ಮಧ್ಯರಾತ್ರಿ ಅಡ್ಡಗಟ್ಟಿ ಬಂಗಾರದ ಚೈನ್ ಎಗರಿಸಿದ ಮಂಗಳ ಮುಖಿಯರು

ಮುರುಡೇಶ್ವರ:

     ಸ್ಕೂಟಿ ಸವಾರನೊಬ್ಬ ರಾತ್ರಿ ತನ್ನ ಸ್ಕೂಟಿಗೆ ಪೆಟ್ರೋಲ್ ಹಾಕಲು ಹೊರಟವೇಳೆಯಲ್ಲಿ ದಾರಿಯಲ್ಲಿ ಅಡ್ಡಗಟ್ಟಿ ಆತನ ಬಂಗಾರದ ಚೈನ್ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನವೆಂಬರ್ ಎರಡರ ರಾತ್ರಿಗೆ ನಡೆದ ಬಗ್ಗೆ ವರದಿಯಾಗಿದೆ. ಮುರುಡೇಶ್ವರದ ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನಲ್ಲಿ ಲ್ಯಾಬ್ ಇಂಚಾರ್ಜ್ ಆಗಿ ಕೆಲಸ ನಿರ್ವಹಿಸುವ ಮುರುಡೇಶ್ವರದ ಮಾವಳ್ಳಿ ಗುಮ್ಮನಕಲ್ ವಾಸಿ ಅರುಣಕುಮಾರ್ ತಂದೆ ಭಾಸ್ಕರ ನಾಯ್ಕ್ ಕೆಲಸ ಮುಗಿಸಿಕೊಂಡು ರಾತ್ರಿ ತನ್ನ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಕೊಂಡು ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆಯ ರೈಲ್ವೆ ಸ್ಟೇಷನ್ ಹತ್ತಿರಹೋಗುವಾಗ ಇಬ್ಬರು ಮಂಗಳಮುಖಿಯರು ಅಡ್ಡಗಟ್ಟಿದರು.

   ಈ ವೇಳೆ ರೈಲ್ವೆ ಸ್ಟೇಷನ್ ರಸ್ತೆಯಿಂದ ಮತ್ತೆ ಇಬ್ಬರು ಮಂಗಳಮುಖಿಯರು ಸೇರಿಕೊಂಡರು. ಆಗ ಈ ನಾಲ್ಕು ಮಂದಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ನಿನ್ನ ಹತ್ತಿರ ದುಡ್ಡು ಎಷ್ಟಿದೆ ಎನ್ನುತ್ತಾ ಮೈಕೆ ಮುಟ್ಟ ತೊಡಗಿದರು.ಅದರಲ್ಲಿ ಒಬ್ಬಾಕೆ ತನ್ನ ಕುತ್ತಿಗೆಯಲ್ಲಿದ್ದ ಅಜಮಾಸು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಎಲ್ಲರೂ ಮಂಕಿ ಕಡೆಗೆ ಓಡಿ ಹೋದರೆಂದು ಅರುಣ ಕುಮಾರ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link