ಇಷ್ಟು ಸುಸಜ್ಜಿತವಾದ ರಂಗ ಮಂದಿರ ಇಡೀ ರಾಜ್ಯದಲ್ಲಿಯೇ ಇಲ್ಲ:

ಗುಬ್ಬಿ:

    ರಾಜ್ಯದಲ್ಲೇ ಇಷ್ಟೊಂದು ಸುಸಜ್ಜಿತ ವಾದ ರಂಗಮಂದಿರವಿಲ್ಲ ಎಂದು ಖ್ಯಾತ ರಂಗಕರ್ಮಿ ನಟ ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯ ಪಟ್ಟರು,

    ಗುಬ್ಬಿ ಪಟ್ಟಣದಲ್ಲಿ ಮೂರು ದಿನಗಳ ಕಾಲ ಡಾ ಗುಬ್ಬಿ ವೀರಣ್ಣ ಟ್ರಸ್ಟ್ ಹಾಗೂ ಮಾಲತಮ್ಮ ಆರ್ಟ್ ಫೌಂಡೇಶನ್ ವತಿಯಿಂದ ಜರುಗಿದ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನಟನಾ ಕಲಾ ತಂಡದ ಸ್ಥಾವರ ಜಂಗಮ ನಾಟಕ ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿದರು,

    ಗುಬ್ಬಿ ವೀರಣ್ಣನವರ ಜನ್ಮ ಭೂಮಿ ಗುಬ್ಬಿಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ಪುಣ್ಯ ರಂಗಭೂಮಿ ಯ ಮಹಾನ್ ದಿಗ್ಗಜ ವೀರಣ್ಣನವರ ಗರಡಿಯಲ್ಲಿ ಈ ನಾಡಿನ ಅನೇಕ ಮಹಾನ್ ನಟರು ಬೆಳೆ ದಿದ್ದಾರೆ ಎಂದರು, ಅಮ್ಮ ಬಿ ಜಯಶ್ರೀ ನನಗೆ ನಾಗಮಂಡಲ ಚಲನಚಿತ್ರ ದಿಂದ ಹೊಸ ಹುರುಪು ನೀಡಿದ್ದಾರೆ ಈ ವಯಸ್ಸಿನಲ್ಲಿ ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ರಂಗ ಪರಂಪರೆಯನ್ನು ಮುಂದುವರೆಸುತ್ತಿರುವುದು ಅಭಿನಂದಾರ್ಹ ಅಮ್ಮ ನಮ್ಮಂತಹ ಕಲಾವಿದರಿಗೆ ಆಶ್ರಯದಾತರು ಎಂದರು,

    ಅವರು ರಾಜ್ಯ ಸಭಾ ಸದಸ್ಯರಾಗಿದ್ದಾಗ ನಾಡಿನ ಮೂಲೆ ಮೂಲೆ ಗಳಲ್ಲಿ ರಂಗಮಂದಿರಗಳಿಗೆ ಹಣ ನೀಡಿದ್ದಾರೆ ಅದರಲ್ಲಿ ನಟನಾ ನೂ ಒಂದು ಎಂದರು,

    ಕಾರ್ಯಕ್ರಮ ದಲ್ಲಿ ಟ್ರಸ್ಟ್ ಅಧ್ಯಕ್ಷೆ ಬಿ ಜಯಶ್ರೀ ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯತೀಶ್ , ಸಂಚಾಲಕ ರಾಜೇಶ್ ಗುಬ್ಬಿ, ಹಾಗೂ ಹೆಚ್ ಎಂ ರಂಗಯ್ಯ ಭಾಗವಹಿಸಿದ್ದರುಇಷ್ಟು ಸುಸಜ್ಜಿತವಾದ ರಂಗ ಮಂದಿರ ಇಡೀ ರಾಜ್ಯದಲ್ಲಿಯೇ ಇಲ್ಲ

Recent Articles

spot_img

Related Stories

Share via
Copy link