ಒಳಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ ; 1.23 ಕೆಜಿ ಚಿನ್ನ ವಶ!!

ಮಂಗಳೂರು :

      ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರೊಬ್ಬನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿ ವಿರುದ್ಧ ಕೇಸು ದಾಖಲಿಸಿದ್ದಾರೆ.

     ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮದ್ ಕಲ್ಲಾರ್ ಎಂಬವರು ದುಬೈನಿಂದ ಆಗಮಿಸಿದ್ದು, ಒಳ ಉಡುಪುಗಳಲ್ಲಿ ಸರಪಳಿಯ ರೀತಿಯಲ್ಲಿ 1.23 ಕೆ.ಜಿ ತೂಕದ 57,14,940 ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ.

     ಪರಿಶೀಲನಾ ಹಂತದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಆರೋಪಿಯಿಂದ 1.23 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link