್ ಬಾಬು ಒಡಿಶಾದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap