ವೈರಲ್‌ ಆಯ್ತು ಮಮತ ಕುಲಕರ್ಣಿ ವೀಡಿಯೋ ….!

ನವದೆಹಲಿ: 

    ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರ ಅಧ್ಯಾತ್ಮಿಕ ಜೀವನದ ಹಲವು ಘಟನೆಗಳು ಇತ್ತೀಚೆಗೆ ಸುದ್ದಿಯಾಗಿದ್ದವು.ಮೊದಲನೆಯದ್ದು ಆಕೆ ಕುಂಭಮೇಳದಲ್ಲಿ ಅಖಾಡಗೆ ಸೇರ್ಪಡೆಯಾಗಿದ್ದರೆಂಬುದಾದರೆ, ಆಕೆಗೆ ದೀಕ್ಷೆ ನೀಡಿದ್ದರ ಬಗ್ಗೆ ಹಲವು ಸಾಧುಗಳು ವಿರೋಧ ವ್ಯಕ್ತಪಡಿಸಿದ್ದರು ಆದರೆ ಆ ನಂತರದಲ್ಲಿ ಆಕೆಯನ್ನು ಕಿನ್ನರ್ ಅಖಾಡದ ಮಹಾಮಂಡಲೇಶ್ವರರನ್ನಾಗಿ ನಿಯುಕ್ತಿ ಮಾಡಲಾಗಿತ್ತು. ಇದಾದ 7 ದಿನಗಳ ಬಳಿಕ ಆಕೆಯನ್ನು ಅಖಾಡದಿಂದ ವಜಾಗೊಳಿಸಲಾಗಿತ್ತು.

   ಈ ನಡುವೆ ಆಕೆ 10 ಕೋಟಿ ರೂಪಾಯಿ ಕೊಟ್ಟು ಮಹಾಮಂಡಲೇಶ್ವರ ಪದವಿಗೇರಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಆದರೆ ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಹೋಗಿ ಮಮತಾ ಕುಲಕರ್ಣಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.

   ಕುಲಕರ್ಣಿ ಅವರ ಸನ್ಯಾಸ ದೀಕ್ಷೆಯ ಹಿನ್ನೆಲೆಯಲ್ಲಿ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಆಕೆಯನ್ನು ವೇದಗಳು ಮತ್ತು ಶಾಸ್ತ್ರಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಈ ವೇಳೆ ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದ ಮಮತಾ ಕುಲಕರ್ಣಿ ಅವರು ಕಣ್ಣು ಮುಚ್ಚಿ ಕಾಲಿನ ಮೇಲೆ ಕುಳಿತು ಜಪಿಸಲು ಪ್ರಾರಂಭಿಸಿದರು. ಆದಾಗ್ಯೂ, ಅವರ ಮಂತ್ರ ಪಠಣ ತಪ್ಪಾಗಿತ್ತು, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆ ಮತ್ತು ಅಪಹಾಸ್ಯಕ್ಕೆ ಕಾರಣವಾಗಿದೆ. 

   ಟಿವಿ ಕಾರ್ಯಕ್ರಮದಲ್ಲಿ ಚರ್ಚಿಸುತ್ತಾ ಮಮತಾ ಕುಲಕರ್ಣಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವ ನಿರ್ಧಾರವನ್ನು ತಿಳಿಸಿದ್ದು, ಚಲನಚಿತ್ರಗಳಿಗೆ ಮರಳುವ ಬಗ್ಗೆಯೂ ಮಾತನಾಡಿಡಿದ್ದಾರೆ. ಮತ್ತೆ ಚಲನಚಿತ್ರಗಳಲ್ಲಿ ನಟಿಸುವುದು ತಮ್ಮಿಂದ ‘ಸಂಪೂರ್ಣವಾಗಿ ಅಸಾಧ್ಯ’ ಎಂದು ಮಮತಾ ಕುಲರ್ಣಿ ಹೇಳಿದ್ದಾರೆ. “ನಾನು ಮತ್ತೆ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

   ಇದೇ ವೇಳೆ 10 ಕೋಟಿ ರೂಪಾಯಿ ನೀಡಿ ಮಹಾಮಂಡಲೇಶ್ವರ ಪದವಿಗೇರಿದ್ದಾರೆ ಎಂಬ ಆರೋಪಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಮಮತಾ ಕುಲಕರ್ಣಿ, ನಾನು 10 ಕೋಟಿ ನೀಡಿದ್ದೇನೆ ಎಂಬ ಆರೋಪ ಕೇಳಿಬಂದಿದೆ. ಆದರೆ ವಾಸ್ತವದಲ್ಲಿ ನಾನುನ್ ಗುರು ದಕ್ಷಿಣೆ ಕೊಡುವುದಕ್ಕಾಗಿಯೇ 2 ಲಕ್ಷರೂಪಾಯಿಗಳನ್ನು ಮತ್ತೊಬ್ಬರಿಂದ ಸಾಲ ಪಡೆದು ಗುರುದಕ್ಷಿಣೆ ನೀಡಿದ್ದೇನೆ ಇನ್ನು 10 ಕೋಟಿ ರೂಪಾಯಿ ಮಾತೆಲ್ಲಿ? ಎಂದು ಪ್ರಶ್ನಿಸಿದ್ದಾರೆ.

   ಕಿನ್ನಾರ್ ಅಖಾಡ ಸಂಸ್ಥಾಪಕ ಅಜಯ್ ದಾಸ್ ಮತ್ತು ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ್ ತ್ರಿಪಾಠಿ ನಡುವಿನ ಆಳವಾದ ಸಂಘರ್ಷದಿಂದ ಮಮತಾ ಕುಲರ್ಣಿ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ದಾಸ್ ತ್ರಿಪಾಠಿಯನ್ನು ಅವರ ಸ್ಥಾನದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ, ದಾಸ್ ಅವರಿಗೆ ತಮ್ಮನ್ನು ಸ್ಥಾನದಿಂದ ತೆಗೆಯುವ ಅಧಿಕಾರವಿಲ್ಲ ಎಂದು ತ್ರಿಪಾಠಿ ನಿರಾಕರಿಸಿದ್ದಾರೆ. ಈ ಘರ್ಷಣೆ ಅಖಾರದೊಳಗೆ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ, ಅಂತಿಮವಾಗಿ ತ್ರಿಪಾಠಿ ಮತ್ತು ಕುಲಕರ್ಣಿ ಇಬ್ಬರನ್ನೂ ಅವರ ಸ್ಥಾನಗಳಿಂದ ಹೊರಹಾಕಲಾಗಿದೆ.

Recent Articles

spot_img

Related Stories

Share via
Copy link