ದೆಹಲಿ ಅಬಕಾರಿ ನೀತಿ ಹಗರಣ : ತಪ್ಪೊಪ್ಪಿಕೊಂಡ ಮನೀಷ್‌ ಸಿಸೋಡಿಯಾ

ನವದೆಹಲಿ:

     ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಳಿದ್ದ ಎರಡು ಮೊಬೈಲ್ ಪೋನ್‌ಗಳನ್ನು ನಾಶಪಡಿಸಿರುವುದಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

     2022ರ ಜುಲೈ 22ರಂದು ಕೇಂದ್ರ ಗೃಹ ಸಚಿವಾಲಯವು (ಎಂಎಚ್ಎ) ಅಬಕಾರಿ ಹಗರಣದಲ್ಲಿ ತನಿಖೆ ಪ್ರಾರಂಭಿಸಲು ಸಿಬಿಐಗೆ ನಿರ್ದೇಶನ ನೀಡಿತು. ಆ ದಿನದಿಂದ ಸಿಸೋಡಿಯಾ ಹೊಸ ಮೊಬೈಲ್ ಫೋನ್ ಬಳಸಲಾರಂಭಿಸಿದರು ಎಂದು ಮೂಲಗಳು ಹೇಳಿವೆ.

     ಪ್ರಕರಣದ ತನಿಖೆ ನಡೆಸುತ್ತಿರುವಾಗ, ಸಿಸೋಡಿಯಾ ಅವರು 2020ರ ಜನವರಿ 1 ಮತ್ತು 2022ರ ಆಗಸ್ಟ್ 19 ರ ನಡುವೆ ಮೂರು ವಿಭಿನ್ನ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು ಎಂದು ಸಿಬಿಐಗೆ ತಿಳಿದುಬಂದಿದೆ. 2022ರ ಆಗಸ್ಟ್ 19 ರಂದು, ತನಿಖಾ ಸಂಸ್ಥೆಯು ಶೋಧ ಕಾರ್ಯಾಚರಣೆಯನ್ನು ನಡೆಸಿತು ಮತ್ತು ಸಿಸೋಡಿಯಾ ಅವರಿಂದ ಒಂದು ಫೋನ್ ಅನ್ನು ವಶಪಡಿಸಿಕೊಂಡಿತು.

     ವಿಚಾರಣೆ ವೇಳೆ ಸಿಸೋಡಿಯಾ ಅವರು ಎರಡು ಮೊಬೈಲ್ ಫೋನ್‌ಗಳನ್ನು ನಾಶಪಡಿಸಿರುವುದಾಗಿ ತನಿಖಾ ಸಂಸ್ಥೆಯ ಎದುರು ಒಪ್ಪಿಕೊಂಡಿದ್ದಾರೆ. ಇದಕ್ಕೂ ಮೊದಲು, ನಾನು ಎರಡು ಸೆಲ್ ಫೋನ್‌ಗಳನ್ನು ಬಳಸುತ್ತಿದ್ದೆ ಅದನ್ನು ನಾಶಪಡಿಸಲಾಗಿದೆ ಎಂದು ಸಿಸೋಡಿಯಾ ಹೇಳಿರುವುದಾಗಿ ವರದಿಯಾಗಿದೆ.
      ಎರಡು ಮೊಬೈಲ್ ಫೋನ್‌ಗಳಿಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 91 ರ ನೋಟಿಸ್ ಸಹ ನೀಡಲಾಗಿದೆ ಮತ್ತು ಪ್ರತಿಕ್ರಿಯೆಯಾಗಿ ಅವರು ಸತ್ಯವನ್ನು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap