ಮಲಬಾರ್ ಗ್ರೂಪ್‌ನಿಂದ ಬೆಂಗಳೂರಿನಲ್ಲಿ ಅಜ್ಜಿ ಮನೆ ನಿರ್ಮಾಣ

ಬೆಂಗಳೂರು

      ದೇಶದ ಅತಿ ದೊಡ್ಡ ಆಭರಣ ಬ್ರಾö್ಯಂಡ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕರ್ನಾಟಕದ ನಿರ್ಗತಿಕ ಮಹಿಳೆಯರಿಗೆ ವಸತಿ ಕಲ್ಪಿಸುವ `ಅಜ್ಜಿ ಮನೆ’ಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ. ಕರ್ನಾಟಕ ಸರ್ಕಾರದ ಮಹಿಳಾ & ಮಕ್ಕಳ ಅಭಿವೃದ್ಧಿ, ವಿಶಿಷ್ಟ ಚೇತನರು & ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಬನಶಂಕರಿಯಲ್ಲಿ ಈ ಉಚಿತ ಆಶ್ರಯ ತಾಣವನ್ನು 20ನೇ ಅಕ್ಟೋಬರ್ 2023 ರಂದು ಉದ್ಘಾಟನೆ ಮಾಡಿದರು.

    ಇಲ್ಲಿ ನಿರ್ಗತಿಕರು ಅಥವಾ ಕುಟುಂಬದಿAದ ಕಡೆಗಣನೆಗೆ ಒಳಗಾದ ವಸತಿಹೀನ ಮಹಿಳೆಯರು ಆಶ್ರಯ ಪಡೆಯಲಿದ್ದು, ಅವರಿಗೆ ಉಚಿತವಾಗಿ ಆಹಾರ ಮತ್ತು ವೈದ್ಯಕೀಯ ನೆರವು, ಮಾನಸಿಕ ಮತ್ತು ದೈಹಿಕ ಆರೋಗ್ಯ ಆರೈಕೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಲಬಾರ್ ಗ್ರೂಪ್‌ನ ಅಧ್ಯಕ್ಷರು ಎಂ ಪಿ ಅಹ್ಮದ್, ಮಲಬಾರ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರು ಅಶರ್ ಓ, ತಣಲ್ ದಯಾ ಪುನರ್ವಸತಿ ಟ್ರಸ್ಟ್ ಅಧ್ಯಕ್ಷರು ಆಡಿ. ಇದ್ರೀಸ್, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರು ಆರ್.ಅಶೋಕ ಮತ್ತು ಶಾಂತಿನಗರ ಶಾಸಕರು ಎನ್.ಎ.ಹ್ಯಾರಿಸ್ ಅವರು ಉಪಸ್ಥಿತರಿದ್ದರು.

    ಮಲಬಾರ್ ಗ್ರೂಪ್‌ನ ಸಿಎಸ್‌ಆರ್ ಸಂಸ್ಥೆಯಾಗಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಈ  ಅಜ್ಜಿಮನೆಗೆ ಬೆಂಬಲವಾಗಿ ನಿಲ್ಲುತ್ತಿದ್ದು, ಸ್ವಯಂಸೇವಾ ಸಂಸ್ಥೆಯಾಗಿರುವ ತಣಲ್ ಸಂಸ್ಥೆಯು ನಿರ್ವಹಣೆ ಮಾಡುತ್ತದೆೆ. ಸುಮಾರು 14,780 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಜ್ಜಿಮನೆಯಲ್ಲಿ ಏಕಕಾಲಕ್ಕೆ 104 ಮಹಿಳೆಯರಿಗೆ ಆಶ್ರಯ ನೀಡಬಹುದಾಗಿದೆ. ವೃದ್ಧಾಪ್ಯದಲ್ಲಿರುವ ಮಹಿಳೆಯರ ಯೋಗಕ್ಷೇಮ, ಅವರ ಅಗತ್ಯತೆಗಳನ್ನು ಪೂರೈಸುವುದು, ಹೀಗೆ ಹಲವು ಸೇವೆಗಳನ್ನು ಕಲ್ಪಿಸುವ ಮೂಲಕ ಅವರ ಜೀವನಮಟ್ಟವನ್ನು ಹೆಚ್ಚಿಸಲು ಸಜ್ಜುಗೊಂಡಿದೆ.

    ವಿಶೇಷವಾಗಿ ವೃದ್ಧರನ್ನು ನೋಡಿಕೊಳ್ಳುವ ಬಗ್ಗೆ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಪ್ರತ್ಯೇಕ ವೈದ್ಯಕೀಯ ತಂಡವು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಈ ಮಹಿಳೆಯರ ಆರೈಕೆ ಮಾಡಲಿದ್ದಾರೆ.

   ಅಜ್ಜಿ ಮನೆಯು ನಿರ್ಗತಿಕರಿಗೆ ಸುರಕ್ಷಿತ ಆಶ್ರಯ ತಾಣಗಳನ್ನು ಕಲ್ಪಿಸುವ ಮಲಬಾರ್ ಗ್ರೂಪ್‌ನ ಮಿಷನ್‌ನ ಒಂದು ಭಾಗವಾಗಿದೆ. ಇದರಿಂದ ಅವರು ಸ್ಥಿರತೆಯನ್ನು ಮರಳಿ ಪಡೆಯಬಹುದು, ಜೀವನವನ್ನು ಮರು ನಿರ್ಮಾಣ ಮಾಡಿಕೊಳ್ಳಬಹುದು ಮತ್ತು ಜೀವನದಲ್ಲಿ ಮತ್ತೆ ಭರವಸೆಯನ್ನು ಕಂಡುಕೊಳ್ಳಬಹುದಾಗಿದೆ. ಇದು ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಸಮಾಜದಲ್ಲಿ ದುರ್ಬಲ ವರ್ಗಗಳನ್ನು ಮೇಲ್ಮಟ್ಟಕ್ಕೇರಿಸಲು ಗ್ರೂಪ್ ತನ್ನ ಬದ್ಧತೆಯನ್ನು ತೋರಿಸುತ್ತದೆ.

    ಮಲಬಾರ್ ಚಾರಿಟೇಬಲ್ ಟ್ರಸ್ಟ್ ತೆಲಂಗಾಣದ ಹೈದ್ರಾಬಾದ್ ಮತ್ತು ತಮಿಳುನಾಡಿನಲ್ಲಿಯೂ ಇಂತಹ ಅಜ್ಜಿ ಮನೆಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ.

    ಈ ಅಜ್ಜಿ ಮನೆಯ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ ಪಿ ಅಹ್ಮದ್ ಅವರು, “ಸಮಾಜದಲ್ಲಿ ದುರ್ಬಲ ವರ್ಗದವರು ಮತ್ತು ವ್ಯಕ್ತಿಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಗೌರವಯುತವಾಗಿಡುವಂತೆ ಮಾಡುವಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತಿದೆ. ನಮ್ಮ ವ್ಯವಹಾರ ಇರುವ ಪ್ರದೇಶಗಳ ಸಮಾಜಕ್ಕೆ ನಾವು ಇಂತಹ ಸೇವೆಗಳ ಮೂಲಕ ಮರಳಿ ನೀಡುವ ಬದ್ಧತೆಯನ್ನು ಹೊಂದಿದ್ದೇವೆ.

   ನಮ್ಮ ಸಮಾಜದಲ್ಲಿ ದುರ್ಬಲ ವರ್ಗದ ಜನರ ಜೀವನದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುವ ದೃಷ್ಟಿಯೊಂದಿಗೆ ನಾವು ಅಜ್ಜಿ ಮನೆಯನ್ನು ಸ್ಥಾಪಿಸುವ ನಿರ್ಧಾರ ಮಾಡಿದ್ದೇವೆ. ಈ ಅಜ್ಜಿ ಮನೆಯನ್ನು ನಿರ್ಮಾಣ ಮಾಡಲು ಎಲ್ಲಾ ರೀತಿಯ ನೆರವು ಮತ್ತು ಬೆಂಬಲ ನೀಡಿದ್ದಕ್ಕಾಗಿ ಬೆಂಗಳೂರು ಆಡಳಿತಕ್ಕೆ ನಾವು ಆಭಾರಿಯಾಗಿದ್ದೇವೆ. ಅಗತ್ಯವಿರುವ ಹಲವಾರು ಜನರು ಗೌರವಯುತವಾದ ಜೀವನ ಸಾಗಿಸಲು ಈ ಮನೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದರು.

   1993ರಲ್ಲಿ ಆರಂಭವಾದಾಗಿನಿಂದ ಮಲಬಾರ್ ಗ್ರೂಪ್ ಜೀವನದಲ್ಲಿ ರೂಪಾಂತರ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಗ್ರೂಪ್ ತನ್ನ ವ್ಯವಹಾರದಲ್ಲಿ ಬರುವ ಲಾಭಾಂಶದಲ್ಲಿ ಶೇ.5 ರಷ್ಟನ್ನು ಸಮುದಾಯದ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣ ಮತ್ತು ವಸತಿ, ಇತ್ಯಾದಿ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗ ಮಾಡುತ್ತಿದೆ. ಆರಂಭದ ದಿನದಿಂದ ಮಲಬಾರ್ ಗ್ರೂಪ್ ಇದುವರೆಗೆ 212 ಕೋಟಿ ರೂಪಾಯಿಗಳನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ವೆಚ್ಚ ಮಾಡಿದ್ದು, ಇದರಿಂದ ದೇಶಾದ್ಯಂತ 44.19 ಲಕ್ಷ ಜನರಿಗೆ ಅನುಕೂಲವಾಗಿದೆ.

    ದಯಾ ಪುನರ್ವಸತಿ ಟ್ರಸ್ಟ್ ಸಹಯೋಗದಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಇತ್ತೀಚೆಗೆ `ಹಸಿವು ಮುಕ್ತ ಜಗತ್ತು’ ನಿರ್ಮಾಣವೆಂಬ ವಿನೂತನವಾದ ಉಪಕ್ರಮದ ಅಭಿಯಾನವನ್ನು ಆರಂಭಿಸಿದೆ. 2030 ರ ವೇಳೆಗೆ ಹಸಿವು ನಿರ್ಮೂಲನೆ ಮಾಡುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಡಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಈ ಅಭಿಯಾನವನ್ನು ಹಮ್ಮಿಕೊಂಡಿದೆ.

   ಈ ಉಪಕ್ರಮದಡಿ ಮಲಬಾರ್ ಗ್ರೂಪ್ ಬೀದಿಬದಿಯ 30,000 ನಿರ್ಗತಿಕರಿಗೆ ಪ್ರತಿದಿನ ಊಟವನ್ನು ಒದಗಿಸುತ್ತಿದೆ. ದೇಶದ 13 ರಾಜ್ಯಾಗಳ 31 ನಗರಗಳಲ್ಲಿ ಈ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಇದುವರೆಗೆ 39 ಲಕ್ಷ ಊಟವನ್ನು ವಿತರಣೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕದಲ್ಲಿ 8 ಲಕ್ಷ ಊಟವನ್ನು ವಿತರಣೆ ಮಾಡಲಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಉಡುಪಿ ಮತ್ತು ದಾವಣಗೆರೆ ನಗರಗಳಲ್ಲಿ ಪ್ರತಿದಿನ 4500 ಜನರಿಗೆ ಊಟ ನೀಡಲಾಗುತ್ತಿದೆ.

    ತನ್ನ ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ ಉಪಕ್ರಮಗಳಡಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಪ್ರತಿಭಾನ್ವಿತ ಬಡ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನಗಳನ್ನು ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ನೆರವಾಗಿ ಅವರ ಶೈಕ್ಷಣಿಕ ಆಕಾಂಕ್ಷೆಗಳನ್ನು ಸಾಕಾರಗೊಳಿಸುತ್ತಿದೆ. ಇದುವರೆಗೆ 13 ರಾಜ್ಯಗಳ 75 ಹಳ್ಳಿಗಳ 77,600 ಕ್ಕೂ ಹೆಚ್ಚು ಮಕ್ಕಳಿಗೆ ಮಲಬಾರ್ ಗ್ರೂಪ್ ವಿದ್ಯಾರ್ಥಿವೇತನದ ಮೂಲಕ ನೆರವಾಗಿದೆ. ಕರ್ನಾಟಕದಲ್ಲಿ 22,000 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದ್ದು, ಯಾವುದೇ ಧರ್ಮ, ಜಾತಿ, ಪಂಗಡ ಅಥವಾ ಭಾಷೆಯ ಗಡಿ ಇಲ್ಲದೇ ಈ ವಿದ್ಯಾರ್ಥಿ ವೇತನವನ್ನು ಪ್ರತಿಭೆ ಮತ್ತು ಅಗತ್ಯತೆ ಆಧಾರದಲ್ಲಿ ನೀಡಲಾಗುತ್ತಿದೆ.

    2023-24 ನೇ ಸಾಲಿನಲ್ಲಿ ರಾಜ್ಯಾದ್ಯಂತ 6000 ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 5.13 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಆರೋಗ್ಯ ರಕ್ಷಣೆ ಉಪಕ್ರಮದ ಭಾಗವಾಗಿ ಮಲಬಾರ್ ಗ್ರೂಪ್ ಅಗತ್ಯ ಇರುವ ದುರ್ಬಲ ವರ್ಗದ ಜನರಿಗೆ ಔಷಧಿಗಳ ಪೂರೈಕೆ ಮತ್ತು ವೈದ್ಯಕೀಯ ಕ್ಲಿನಿಕ್‌ಗಳ ವ್ಯವಸ್ಥೆಯನ್ನು ಕಲ್ಪಿಸುತ್ತಾ ಬರುತ್ತಿದೆ.

    ಇದಲ್ಲದೇ, ಕೇರಳದ ಕೋಝಿಕೋಡ್‌ನಲ್ಲಿನ ಆಸ್ಪತ್ರೆಯಲ್ಲಿ ಬಡಜನರ ಚಿಕಿತ್ಸೆಗೆಂದೇ ಪ್ರತ್ಯೇಕ ಕಿಡ್ನಿ ಕೇರ್ ಸೆಂಟರ್ ಅನ್ನು ಆರಂಭಿಸಿದೆ. ಈ ಉಪಕ್ರಮದಡಿ 4,100 ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು 6 ರಾಜ್ಯಗಳಲ್ಲಿ ಆಯೋಜಿಸಲಾಗಿದ್ದು, ಇದರಿಂದ 7,60,394 ಜನರಿಗೆ ಅನುಕೂಲವಾಗಿದೆ.

    ವಸತಿಹೀನರಿಗೆ ವಸತಿ ಕಲ್ಪಿಸುವ ಯೋಜನೆಯಡಿ ಮಲಬಾರ್ ಗ್ರೂಪ್, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಿಂದಾಗಿ ಇದುವರೆಗೆ 5 ರಾಜ್ಯಗಳ 38 ಹಳ್ಳಿಗಳ 20,500 ಜನರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap