ಬೆಂಗಳೂರಿನಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ `ಆರ್ಟಿಸ್ಟ್ರಿ’ ಸ್ಟೋರ್ ಶುಭಾರಂಭ

ಬೆಂಗಳೂರು:

ದೇಶದಲ್ಲಿ ಅತ್ಯಂತ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಜಾಲಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ 7ನೇ ಜನವರಿ 2022 ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿ ತನ್ನ ವಿನೂತನವಾದ `ಮಲಬಾರ್ ಗೋಲ್ಡ್ & ಡೈಮಂಡ್ಸ್ ಆರ್ಟಿಸ್ಟ್ರಿ ಸ್ಟೋರ್’ ಅನ್ನು ಆರಂಭಿಸಿದೆ.

ಈ ಸ್ಟೋರ್ ಅನ್ನು ಶ್ರೀ ಸಿ. ಎನ್. ಅಶ್ವಥ್ – ನಾರಾಯಣ್ ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಶಿಕ್ಷಣ ಮತ್ತು ಐಟಿ, ಜ್ವೆವಿಕ ತಂತ್ರಜ್ಞಾನ ಸಚಿವರು, ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂಪಿ ಅಹಮ್ಮದ್, ಉಪಾಧ್ಯಕ್ಷ ಕೆ. ಪಿ ಅಬ್ದುಲ್ ಸಲಾಂ, ಶ್ರೀ ಎನ್‍ಎ ಹ್ಯಾರಿಸ್ ಶಾಂತಿನಗರ ಕ್ಷೇತ್ರದ ಶಾಸಕ, ಓ ಅಷರ್ ಎಂಡಿ ಇಂಡಿಯಾ ಆಪರೇಷನ್ಸ್, ಶಾಮಲಾಲ್ ಅಹ್ಮದ್ – ಎಂಡಿ ಇಂಟನ್ರ್ಯಾಷನಲ್ ಆಪರೇಷನ್ಸ್, ಮಲಬಾರ್ ಗ್ರೂಪ್‍ನ ಇತರೆ ನಿರ್ವಹಣಾ ಅಧಿಕಾರಿಗಳು ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗಿತ್ತು.

ಗ್ರಾಹಕರಿಗೆ ಎಲ್ಲಾ ಬಗೆಯ ನವೀನವಾದ ಶಾಪಿಂಗ್ ಅನುಭವವನ್ನು ನೀಡುವ ಈ ಆರ್ಟಿಸ್ಟ್ರಿ ಸ್ಟೋರ್ ಅನ್ನು ಆಭರಣಗಳ ಕಲೆ ಮತ್ತು ಇತಿಹಾಸದ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಜನವರಿ 2022 ರಲ್ಲಿ 22 ಸ್ಟೋರ್‍ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಮಲಬಾರ್ ಬ್ರ್ಯಾಂಡ್ ತನ್ನ ಅತ್ಯದ್ಭುತವಾದ ವಿಸ್ತರಣಾ ಯೋಜನೆಗೆ ಈ ಸ್ಟೋರ್ ಆರಂಭಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಆರ್ಟಿಸ್ಟ್ರಿ ಸ್ಟೋರ್ ಈ ವಿಸ್ತರಣೆಯ ಮೊದಲ ಭಾಗವಾಗಿದೆ.

ಈ ಸ್ಟೋರ್ 22,000 ಚದರಡಿಗೂ ಅಧಿಕ ವಿಸ್ತೀರ್ಣ ಹೊಂದಿದೆ ಮತ್ತು ನಗರದ ಹೃದಯ ಭಾಗದಲ್ಲಿ ಅತಿ ದೊಡ್ಡ ಆಭರಣಗಳ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಗ್ರಾಹಕರಿಗೆ ತಮ್ಮ ಆಭರಣಗಳ ಎಲ್ಲಾ ರೀತಿಯ ಅಗತ್ಯಗಳನ್ನು ಪೂರೈಸಿಕೊಳ್ಳುವ ಒನ್-ಸ್ಟಾಪ್ ಪರಿಹಾರವಾಗಿದೆ.

ಈ ಸ್ಟೋರ್‍ನಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ 30,000 ಕ್ಕೂ ಅಧಿಕ ವಿನ್ಯಾಸಗಳ ಆಭರಣಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ ಮತ್ತು ಬೆಂಗಳೂರು ನಗರದಲ್ಲಿ ವೈವಿಧ್ಯಮಯ ಮೆಟ್ರೋಪಾಲಿಟನ್ ಗ್ರಾಹಕರಿಗೆ ಅನನ್ಯವಾದ ಆಭರಣಗಳನ್ನು ವಿನ್ಯಾಸ ಮಾಡಲಾಗಿದೆ.

ಈ ಸ್ಟೋರ್‍ನ ಅತ್ಯಂತ ವಿಶಿಷ್ಟ ಅಂಶವೆಂದರೆ ಕರಕುಶಲತೆಯ ಮೇಲೆ ನಿರ್ದಿಷ್ಟವಾದ ಗಮನವನ್ನು ಹೊಂದಿರುವ ಚಿನ್ನ, ವಜ್ರ, ಪ್ಲಾಟಿನಂ ಮತ್ತು ಬೆಳ್ಳಿಯಾದ್ಯಂತ ವ್ಯಾಪಕ.

ಶ್ರೇಣಿಯ ಆಭರಣ ವಿನ್ಯಾಸಗಳು ಇರುವುದು. ಗ್ರಾಹಕರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ನಗರದ ವೈವಿಧ್ಯಮಯ ಸಮುದಾಯಗಳು ಮತ್ತು ಪದ್ಧತಿಗಳಿಗೆ ಸೂಕ್ತವಾದ ಸಂಗ್ರಹಣೆಗಳ ವಿಸ್ತಾರವಾದ ಶ್ರೇಣಿಯನ್ನು ಒದಗಿಸಲಾಗುತ್ತಿದೆ. ಹಗುರವಾದ ವಿನ್ಯಾಸಗಳ ಪ್ರಭಾವಶಾಲಿ ಶ್ರೇಣಿ ಮತ್ತು ವ್ಯಾಪಕ ಶ್ರೇಣಿಯ ಸ್ಟಡ್ಸ್ ಮತ್ತು ಅಮೂಲ್ಯವಾದ ಆಭರಣಗಳನ್ನು ಈ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆ.

ಸ್ಟೋರ್ ನಿರೀಕ್ಷಿತ ವಧುಗಳಿಗೆ ವಿಶೇಷವಾದ ಮದುವೆಯ ಕೊಠಡಿಯನ್ನು ಮತ್ತು ವಿಶೇಷ ಗ್ರಾಹಕರಿಗೆ ಖಾಸಗಿ ಸೂಟ್‍ಗಳನ್ನು ಒಳಗೊಂಡಿದೆ. ವರ್ಧಿತ ಶಾಪಿಂಗ್ ಅನುಭವವಕ್ಕಾಗಿ ಸಾಲಿಟೇರ್ ತಜ್ಞರು ಮತ್ತು ವೈಯಕ್ತಿಕ ಶಾಪರ್‍ಗಳ ಸಹಾಯವನ್ನು ಒಳಗೊಂಡಂತೆ ಇದು ಅತ್ಯುತ್ತಮ ವರ್ಗದ ವೈಯಕ್ತಿಕಗೊಳಿಸಿದ ಸೇವೆಗಳನ್ನು ಸಹ ನೀಡುತ್ತದೆ.

ಈ ಸ್ಟೋರ್‍ನಲ್ಲಿ ಬಾಟಿಕ್ ಅನುಭವವನ್ನು ನೀಡುವ ನಿಟ್ಟಿನಲ್ಲಿ ಆಂತರಿಕ ವಿನ್ಯಾಸಕರು ಮತ್ತು ತಜ್ಞರ ನೆರವಿನೊಂದಿಗೆ ಕಸ್ಟಮೈಸ್ ಮಾಡಲು ಹೇಳಿ ಮಾಡಿಸಿದ ಸೂಟ್ ಅನ್ನು ಸಹ ವ್ಯವಸ್ಥೆಗೊಳಿಸಲಾಗಿದೆ. ಡಿಜಿಟಲ್ ಸ್ಕ್ರೀನ್‍ಗಳಯ ಮತ್ತು ಸರಿಸಾಟಿಯಿಲ್ಲದ ಹಜಾರ ಸೌ¯ಭ್ಯಗಳು ಉತ್ತಮ ಸ್ಟೋರ್‍ನ ವಾತಾವರಣಕ್ಕೆ ಕೊಡುಗೆ ನೀಡುತ್ತವೆ.

ಇದಲ್ಲದೇ, ಗ್ರಾಹಕರಿಗೆ ಓಮ್ನಿ ಚಾನೆಲ್ ಅನುಭವವನ್ನು ನೀಡಲಾಗುತ್ತದೆ. ಇದರ ಜೊತೆಗೆ ಸ್ಟೋರ್‍ನ ದೊಡ್ಡ ಪಾರ್ಕಿಂಗ್ ಪ್ರದೇಶ ಮತ್ತು ಆರಾಮದಾಯಕವಾದ ವೇಯ್ಟಿಂಗ್ ಪ್ರದೇಶಗಳೊಂದಿಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಖಾತರಿಪಡಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂಪಿ ಅಹ್ಮದ್ ಅವರು, “ಜನವರಿ ತಿಂಗಳಲ್ಲಿ 22 ಹೊಸ ಸ್ಟೋರ್‍ಗಳನ್ನು ಆರಂಭಿಸುವ ಮೂಲಕ ನಾವು ಅತ್ಯದ್ಭುತವಾದ ರೀತಿಯಲ್ಲಿ ಹೊಸ ವರ್ಷವನ್ನು ಆರಂಭಿಸುತ್ತಿದ್ದೇವೆ. ಈ ಆರ್ಟಿಸ್ಟ್ರಿ ಸ್ಟೋರ್ ಅನುಭವವು ನಮ್ಮ ಬ್ರ್ಯಾಂಡ್‍ನಿಂದ ಒಂದು ಅನನ್ಯ ಕೊಡುಗೆಯಾಗಿದೆ.

ಇದು ಬೆಂಗಳೂರಿನ ವಿವೇಚನಾಶೀಲ ಗ್ರಾಹಕರಿಗೆ ವರ್ಧಿತ ಶಾಪಿಂಗ್ ಅನುಭವ ಮತ್ತು ದೇಶಾದ್ಯಂತದ ಕಲಾತ್ಮಕ ವಿನ್ಯಾಸಗಳ ಸಾಟಿಯಿಲ್ಲದ ಆಯ್ಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಸಾಧಾರಣ ಸೇವೆಗಳು ಮತ್ತು ಸರಿಸಾಟಿಯಿಲ್ಲದ ಗುಣಮಟ್ಟವನ್ನು ಒದಗಿಸುವ ನಮ್ಮ 28 ವರ್ಷಗಳ ಪರಂಪರೆಯನ್ನು ನಾವು ಮುಂದುವರಿಸುವುದರಿಂದ ನಮ್ಮ ಗ್ರಾಹಕರಿಗೆ ನಮ್ಮ ಬದ್ಧತೆ ಬಲವಾಗಿ ಉಳಿಯುತ್ತದೆ’’ ಎಂದು ಅಭಿಪ್ರಾಯಪಟ್ಟರು.

ವ್ಯಾಪಾರದ ಅಭ್ಯಾಸಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ನಾವು ಹೆಸರುವಾಸಿಯಾಗಿದ್ದೇವೆ. ದೇಶಾದ್ಯಂತ ಏಕರೂಪವಾದ ಚಿನ್ನದ ದರಗಳನ್ನು ನೀಡುವ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಜಾರಿಗೆ ತಂದಿದ್ದೇವೆ ಮತ್ತು ಆಭರಣಗಳಿಗೆ ಸಮಂಜಸವಾದ ಮೇಕಿಂಗ್ ಶುಲ್ಕಗಳನ್ನು ನಿಗದಿಪಡಿಸುವ ಮೇಲೆ ಕೇಂದ್ರೀಕರಿಸುವ ನ್ಯಾಯೋಚಿತ ಬೆಲೆಯ ಭರವಸೆಯಂತಹ
ಬ್ರ್ಯಾಂಡ್‍ನ ವಿಶಿಷ್ಟ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ.

ಈಗ ಗ್ರಾಹಕರು 4.9% ರಿಂದ ಮೇಕಿಂಗ್ ಶುಲ್ಕದಲ್ಲಿ ಆಭರಣಗಳನ್ನು ಖರೀದಿಸಬಹುದಾಗಿದೆ. ಈ ಎರಡೂ ಉಪಕ್ರಮಗಳು ಗ್ರಾಹಕರಿಗೆ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಇದಲ್ಲದೇ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗೆ ಸ್ಟೋನ್ ತೂಕ, ನಿವ್ವಳ ತೂಕ ಮತ್ತು ಆಭರಣದ ಸ್ಟೋನ್ ಶುಲ್ಕವನ್ನು ಸೂಚಿಸುವ ಪಾರದರ್ಶಕ ಬೆಲೆ,

ಆಭರಣಗಳಿಗೆ ಜೀವಮಾನದ ನಿರ್ವಹಣೆ, ಹಳೆಯ ಚಿನ್ನಾಭರಣಗಳ ಮರುಮಾರಾಟ ಮಾಡವ ವೇಳೆ ಚಿನ್ನಕ್ಕೆ 100 ಪ್ರತಿಶತ ಮೌಲ್ಯ ಸೇರಿದಂತೆ 10 ಭರವಸೆಗಳ ಭರವಸೆಯನ್ನು ನೀಡುತ್ತದೆ. ಚಿನ್ನಾಭರಣಗಳ ವಿನಿಮಯದ ಮೇಲೆ ಶೂನ್ಯ ಕಡಿತ, ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ 100 ಪ್ರತಿಶತ ಬಿಐಎಸ್ ಹಾಲ್‍ಮಾರ್ಕಿಂಗ್, ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳು ಜಾಗತಿಕ ಮಾನದಂಡಗಳ 28 ಅಂಶಗಳ ಗುಣಮಟ್ಟದ ಪರಿಶೀಲನೆ, ಮರು ಖರೀದಿ ಖಾತರಿ, ಜವಾಬ್ದಾರಿಯುತವಾದ ಸೋರ್ಸಿಂಗ್ ಮತ್ತು ನ್ಯಾಯೋಚಿತವಾದ ಕಾರ್ಮಿಕ ಪದ್ಧತಿಗಳನ್ನು ಖಚಿತಪಡಿಸುತ್ತದೆ.

ಗ್ರೂಪ್‍ನ ಸಿಎಸ್‍ಆರ್ ಉಪಕ್ರಮದ ಭಾಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಎಂಜಿ ರಸ್ತೆ ಸ್ಟೋರ್‍ನಲ್ಲಿ ಬರುವ ಲಾಭಾಂಶದಲ್ಲಿ 5% ರಷ್ಟು ಹಣವನ್ನು ಜನೋಪಕಾರಿ ಕಾರ್ಯಗಳಿಗೆ ವಿನಿಯೋಗಿಸಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap