ಮಳವಳ್ಳಿ ಪ್ರಕರಣ: ಹೋಟೆಲ್​ನಲ್ಲೇ ಆಹಾರಕ್ಕೆ ವಿಷ ಬೆರೆಸಿರುವ ಶಂಕೆ, ತನಿಖೆ ಚುರುಕು

ಮಂಡ್ಯ

    ಮಂಡ್ಯ  ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ  ವಿಷಾಹಾರದಿಂದಾಗಿ ಇಬ್ಬರು ಮೃತಪಟ್ಟ ಪ್ರಕರಣದ ತನಿಖೆ ಇದೀಗ ಚುರುಕುಗೊಂಡಿದ್ದು, ಆಹಾರ ತಯಾರಿಸಲಾದ ಹೋಟೆಲ್‌ನಲ್ಲೇ ವಿಷಕಾರಿ ಅಂಶ ಮಿಶ್ರಣ ಮಾಡಿರುವ ಶಂಕೆ ಇದಿಗ ವ್ಯಕ್ತವಾಗಿದೆ. ಕಿಡಿಗೇಡಿಗಳು ವಿಷಕಾರಿ ಪದಾರ್ಥವನ್ನು ಆಹಾರಕ್ಕೆ ಮಿಶ್ರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಅನುಮಾನಗಳು ವ್ಯಕ್ತವಾಗಿವೆ. ಅಡುಗೆಗೆ ಬಳಸುವ ನೀರು ಅಥವಾ ಆಹಾರ ಪದಾರ್ಥದಲ್ಲಿ ಮಿಶ್ರಣ ಮಾಡಿರಬಹುದು. ಹೋಟೆಲ್ ಮಾಲೀಕ ಸಿದ್ದರಾಜು ಮೇಲಿನ ದ್ವೇಷಕ್ಕೆ ಕಿಡಿಗೇಡಿಗಳು ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Recent Articles

spot_img

Related Stories

Share via
Copy link