ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ…..!

ಬೆಂಗಳೂರು 

    ರಾಜ್ಯ ರಾಜಾಧಾನಿಯಲ್ಲಿ ಒಂದು ವಾರದಿಂದ ಹಿಂಗಾರು ಮಳೆ ಚುರುಕಾಗಿದ್ದು, ಮಳೆ ಪರಿಣಾಮ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಈ‌ ವಾರ 10 ರಿಂದ‌ 20 ರೂಪಾಯಿ‌ ಹಚ್ಚಾಗಿದ್ದು,‌ ದೀಪಾವಳಿ ಹಬ್ಬದ ವೇಳೆ‌ಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ತರಕಾರಿಗಳ‌ ಬೆಲೆ‌ಗೆ ಗ್ರಾಹಕರು ಶಾಕ್ ಆಗುತ್ತಿದ್ದಾರೆ.

    ಹಿಂಗಾರು ಮಳೆಯ ಪರಿಣಾಮ ತರಕಾರಿಗಳ‌ ಬೆಲೆ ಜಾಸ್ತಿಯಾಗಿದೆ.‌ ಕಳೆದ ವಾರ ಟೊಮೆಟೊ ಬೆಲೆ 50 ರೂ ಇತ್ತು.‌ ಈ ವಾರ 60 ರೂ ಆಗಿದೆ. ಇನ್ನು ಆಲೂಗಡ್ಡೆ ಕಳೆದ ವಾರ 30 ರೂ ಇತ್ತು. ಈ ವಾರ 45 ರೂ ಆಗಿದೆ.‌ ಇನ್ನು ಈರುಳ್ಳಿಯಂತು‌ ಮಾರುಕಟ್ಟೆಯಲ್ಲಿ ಕೆಜಿಗೆ 60 ರೂ ಇದ್ದರೆ, ತಳ್ಳುವ ಗಾಡಿಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದ ಅಂಗಡಿಗಳಲ್ಲಿ 70 ರಿಂದ 100 ರೂ. ರವರೆಗೂ ವ್ಯಾಪಾರವಾಗುತ್ತಿದೆಯಂತೆ.

    ಇನ್ನು ಕ್ಯಾರೆಟ್, ಬೀನ್ಸ್, ನಾಟಿ ಬಟಾಣಿ, ಹಸಿರು, ಕ್ಯಾಪ್ಸಿಕಮ್, ಮೆಣಸಿನಗಾಯಿ ಎಲ್ಲವೂ 100 ರ ಗಡಿದಾಟಿವೆ. ಹಿಂಗಾರು ಮಳೆಯ ಪರಿಣಾಮ ತರಕಾರಿಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ದೀಪಾವಳಿ ಹಬ್ಬಕ್ಕೆ ಈ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ವಾರ ತರಾಕಾರಿಗಳ ಬೆಲೆ ಎಷ್ಟೆಷ್ಟು ಅಂತ ನೋಡುವುದಾದರೆ,

   ಈ ಬೆಲೆ ಇನ್ನು ಮೂರು ದಿನಗಳು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಸದ್ಯ ಮಳೆ ಇರುವ ಕಾರಣ ಈರುಳ್ಳಿ, ಟೋಮಾಟೋ, ಆಲೂಗಡ್ಡೆ, ಸೇರಿದಂತೆ ಹಲವು ತರಕಾರಿಗಳು ಮಳೆಗೆ ಹಾನಿಯಾಗಿವೆ. ಹೀಗಾಗಿ ತರಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹಾಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ.‌ ಅಲ್ಲದೇ ಇದೀಗ ಮದುವೆ ಸೀಸನ್​ ಆಗಿರುವುದರಿಂದ ತರಕಾರಿಗೆ ಹೆಚ್ಚು ಬೇಡಿಕೆ ಇದೆ‌. 

   ಆದರೆ ತರಕಾರಿಗಳು ಕಡಿಮೆ ಪೂರೈಕೆಯಾಗುತ್ತಿರುವ ಪರಿಣಾಮ ಬೆಲೆ ಏರಿಕೆಯಾಗಿದೆ. ಹೀಗಾಗಿ ವ್ಯಾಪಾರ ವಹಿವಾಟು‌ ಅಷ್ಟಾಗಿ ನಡೆಯುತ್ತಿಲ್ಲ. ಒಂದು ಕೆಜೆ ತೆಗೆದುಕೊಳ್ಳುವಲ್ಲಿ ಅರ್ಧ ಕೆಜೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ವ್ಯಾಪಾರ ವಹಿವಾಟು‌ ಕಡಿಮೆ ಇದೆ ಅಂತ ವ್ಯಾಪಾರಸ್ಥರಾದ ಮುಬಾರಕ್ ಅವರು ಹೇಳಿದ್ದಾರೆ. 

   ತರಕಾರಿಗಳ ಬೆಲೆ‌ ತುಂಬ ದುಬಾರಿಯಾಗಿದೆ.‌ ಬೆಲೆ‌ ಕೇಳಿಯೇ ಶಾಕ್ ಆಗುತ್ತಿದೆ.‌ ಆದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಮಳೆ ಕಾರಣ ಹೇಳುತ್ತಿದ್ದಾರೆ. ನಾವು ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಬೆಲೆ ಜಾಸ್ತಿಯಾದ್ರು, ಕಡಿಮೆಯಾದ್ರು ತರಕಾರಿಯನ್ನ ಖರೀದಿ ಮಾಡಲೇಬೇಕು. ಮಧ್ಯಮ ವರ್ಗದವರಿಗೆ ಈ ಬೆಲೆ ಏರಿಕೆ ತುಂಬ ಕಷ್ಟ. ಹೀಗಾಗಿ ಇಂದೆ ಬಂದು ತರಾಕಾರಿಗಳ‌ನ್ನ ಖರೀದಿ ಮಾಡುತ್ತಿದ್ದೇವೆ ಅಂತ ಗ್ರಾಹಕರಾದ ಚೈತ್ರ ಅವರು ಹೇಳಿದ್ದಾರೆ. 

   ಹಿಂಗಾರು ಮಳೆಯ ಆರ್ಭಟದಿಂದಾಗಿ ಜನರು ರೋಸಿ ಹೋಗಿದ್ದು, ಈ ಮಧ್ಯೆ ರೈತರಿಗೆ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ. ತರಕಾರಿ ಬೆಲೆ ಫುಲ್ ದುಬಾರಿಯಾಗಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಹಬ್ಬದ ವೇಳೆ ತರಕಾರಿ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

Recent Articles

spot_img

Related Stories

Share via
Copy link