ಮಲಬಾರ್ ಗೋಲ್ಡ್ & ಡೈಮಂಡ್ಸ್‍ನಿಂದ ‘ಒಂದು ಭಾರತ ಒಂದೇ ಚಿನ್ನದ ಬೆಲೆ’ ಜಾರಿ!!

ಬೆಂಗಳೂರು : 
     ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಚಿನ್ನದ ಗುಣಮಟ್ಟ ಮತ್ತು ಶುದ್ಧತೆಯಲ್ಲಿ ಯಾವುದೇ ರಾಜಿ ಇಲ್ಲದೇ ಶೇ.100 ರಷ್ಟು ಬಿಐಎಸ್ ಹಾಲ್‍ಮಾರ್ಕ್ ಮತ್ತು ಜವಾಬ್ದಾರಿಯುತ ಮೂಲದ ಚಿನ್ನವನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಬೆಲೆಯಲ್ಲಿ ಮಾರಾಟ ಮಾಡುವ ತನ್ನ ಬಹುನಿರೀಕ್ಷಿತ `ಒಂದು ಭಾರತ ಒಂದೇ ಚಿನ್ನದ ಬೆಲೆ’(One India One Gold Rate)ಯೋಜನೆಗೆ ಚಾಲನೆ ನೀಡಿದೆ. 
  •  ದೇಶದ ಪ್ರತಿ ರಾಜ್ಯದಲ್ಲಿಯೂ ಚಿನ್ನಕ್ಕೆ ಏಕರೂಪದ ಬೆಲೆ
  •  ಇಂತಹ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ಸಂಸ್ಥೆ
  •  ಗ್ರಾಹಕರು ಇನ್ನು ಮುಂದೆ ದೇಶದ ಯಾವುದೇ ರಾಜ್ಯಗಳಲ್ಲಿ ಮಲಬಾರ್ ಶೋರೂಂಗಳಲ್ಲಿ ಒಂದೇ ಬೆಲೆಯಲ್ಲಿ ಚಿನ್ನ ಖರೀದಿಸಬಹುದು
  •  ಗ್ರಾಹಕರಿಗೆ ಆಗುತ್ತಿದ್ದ ಬೆಲೆ ವ್ಯತ್ಯಾಸ ಮತ್ತು ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಮಲಬಾರ್‍ನಿಂದ ಈ ಉಪಕ್ರಮ
      ಅಂತಾರಾಷ್ಟ್ರೀಯ ಚಿನ್ನದ ದರಗಳು ಪಾರದರ್ಶಕವಾಗಿವೆ ಮತ್ತು ಇಡೀ ಜಗತ್ತಿನ ಎಲ್ಲಾ ದೇಶಗಳಿಗೆ ಒಂದೇ ರೀತಿಯ ಕಸ್ಟಮ್ಸ್ ಸುಂಕ ಮತ್ತು ತೆರಿಗೆಯನ್ನು ವಿಧಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ರಾಜ್ಯ ರಾಜ್ಯಗಳಲ್ಲಿನ ಚಿನ್ನದ ದರ ಬೇರೆ ಬೇರೆ ರೀತಿ ಇದೆ. ಚಿನ್ನದ ಮಾರಾಟಕ್ಕೆಂದೆ ಮೀಸಲಾಗಿರುವ ಬ್ಯಾಂಕುಗಳಿಂದ ಚಿನ್ನವನ್ನು ಖರೀದಿಸಿದರೂ ಗ್ರಾಹಕರಿಗೆ ಮಾರಾಟ ಮಾಡುವಾಗ ದರದಲ್ಲಿ ವ್ಯತ್ಯಾಸವಿದೆ. ಚಿನ್ನದ ಮೇಲಿನ ಈ ವ್ಯತ್ಯಾಸದ ದರವು ಗ್ರಾಹಕರ ಹಿತವನ್ನು ಕಾಯುವುದಿಲ್ಲ ಮತ್ತು ಇದು ಗ್ರಾಹಕ ಸ್ನೇಹಿಯಾಗಿಲ್ಲ. ಕೆಲವು ಪ್ರಕರಣಗಳಲ್ಲಿ ರಾಜ್ಯಗಳ ನಡುವೆ ಕನಿಷ್ಠವಾಗಿರುತ್ತದೆ ಮತ್ತು ಗರಿಷ್ಠವಾಗಿರುತ್ತದೆ. ಅಂದರೆ, ಗರಿಷ್ಠ ಪ್ರತಿ ಗ್ರಾಂಗೆ 400 ರೂಪಾಯಿವರೆಗೆ ವ್ಯತ್ಯಾಸ ಕಂಡುಬರುತ್ತದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಕಳೆದ ಹಲವು ವರ್ಷಗಳಿಂದ ಈ ವಿಚಾರವನ್ನು ಗಂಭೀರವಾಗಿ ಅವಲೋಕಿಸಿದೆ ಮತ್ತು ದೇಶದಾದ್ಯಂತ ಇರುವ ಚಿನ್ನದ ಖರೀದಿದಾರರನ್ನು ರಕ್ಷಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಏಕರೂಪದ ದರವನ್ನು ನಿಗದಿಪಡಿಸುವ ನೀತಿಯನ್ನು ಸಿದ್ಧಪಡಿಸಿದೆ.

     ಭಾರತದಲ್ಲಿ ಚಿನ್ನವನ್ನು ಮಂಗಳಕರ ಉತ್ಪನ್ನವೆಂದಷ್ಟೇ ಪರಿಗಣಿಸಲಾಗುತ್ತಿಲ್ಲ, ಇದು ಉಳಿತಾಯ ಮತ್ತು ಹೂಡಿಕೆಯ ಸಾಧನವಾಗಿ ಪರಿಗಣಿಸಲ್ಪಟ್ಟಿದೆ. ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಉಪಕ್ರಮವು ದೇಶಾದ್ಯಂತ ನ್ಯಾಯಸಮ್ಮತವಾದ ದರದಲ್ಲಿ ಚಿನ್ನವನ್ನು ಖರೀದಿಸುವುದನ್ನು ಗ್ರಾಹಕರಿಗೆ ಖಾತರಿಪಡಿಸುತ್ತದೆ. ಇದಲ್ಲದೇ, ಯಾವುದೇ ಸಂಘರ್ಷವಿಲ್ಲದೇ ಮತ್ತು ಖಾತರಿಪಡಿಸಿದ ಜವಾಬ್ದಾರಿಯುತವಾದ ಮೂಲದಲ್ಲಿ ಚಿನ್ನವನ್ನು ಖಾತರಿಪಡಿಸುತ್ತದೆ. ಮಲಬಾರ್‍ನ ಮತ್ತೊಂದು ಪ್ರಮುಖ ಅಂಶವೆಂದರೆ ದೇಶಾದ್ಯಂತ ಗ್ರಾಹಕರು ಎಲ್ಲಿಯೇ ಖರೀದಿ ಮಾಡಿದ್ದರೂ ಆ ಚಿನ್ನವನ್ನು ಮಾರಾಟ ಮಾಡುವಾಗ ಬೈಬ್ಯಾಕ್ ಭರವಸೆಯನ್ನು ನೀಡುತ್ತದೆ.

     ಈ ಹೊಸ ಉಪಕ್ರಮದ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂಪಿ ಅಹ್ಮದ್ ಅವರು, “ಕೋವಿಡ್-19 ಸಾಂಕ್ರಾಮಿಕವು ಎಲ್ಲಾ ಕ್ಷೇತ್ರಗಳ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಬೀರಿದ್ದರೂ ಚಿನ್ನದ ಬೇಡಿಕೆ ಸ್ಥಿರವಾದ ಹೆಚ್ಚಳವನ್ನು ಕಾಯ್ದುಕೊಂಡಿದೆ.

     ಇದನ್ನು ಗಮನಿಸಿದರೆ, ಭಾರತೀಯ ಗ್ರಾಹಕರು ಈ ಹಳದಿ ಲೋಹವು ಉಳಿತಾಯ ಮತ್ತು ಸಂಪತ್ತು ಸೃಷ್ಟಿಯ ಸಾಧನವನ್ನಾಗಿ ಪರಿಗಣಿಸಿರುವುದು ದೃಢವಾಗುತ್ತದೆ. ಗುಣಮಟ್ಟ ಮತ್ತು ಶುದ್ಧತೆಯಲ್ಲಿ ಯಾವುದೇ ರಾಜಿ ಇಲ್ಲದೇ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಶತ ಶತಮಾನಗಳಿಂದಲೂ ಚಿನ್ನವು ಭಾರತೀಯ ಸಂಪ್ರದಾಯ ಮತ್ತು ಎಲ್ಲಾ ಶುಭ ಸಂದರ್ಭಗಳ ಭಾಗವಾಗಿದೆ.  ಇದು ನಿಜವಾಗಿಯೂ ಶುಭವಾಗಬೇಕಾದರೆ ಅದನ್ನು ಮಧ್ಯಸ್ಥಗಾರರ ಶೋಷಣೆ ಇಲ್ಲದೇ ಜವಾಬ್ದಾರಿಯುತವಾಗಿ ಸಂಪಾದಿಸಬೇಕಾಗಿದೆ. ಮಲಬಾರ್‍ನಲ್ಲಿ ನಾವು ಗ್ರಾಹಕರ ಹಿತಾಸಕ್ತಿ, ಪಾರದರ್ಶಕವಾದ ವ್ಯವಹಾರ ಪದ್ಧತಿಗಳು ಮತ್ತು ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಯ ಪ್ರಮುಖ ತತ್ತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ದೇಶಾದ್ಯಂತ ನಮ್ಮ ಗ್ರಾಹಕರ ಹಿತ ಕಾಯಲು ನಾವು ಇಟ್ಟಿರುವ ದೊಡ್ಡ ಹೆಜ್ಜೆ ಇದಾಗಿದೆ’’ ಎಂದು ತಿಳಿಸಿದರು.

      ಗ್ರಾಹಕರು ತಮ್ಮ ನೆಚ್ಚಿನ ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಲಬಾರ್‍ನ ಏಕರೂಪದ ಚಿನ್ನದ ಬೆಲೆ ಯೋಜನೆಯನ್ನು ದೇಶದ ಎಲ್ಲಾ 120 ಶೋರೂಂಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಅತ್ಯುತ್ತಮ ಗುಣಮಟ್ಟ ಮತ್ತು ಅತ್ಯಾಕರ್ಷಕವಾದ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ. ಸಂಪೂರ್ಣವಾದ ಪಾರದರ್ಶಕತೆಯನ್ನು ಪ್ರದರ್ಶಿಸುತ್ತಿರುವ ಕಂಪನಿಯು, ಜವಾಬ್ದಾರಿಯುತ ಮೂಲದ ಚಿನ್ನ, ವಜ್ರ ಮತ್ತು ಪ್ಲಾಟಿನಂ ಅನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.

      ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಬಗ್ಗೆ ಅತ್ಯಂತ ಉತ್ಸಾಹ ಹೊಂದಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನ ಭಾರತ ಕಾರ್ಯಾಚರಣೆಯ ವ್ಯವಸ್ಥಾಪಕ ನಿರ್ದೇಶಕ ಅಶರ್ ಒಟ್ಟಮೂಚಿಕ್ಕಲ್ ಅವರು ಮಾತನಾಡಿ, “ಸುಸ್ಥಿರವಾದ ಪರಿಸರವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಮಾಣಿತ ಬೆಲೆ ನಿಗದಿ, ಮೂಲದ ಹೊಣೆಗಾರಿಕೆ ಮತ್ತು ವಿನಿಮಯ ನೀತಿಗಳನ್ನು ಜಾರಿಗೆ ತರಲು ಭಾರತೀಯ ಚಿನ್ನದ ಕ್ಷೇತ್ರಕ್ಕೆ ಇದು ಸಕಾಲವಾಗಿದೆ. ಒಬ್ಬ ಉತ್ಪಾದಕರಿಂದ ಇನ್ನೊಬ್ಬ ಉತ್ಪಾಕರು ಚಿನ್ನವನ್ನು ಖರೀದಿಸುವ ನಡುವಿನ ವ್ಯತ್ಯಾಸವೆಂದರೆ ಆಭರಣವನ್ನು ವಿನ್ಯಾಸಗೊಳಿಸುವ ಮೌಲ್ಯ ಮತ್ತು ಖರೀದಿ ಸಮಯದಲ್ಲಿ ಹಾಗೂ ನಂತರ ಗ್ರಾಹಕರಿಗೆ ಒದಗಿಸುವ ಸಹಾಯಕ ಪ್ರಯೋಜನಗಳಾಗಿರುತ್ತವೆ.

     ಈ ದಿಸೆಯಲ್ಲಿ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಒಂದು ಹೆಜ್ಜೆಯಾಗಿದೆ ಮತ್ತು ಗ್ರಾಹಕ ಕೇಂದ್ರಿತತೆಗೆ ಸಂಬಂಧಿಸಿದಂತೆ ನಮ್ಮ ಮಾರುಕಟ್ಟೆ ನಾಯಕತ್ವವನ್ನು ಪ್ರದರ್ಶಿಸುತ್ತದೆ. ಮಲಬಾರ್‍ನಲ್ಲಿ ನಾವು ಪಾರದರ್ಶಕತೆ ಮತ್ತು ಗ್ರಾಹಕರ ಸಬಲೀಕರಣದ ಮೇಲೆ ನಂಬಿಕೆ ಇಟ್ಟಿದ್ದೇವೆ. ಈ ಮೂಲಕ ನಾವು ಚಿನ್ನದ ಕ್ಷೇತ್ರಕ್ಕೆ ಒಂದು ವಿಶ್ವಾಸಾರ್ಹವಾದ ಪರಿಸರವ್ಯವಸ್ಥೆಯನ್ನು ನಿರ್ಮಾಣ ಮಾಡಬಹುದಾಗಿದೆ’’ ಎಂದು ತಿಳಿಸಿದರು.

      ಪೂರೈಕೆ ಜಾಲ, ಪ್ರಮಾಣಪತ್ರಗಳು ಮತ್ತು ಅಕ್ರಮ ವ್ಯವಹಾರ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಅಗತ್ಯವಿರುವ ದಾಖಲೀಕರಣಗಳಂತಹ ಹಲವಾರು ಸವಾಲುಗಳನ್ನು ಈ ಕ್ಷೇತ್ರ ಎದುರಿಸುತ್ತಿದೆ. ಇದಕ್ಕಾಗಿ ಉದ್ಯಮವು ತನ್ನ ವ್ಯವಹಾರದಲ್ಲಿ ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಚಿನ್ನದ ಸಾಗಣೆಯ ಪ್ರಕ್ರಿಯೆಯನ್ನು ಪೂರೈಕೆ ಜಾಲದಾದ್ಯಂತ ಟ್ರ್ಯಾಕ್ ಮಾಡುವುದರಿಂದ ಅಕ್ರಮಗಳನ್ನು ತಪ್ಪಿಸಬಹುದಾಗಿದೆ. ಅದೇ ರೀತಿ ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸುಂಕಗಳ ದರವನ್ನು ಮತ್ತು ಇತರೆ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ಚಿನ್ನದ ಅಕ್ರಮ ಸಾಗಣೆ ಸೇರಿದಂತೆ ಇನ್ನಿತರೆ ಅಕ್ರಮಗಳನ್ನು ತೊಡೆದುಹಾಕಬಹುದಾಗಿದೆ. ಮಲಬಾರ್‍ನ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಈ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದು, ಇದು ಪಾರದರ್ಶಕತೆಯನ್ನು ಸೃಷ್ಟಿ ಮಾಡಲಿದೆ. ಇದರ ಮೂಲಕ ಗ್ರಾಹಕರಿಗೆ ಪ್ರಯೋಜನವನ್ನು ಖಾತರಿಪಡಿಸಲಿದೆ.

     ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಒಂದು ಅಭಿಯಾನವಲ್ಲ. ಬದಲಿಗೆ ತನ್ನ ಗ್ರಾಹಕರಿಗೆ ಮಲಬಾರ್ ಭರವಸೆಯಾಗಿದೆ. ಮಲಬಾರ್ ಭರವಸೆಯ ಗ್ರಾಹಕರಿಗೆ ನಿಶ್ಚಿಂತೆಯ ಶಾಪಿಂಗ್ ಅನುಭವವನ್ನು ನೀಡಲಿದೆ. ಜೀವನ ಪೂರ್ತಿಗಾಗಿ ಮಾಡುವ ಖರೀದಿಗಳನ್ನು ಸುರಕ್ಷಿತವಾಗಿರಿಸಲಿದೆ. ಈ ಹಿಂದಿನಂತೆಯೇ ವಿನಿಮಯದ ಮೇಲೆ ಶೂನ್ಯ ಕಡಿತ ಮತ್ತು ಬೈಬ್ಯಾಕ್ ಮೇಲೆ ಅತ್ಯುತ್ತಮ ಮೌಲ್ಯ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಮುಂದುವರಿಯಲಿವೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಸರ್ಕಾರದಿಂದ ಕಡ್ಡಾಯವಿಲ್ಲದಿದ್ದರೂ ತನ್ನ ಗ್ರಾಹಕರಿಗೆ ಶೇ.100 ಕ್ಕೆ ನೂರರಷ್ಟು ಬಿಐಎಸ್ ಹಾಲ್‍ಮಾರ್ಕ್ ಚಿನ್ನದ ಆಭರಣಗಳನ್ನು ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದಲೂ ನೀಡುತ್ತಾ ಬಂದಿದೆ. 

ಮಲಬಾರ್ ಗೋಲ್ಡ್ & ಡೈಮಂಡ್ಸ್ ಕುರಿತು:

Malabar Gold & Diamonds Announces Dh335 Million Expansion Plans

      ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತದಲ್ಲಿ ವೈವಿಧ್ಯಮಯ ವ್ಯವಹಾರ ನಡೆಸುತ್ತಿರುವ ಮಲಬಾರ್ ಗ್ರೂಪ್‍ನ ಸಮೂಹ ಸಂಸ್ಥೆಯಾಗಿದೆ. ವಾಣಿಜ್ಯೋದ್ಯಮಿ ಎಂಪಿ ಅಹ್ಮದ್ ನೇತೃತ್ವದ ತಂಡವು ಈ ಸಂಸ್ಥೆಯನ್ನು 1993 ರಲ್ಲಿ ಕೇರಳದ ಉತ್ತರ ಭಾಗದಲ್ಲಿರುವ ಕೋಝಿಕೋಡ್‍ನಲ್ಲಿ ಆರಂಭಿಸಿತು. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬಂದ ಮಲಬಾರ್ ಗೋಲ್ಡ್ & ಡೈಮಂಡ್ಸ್ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಅಧಿಕ ಶೋರೂಂಗಳನ್ನು ಹೊಂದುವ ಮೂಲಕ ವಿಶ್ವದ ಐದನೇ ಅತಿ ದೊಡ್ಡ ಆಭರಣ ರೀಟೇಲರ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ವಾರ್ಷಿಕ 30,000 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸುತ್ತಿರುವ ಸಂಸ್ಥೆಯು ಭಾರತ ಮತ್ತು ಜಿಸಿಸಿಯಲ್ಲಿ 13 ಕ್ಲಸ್ಟರ್‍ನ ತಯಾರಿಕಾ ಘಟಕಗಳನ್ನು ಹೊಂದಿದೆ. ಕೇರಳದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಂಪನಿಯು ಭಾರತ, ಮಧ್ಯ ಪೂರ್ವ ಮತ್ತು ಪಶ್ಚಿಮ ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap