ಗುಳೇದಗುಡ್ಡ:
ಪಟ್ಟಣದ ನಗ್ಲೀಪೇಟೆಯ ವಾರ್ಡ ನಂ 1 ರಲ್ಲಿನ ರಸ್ತೆಯ ಮೇಲೆ ಮಳೆ ನೀರು ನಿಂತುಕೊಂಡು ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಮಳೆ ಬಂದಾಗಲೆಲ್ಲಾ ರಸ್ತೆಯ ಮೇಲೆ ಈ ರೀತಿ ನೀರು ನಿಲ್ಲುತ್ತದೆ. ದ್ವಿಚಕ್ರ ವಾಹನಗಳ ಸವಾರರು ನಿಂತ ನೀರಿನಲ್ಲಿಯ ಹರಸಹಾಸಮಾಡಿ ಸಂಚಾರ ಮಾಡುವಂತಾಗಿದೆ.
ಗಟಾರದಲ್ಲಿ ಹೂಳುತುಂಬಿದ್ದರಿಂದ ಮಳೆನೀರು ಹರಿದು ಹೋಗಲು ಜಾಗವಿಲ್ಲದೇ ರಸ್ತೆಯಲ್ಲಿಯೇ ನೀರು ನಿಲ್ಲುತ್ತದೆ. ಈ ಬಗ್ಗೆ ವಾರ್ಡಿನ ಸದಸ್ಯರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಮಳೆ ನೀರು ನಿಂತು ಮಲೀನಗೊಳ್ಳುತ್ತಿದ್ದರೂ ಪುರಸಭೆಯವರು ಗಮನ ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದು, ಕೂಡಲೇ ಗಟಾರವನ್ನು ದುರಸ್ತಿ ಮಾಡಿ, ರಸ್ತೆಯಲ್ಲಿ ಮಳೆ ನೀರುನಿಲ್ಲದಂತೆ ಕ್ರಮಕೈಗೊಳ್ಳಬೇಕು ಎಂದು ವಾರ್ಡಿನ ರೆಡ್ಡೆಪ್ಪ ಮನ್ನಿಕಟ್ಟಿ. ಕುಮಾರ ಕೊಳ್ಳಿ. ರಮೇಶ ಮನ್ನಿಕಟ್ಟಿ. ಕಾಶಿನಾಥ ಗೌವಳಿ. ಶಿವಪುತ್ರಪ್ಪ ಮಾಳಗಿ. ಶ್ರೀಕಾಂತ ಕೊಳ್ಳಿ. ಅಶೋಕ ರಾಠೋಡ. ಮುತ್ತು ಚಿತ್ರಗಾರ. ರಾಜು ಲಂಗೋಟಿ. ಗಂಗಾಧರ ಮಾಳಗಿ ಮತ್ತಿತರರ ಸಾರ್ವಜನಿಕರು ಆಗ್ರಹಿಸಿದ್ದಾರೆ.








