ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏ.14ರಂದು ಅಂಬೇಡ್ಕರ್ ಜಯಂತಿ ಕಡ್ಡಾಯ ಆಚರಣೆ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು:

ಬೆಂಗಳೂರು 2021-22ನೇ ಶೈಕ್ಷಣಿಕ ವರ್ಷ ದಿನಾಂಕ 09-04-2022ರ ಇಂದು ಮುಕ್ತಾಯವಾಗಲಿದೆ. ಅಲ್ಲದೇ ಬೇಸಿಗೆ ರಜೆ ಕೂಡ ಶಾಲೆಗಳಿಗೆ ಇರಲಿದೆ. ಈ ನಡುವೆ ದಿನಾಂಕ 14-04-2022ರಂದು ಬರುವಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷದಂತೆ ತಪ್ಪದೇ ಶಾಲೆಗಳಲ್ಲಿ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಗುಜರಾತ್‌ನಲ್ಲಿ ಓರ್ವನಿಗೆ ಕೊರೋನವೈರಸ್ ರೂಪಾಂತರ XE ಸೋಂಕು ದೃಢ: ವರದಿ

ಈ ಬಗ್ಗೆ ಆದೇಶ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ವರ್ಷ ದಿನಾಂಕ 09-04-2022ರಂದು ಮುಕ್ತಾಯವಾಗುತ್ತದೆ. ಈಗಾಗಲೇ ದಿನಾಂಕ 14-04-2022ರಂದು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಜಯಂತಿಯನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಆಚರಿಸುವಂತೆ ತಿಳಿಸಲಾಗಿದೆ.

ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಗೆಲುವು ? ಆರ್ ಸಿಬಿ – ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

ದಿನಾಂಕ 14-04-2022ರಂದು ತಪ್ಪದೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್ ಡಿ ಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು, ಪ್ರತಿ ವರ್ಷದಂತೆ ಆಚರಿಸಲು ಸೂಚಿಸಿದ್ದಾರೆ.

 

ಸರ್ಕಾರದ ದೃಷಿಯಲ್ಲಿ ಎಲ್ಲರೂ ಸಮಾನರು:ಸಿಎಂ ಬಸವರಾಜ ಬೊಮ್ಮಾಯಿ

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap