ಖ್ಯಾತ ನಟ ಎಂಪಿ ಶಂಕರ್ ಪತ್ನಿ ಮಂಜುಳ ಶಂಕರ್ ಹೃದಯಾಘಾತದಿಂದ ನಿಧನ

ಮೈಸೂರು:

ಖ್ಯಾತ ನಟ, ನಿರ್ಮಾಪಕ ಎಂ ಪಿ ಶಂಕರ್ ಅವರ ಪತ್ನಿ ಮಂಜುಳ ಶಂಕರ್ ಹೃದಯಾಘಾತದಿಂದ ಇಂದು ಇಲ್ಲಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
75 ವರ್ಷದ ಮಂಜುಳ ಶಂಕರ್ ಅವರಿಗೆ ಕೆಲದಿನಗಳ ಹಿಂದೆ ಹೃದಯಾಘಾತವಾಗಿತ್ತು. ಆಗ ಅವರಿಗೆ ಆಂಜಿಯೋಗ್ರಾಮ್ ಮಾಡಿಸಲಾಗಿತ್ತು. ನಂತರ ಬೈಪಾಸ್ ಸರ್ಜರಿ ಕೂಡ ಮಾಡಿಸಲಾಗಿತ್ತು. ಮಂಜುಳ ಶಂಕರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮೈಸೂರಿನ ಸಿಎಸ್ ಫಾರ್ಮ್ ಬಳಿ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಚಂದನವನದ ಅಗ್ರಜರೊಂದಿಗೆ ಒಡನಾಟವನ್ನು ಹೊಂದಿದ್ದ ಎಂಪಿ ಶಂಕರ್ ಹಲವಾರು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು. ಸತ್ಯ ಹರಿಶ್ಚಂದ್ರ, ಶನಿಪ್ರಭಾವ, ಬಂಗಾರದ ಮನುಷ್ಯ, ಗಂಧದಗುಡಿ, ಭೂತಯ್ಯನ ಮಗ ಅಯ್ಯು ಮುಂತಾದ ಚಿತ್ರಗಳಲ್ಲಿ ನಟಿಸಿ ಶ್ರೇಷ್ಠ ಕಳನಾಯಕನೆಂದು ಹೆಸರು ಮಾಡಿದ್ದರು. 2008ರಲ್ಲಿ ನಿಧನರಾದ ಎಂಪಿ ಶಂಕರ್ ಅವರ ಕಲಾಸೇವೆ ಇಂದಿಗೂ ಕೂಡ ಚಿರಸ್ಮರಣೀಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap