ರಾಘವೇಂದ್ರ ಜೊತೆ ಮದುವೆ : ಮಾನಸಾ ಸ್ಪಷ್ಟನೆ…!

ಬೆಂಗಳೂರು :

    ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರುವ ಯುವನಟ ಎಂದರೆ ಅದು ರಾಘವೇಂದ್ರ  . ರಾಗಿಣಿಯಾಗಿ ಸ್ತ್ರೀ ವೇಷದಲ್ಲಿ ಎಲ್ಲರನ್ನೂ ಎಂಟರ್‌ಟೈನ್‌ ಮಾಡುತ್ತಿರುವ ರಾಘು ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದಾರೆ. ಇವರು ಎಲ್ಲರಿಗೂ ಹೆಣ್ಣುಮಗಳ ಅವತಾರದಲ್ಲಿಯೇ ಕಂಡಿದ್ದೇ ಹೆಚ್ಚು.

    ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಮಜಾ ಟಾಕೀಸ್‌ನಲ್ಲಿಯೂ ಸ್ತ್ರೀ ವೇಷದಿಂದಲೇ ರಾಘವೇಂದ್ರ ಮೋಡಿ ಮಾಡಿದ್ದಾರೆ. ಮಜಾ ಭಾರತ, ಗಿಚ್ಚಿ ಗಿಲಿಗಿಲಿಯಲ್ಲಿ ರಾಘು ಜೊತೆಗೆ ಫೇಮಸ್​ ಆದವರು ಮಾನಸಾ. ಇವರಿಬ್ಬರು ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರು ಅನೇಕ ರೀಲ್ಸ್​ನಲ್ಲಿ ಜೊತೆಯಾಗಿ ನೃತ್ಯ ಮಾಡುತ್ತಾ ಇರುತ್ತಾರೆ. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಬಗ್ಗೆ ಒಂದು ಗಾಸಿಪ್ ಹರಿದಾಡುತ್ತಿದೆ.

    ಸೋಷಿಯಲ್​ ಮೀಡಿಯಾದಲ್ಲಿ ರಾಘವೇಂದ್ರ ಹಾಗೂ ಮನಸಾ ಮದುವೆ ಆಗುತ್ತಾರೆ. ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸುತ್ತೇವೆ ಎಂದಿದ್ದಾರೆ ಎಂಬ ವಂದತಿ ಹಬ್ಬಿತ್ತು. ರಾಘವೇಂದ್ರ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂತೆ. ಮಾನಸಾರನ್ನು ರಾಘವೇಂದ್ರ ಪ್ರೀತಿಸುತ್ತಿದ್ದಾರಂತೆ ಎಂಬ ಸುದ್ದಿ ಹರಿದಾಡಿತು. ಇದೀಗ ಈ ಬಗ್ಗೆ ಖುದ್ದು ನಟಿ ಮಾನಸಾ ಈಗ ಸ್ಪಷ್ಟನೆ ಕೊಟ್ಟಿದ್ದಾರೆ. 

    ಈ ಬಗ್ಗೆ ಮಾತಾಡಿದ ಮಾನಸಾ, ನನ್ನ ಹಾಗೂ ರಾಘು ಬಗ್ಗೆ ಗಾಳಿ ಸುದ್ದಿ ಹಬ್ಬಿದೆ. ನಾವಿಬ್ಬರು ಮದುವೆ ಆಗ್ತಾ ಇದ್ದೀವಿ, ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸುತ್ತೇವೆ ಅಂತ ಹೇಳಿದ್ದಾರೆ. ಅದನ್ನು ಹೇಳಿದವರೇ ಬಾಡೂಟ ಹಾಕಿಸಬೇಕು. ಇದು ಸತ್ಯವಲ್ಲ. ನಾನು ಅವನು ಅಕ್ಕ ತಮ್ಮ. ಸುಮಾರು ವರ್ಷಗಳಿಂದ ನಾವು ಜೊತೆಗೆ ಕೆಲಸ ಮಾಡುತ್ತ ಬಂದಿದ್ದೇವೆ. ನಾವು ಒಬ್ಬರಿಗೊಬ್ಬರು ಸಪೋರ್ಟ್​ ಮಾಡಿಕೊಂಡು ಇದ್ದೇವೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link