ಮಧುಗಿರಿ
ತೋಟದ ಮನೆಯಲ್ಲಿ ಊಟ ಮಾಡುತ್ತಿದ್ದ ವೃದ್ಧ ದಂಪತಿಗಳನ್ನು ಅಪರಿಚಿತ ರಿಬ್ಬರು ಮನೆ ಪ್ರವೇಶಿಸಿ ಚಾಕು ತೋರಿಸಿ ಬೆದರಿಸಿ ಚಿನ್ನದ ಮಾಂಗಲ್ಯದ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಐ.ಡಿ .ಹಳ್ಳಿ ಹೋಬಳಿ ಮಾರುತಿಪುರದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.
ಗ್ರಾಮದ ಶಂಬೋನಹಳ್ಳಿ ಸರ್ವೇ ನಂಬರ್ 35/25ರಲ್ಲಿ ತೋಟದ ಮನೆಯಲ್ಲಿ ವಾಸವಾಗಿದ್ದ ನಿವೃತ್ತ ವಾರ್ಡನ್ ಸಣ್ಣತಾಯಮ್ಮ ಮತ್ತು ರಂಗಯ್ಯ ರಾತ್ರಿ ಎಂಟರ ಸಮಯದಲ್ಲಿ ಊಟ ಮಾಡುತ್ತಿದ್ದ ವೇಳೆ ಅಪರಿಚಿತ 25 ರಿಂದ 30 ವರ್ಷದ ಒಳಗಿನ ವ್ಯಕ್ತಿಗಳು ಮನೆಯ ಒಳಗೆ ನುಗ್ಗಿ ಇವರು ಊಟ ಮಾಡುತ್ತಿದ್ದ ತಟ್ಟೆಗಳನ್ನು ಒದ್ದು ಚಾಕುವನ್ನು ತೋರಿಸಿ 1.68 ಲಕ್ಷ ರು ಮೌಲ್ಯದ 48 ಗ್ರಾಂ ಚಿನ್ನದಮಾಂಗಲ್ಯದ ಸರವನ್ನು ಕಸಿದುಕೊಂಡು ಇಬ್ಬರನ್ನು ರೂಂನಲ್ಲಿ ಕೂಡಿಹಾಕಿ ಮನೆಯಲ್ಲಿದ್ದ ಗಾಡ್ರೆಜ್ ಬೀರು ಮತ್ತಿತರ ಸ್ಥಳಗಳನ್ನು ಹುಡುಕಿ ಏನು ಸಿಗದೆ ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ನಂತರ ರಂಗಾಯ್ಯನವರು ಕಿಟಕಿ ಗಾಜನ್ನು ಒಡೆದು ಹಾಕಿ ಕೂಗಿ ಕೊಂಡಾಗ ಇವರ ಮನೆಯಿಂದ ದೂರವಿದ್ದ ನೆರೆಹೊರೆಯವರು ಬಂದು ಬಾಗಿಲು ತೆಗೆದು ವೃದ್ಧರನ್ನು ರಕ್ಷಿಸಿದ್ದಾರೆ .
ಇವರ ಮಗ ರಾಘವೇಂದ್ರ ಮದುಗಿರಿ ಪಟ್ಟಣದಲ್ಲಿ ವಾಸವಿದ್ದು ಮಗಳನ್ನು ವಿವಾಹ ಮಾಡಿದ್ದಾರೆ. ವೃತ್ತಿಯಲ್ಲಿ ವಾರ್ಡನ್ ಆಗಿದ್ದ ಇವರು ನಿವೃತ್ತರಾದ ನಂತರ ಗ್ರಾಮದಲ್ಲೇ ವಾಸವಿದ್ದರೂ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ ಪಿ ಅಬ್ದುಲ್ ಖಾದರ್,ಮಿಡಿಗೇಶಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಣ್ಣ ತಾಯಮ್ಮ ನೀಡಿದ ದೂರಿನನ್ವಯ. ಮಿಡಿಗೇಶಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.