ಅಡ್ವಾನ್ಸ್ ಕೊಟ್ಟಿದ್ದ ಮಾಲೀಕನನ್ನೇ ಹತ್ಯೆಗೈದ ತಂದೆ-ಮಗ

ಬೆಂಗಳೂರು :

      ಅಡ್ವಾನ್ಸ್​ ಹಣ ಕೊಟ್ಟಿದ್ದ ಮಾಲೀಕನನ್ನೇ ತಂದೆ-ಮಗ ಹತ್ಯೆಗೈದಿರುವಂತಹ  ಘಟನೆ ಕಡಬಗೆರೆ ಕ್ರಾಸ್​ನ ಆರ್.ಆರ್.ಇಂಡಸ್ಟ್ರೀಸ್​​ನಲ್ಲಿ ನಡೆದಿದೆ. ರಮೇಶ್​​ ಕೊಲೆಯಾದ ಆರ್.ಆರ್.ಇಂಡಸ್ಟ್ರೀಸ್ ಮಾಲೀಕ. ಸೈಯದ್ ತಾಜುದ್ದೀನ್(50) ಮತ್ತು ಸೈಯದ್ ಅಯೂಬ್​ ಬಂಧಿತರು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಮೇಶ್ ಬಳಿ ಇಬ್ಬರು ಕೆಲಸಗಾರರು 6 ಲಕ್ಷ ರೂ ಅಡ್ವಾನ್ಸ್ ಪಡೆದಿದ್ದರು. ಆದರೆ ಸರಿಯಾಗಿ ಕೆಲಸಕ್ಕೆ ಬಾರದೆ ಸತಾಯಿಸುತ್ತಿದ್ದರು. ಇಬ್ಬರು ಕೂಡ ಕೆಲಸ ಮಾಡದೆ ರಮೇಶ್​ನಿಗೆ ಬೆದರಿಕೆ ಹಾಕುತ್ತಿದ್ದರು. ಮಧ್ಯಾಹ್ನ ಮಾಲೀಕ ರಮೇಶ್ ಜೊತೆಗೆ ಗಲಾಟೆಯಾಗಿದೆ. ಈ ವೇಳೆ ತಂದೆ-ಮಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

Recent Articles

spot_img

Related Stories

Share via
Copy link