ಅಹ್ಮದಾಬಾದ್:
ದೇಶದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾದ ಗುಜರಾತ್, ಹಸಿವು ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆಯಲ್ಲಿ ಹಿಂದೆ ಬಿದಿದ್ದು, 5 ವರ್ಷದೊಳಗಿನ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಕಡಿಮೆ ತೂಕ ಸಮಸ್ಯೆ ಕಂಡಬಂದಿದೆ ಎಂದು ನೀತಿ ಆಯೋಗ ವರದಿಯಿಂದ ತಿಳಿದುಬಂದಿದೆ.
ಗುಜರಾತ್ ಆರ್ಥಿಕವಾಗಿ ಮುಂದಿದ್ದರೂ ಹಸಿವಿನ ವಿರುದ್ಧ ಹೋರಾಡಲು ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸುವಲ್ಲಿ ಕೆಳ ಸ್ಥಾನದಲ್ಲಿದೆ ಎಂದು NITI ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಹಸಿವಿನ ಸೂಚ್ಯಂಕದಲ್ಲಿ ಭಾರತದ ರಾಜ್ಯಗಳಲ್ಲಿ ಪಶ್ಚಿಮ ರಾಜ್ಯ ಗುಜರಾತ್ 25ನೇ ಸ್ಥಾನದಲ್ಲಿದೆ ಎಂದು NITI ಆಯೋಗ ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ 2023-24 ಸುಸ್ಥಿರ ಅಭಿವೃದ್ಧಿ ಗುರಿ (SDG) ವರದಿ ಹೇಳುತ್ತದೆ. ಗುಜರಾತ್‌ನಲ್ಲಿ ಐದು ವರ್ಷದೊಳಗಿನ ಶೇ.39.7% ಮಕ್ಕಳು ಕಡಿಮೆ ತೂಕ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ನೀತಿ ಚಿಂತಕರ ಚಾವಡಿಯ ಮಾಹಿತಿಯು ಬಹಿರಂಗಪಡಿಸಿದೆ.
ಸುಸ್ಥಿರ ಅಭಿವೃದ್ಧಿ ಗುರಿ (SDG-2) ಶೂನ್ಯ ಹಸಿವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು 2015 ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಿದ 17 SDG ಗಳಲ್ಲಿ ಒಂದಾಗಿದೆ. ಗುಜರಾತ್ SDG 2 ಸೂಚ್ಯಂಕದಲ್ಲಿ ಕೇವಲ 41 ಅಂಕಗಳನ್ನು ಗಳಿಸಿದೆ, ಹಸಿವಿನ ಹೋರಾಟದಲ್ಲಿ ಒಡಿಶಾ, ಮಧ್ಯಪ್ರದೇಶ ಮತ್ತು 23 ಇತರ ರಾಜ್ಯಗಳ ಹಿಂದೆ ಬಂದಿದೆ. 2020-21ರಲ್ಲಿ ಗುಜರಾತ್‌ಗೆ SDG-2 ಸೂಚ್ಯಂಕ 46, ಮತ್ತು 2019-20ರಲ್ಲಿ 41ನೇ ಸ್ಥಾನದಲ್ಲಿತ್ತು. ಇದು 2018 ರಲ್ಲಿ 49ನೇ ಸ್ಥಾನದಲ್ಲಿತ್ತು. ಇದು SDG-2 ಕಾರ್ಯಕ್ಷಮತೆಯಲ್ಲಿ ನಿರಂತರ ಕುಸಿತವನ್ನು ಸೂಚಿಸುತ್ತದೆ.
ನಿತಿ ಆಯೋಗದ ಅಂಕಿಅಂಶಗಳು ಐದಕ್ಕಿಂತ ಕಡಿಮೆ ವಯಸ್ಸಿನ ಶೇ. 39% ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದು, 15-49 ವರ್ಷ ವಯಸ್ಸಿನ 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದಾರೆ ಮತ್ತು ಅದೇ ವಯಸ್ಸಿನ 25.2% ಮಹಿಳೆಯರು 18.5 ಕ್ಕಿಂತ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಹೊಂದಿದ್ದಾರೆ ಎಂದು ತಿಳಿಸುತ್ತದೆ. 2018 ಮತ್ತು 2019 ಕ್ಕೆ ಹೋಲಿಸಿದರೆ ಕಡಿಮೆ ತೂಕ ಮತ್ತು ಅಪೌಷ್ಟಿಕ ಮಕ್ಕಳು ಮತ್ತು ರಕ್ತಹೀನತೆಯ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.
“ಗುಜರಾತ್‌ನ SDG-2 ಸೂಚ್ಯಂಕವು 2020-21 ರಲ್ಲಿ 46 ರಿಂದ 2023-24 ರಲ್ಲಿ 41 ಕ್ಕೆ ಇಳಿದಿದೆ. ಐದು ವರ್ಷದೊಳಗಿನ 39.7% ಮಕ್ಕಳು ಕಡಿಮೆ ತೂಕ ಮತ್ತು 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದು ಪೌಷ್ಟಿಕಾಂಶ-ಕೇಂದ್ರಿತ ಉಪಕ್ರಮಗಳ ಅಗತ್ಯತೆ ಇದೆ. 2030 ರ ವೇಳೆಗೆ ಶೂನ್ಯ ಹಸಿವು ಸಾಧಿಸಲು ತುರ್ತು ಮತ್ತು ಪರ್ಯಾಯ ಹೂಡಿಕೆಯ ಅಗತ್ಯವಿದೆ ಎಂದು ಅಹ್ಮದಾಬಾದ್‌ನ ಸೇಂಟ್ ಕ್ಸೇವಿಯರ್ ಕಾಲೇಜಿನ (ಸ್ವಾಯತ್ತ) ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆತ್ಮನ್ ಶಾ ಹೇಳಿದ್ದಾರೆ.
2023 ರ ಎಂಪಿಐ ವರದಿಯು ಗ್ರಾಮೀಣ ಗುಜರಾತ್ ಜನಸಂಖ್ಯೆಯ ಅರ್ಧದಷ್ಟು ಜನರು ಅಂದರೆ ಶೇ.44.45ರಷ್ಟು ಮಂದಿ ಪೌಷ್ಟಿಕಾಂಶದಿಂದ ವಂಚಿತರಾಗಿದ್ದಾರೆ. ಇದೇ ಅಂಶ ನಗರ ಪ್ರದೇಶಗಳಲ್ಲಿ ಶೇಕಡಾ 28.97 ರಷ್ಟಿದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.
