ಶಿರಸಿ:
ಕಳೆದ ಕೆಲ ದಿನಗಳ ಅತಿಯಾದ ಮಳೆಯಿಂದ ಕುಳವೆ ಗ್ರಾಮ ಪಂಚಾಯತದ ಹಲಸಿನಕೈ ಊರಿನ ಲಕ್ಷ್ಮೀ ದೇವೆಂದ್ರ ನಾಯ್ಕ ಎಂಬುವರ ಮನೆ ಕುಸಿದು ಬಿದ್ದು ತೀವ್ರ ತೊಂದರೆಯಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕರ ಗಮನಕ್ಕೆ ಬಂದು ಅವರ ಅನುಪಸ್ಥಿತಿಯಲ್ಲಿ ಪುತ್ರ ಅಶ್ವಿನ್ ನಾಯ್ಕ ಆರ್ಥಿಕ ಸಹಾಯ ಮಾಡಿದ್ದು, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಶ ಗೌಡ, ಮುಖಂಡರಾದ ಎಸ್.ಕೆ.ಭಾಗ್ವತ್ ಸಮ್ಮುಖದಲ್ಲಿ ಮಹಿಳೆಗೆ ಸಹಾಯ ಮಾಡಲಾಯಿತು.
ಗ್ರಾಮ ಪಂಚಾಯತ ಸದಸ್ಯ ಸಂದೇಶ ಭಟ್ ಬೆಳಖಂಡ, ವಿಷಯವನ್ನು ಶಾಸಕರಿಗೆ ಹಾಗೂ ಬ್ಲಾಕ್ ಅಧ್ಯಕ್ಷರ ಗಮನಕ್ಕೆ ತಂದಿರುವ ಮುಖಂಡ ಭರತ್ ಹೆಗಡೆ ಕೆಂಚಗದ್ದೆ , ಕುಳವೆ ಘಟಕಾಧ್ಯಕ್ಷರಾದ ಮಂಜುನಾಥ ಭಟ್ ಬೆಳಖಂಡ, ಬೂತ್ ಅಧ್ಯಕ್ಷರಾದ ಅಶೋಕ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಸಕರು ಬಂದ ಬಳಿಕ ವಿಷಯ ವಿವರಿಸಿ ಹೆಚ್ಚಿನ ಸಹಾಯ ನೀಡುವ ಕುರಿತು ಬ್ಲಾಕ್ ಅಧ್ಯಕ್ಷರಾದ ಜಗದೀಶ ಗೌಡರು ಭರವಸೆ ನೀಡಿದರು.








