ಆಸ್ಟಿನ್:
ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದ ಮಾಲ್‍ವೊಂದರಲ್ಲಿ ರೋಬೋಟ್ ನಾಯಿಯೊಂದು ಓಡಾಡುತ್ತಿದ್ದು, ಇದನ್ನು ಕಂಡು ಮಾಲ್‍ನ ಗ್ರಾಹಕರು ಬೆರಗಾಗಿದ್ದಾರೆ. ರಿವರ್‌ಸೆಂಟರ್ ಮಾಲ್‌ನಲ್ಲಿ ರಾತ್ರಿ 9 ಗಂಟೆಯ ಸುಮಾರಿಗೆ ರೋಬೋಟ್ ನಾಯಿ ನಡೆಸುತ್ತಿರುವ ವಿಡಿಯೊವನ್ನು ಸ್ಯಾನ್ ಆಂಟೋನಿಯೊ ಲೈಫ್‌ಸ್ಟೈಲ್ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ನಾಯಿಯ ಹಾಗೇ ಇರುವ ರೋಬೋಟ್ ಮೆಷಿನ್ ಅನ್ನು ಮಹಿಳೆಯೊಬ್ಬಳು ಸರಪಳಿಯಲ್ಲಿ ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಇದನ್ನು ಕಂಡು ಗ್ರಾಹಕರು ಶಾಕ್ ಆಗಿದ್ದಾರೆ. ಈ ರೋಬೋಟ್ ನಿಜವಾದ ನಾಯಿಗಳಂತೆ ಬೊಗಳುತ್ತದೆ ಎನ್ನಲಾಗಿದೆ. ಇದು ಬಹುಶಃ ಜೀವಂತ ನಾಯಿಗಳ ನಡವಳಿಕೆಯನ್ನು ಅನುಕರಿಸಲು ವಿನ್ಯಾಸಗೊಳಿಸಲಾದ ಅದರ ಎಐ ಪ್ರೋಗ್ರಾಮಿಂಗ್‌ನ ಭಾಗವಾಗಿದೆ ಎನ್ನಲಾಗಿದೆ. ಈ ವಿಚಿತ್ರ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ತಂತ್ರಜ್ಞಾನವನ್ನು ನೋಡಿ ಆಶ್ಚರ್ಯಪಟ್ಟರೆ, ಇನ್ನು ಕೆಲವರು ಇದನ್ನು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ.
ವರದಿಯ ಪ್ರಕಾರ, ರೋಬೋಟ್ ಬಗ್ಗೆ ಹೇಳುವುದಾದರೆ ಅದ ಕುಳಿತುಕೊಳ್ಳುವುದು, ಕಾಲುಗಳನ್ನು ಅಲ್ಲಾಡಿಸುವುದು, ಜಿಗಿಯುವುದು ಮತ್ತು ಪುಟಿಯುವುದು ಮುಂತಾದ ನಾಯಿಯಂತಹ ನಡವಳಿಕೆಗಳನ್ನು ಇದು ಕಾರ್ಯಗತಗೊಳಿಸಬಹುದು ಎಂದು ಹೇಳಿದ್ದಾರೆ.
