ನಾಯಕನಹಟ್ಟಿ :
ಮಾದಿಗ ಸಮುದಾಯದ ಬಹು ನೀರಿಕ್ಷಿತ ಒಳಮೀಸಲಾತಿ ಜಾರಿಗಾಗಿ ಇಂದಿನಿಂದ ಜಾತಿಗಣತಿ ಕಾರ್ಯ ಆರಂಭವಾಗಿದ್ದು, ಪಟ್ಟಣಪಂಚಾಯಿತಿ ವ್ಯಾಪ್ತಿಯ ಎಲ್ಲ ಮಾದಿಗ ಸಮುದಾಯವರು ಗಣತಿದಾರ ಶಿಕ್ಷಕರಿಗೆ ನಿಖರ ಮಾಹಿತಿ ನೀಡಲು ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸೋಮವಾರ ಆರಂಭಗೊಂಡ ಜಾತಿಗಣತಿ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಳಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಫಲವಾಗಿ ಇದೀಗ ಸರ್ಕಾರಗಳು ಜಾತಿ ಜನಗಣತಿಗೆ ಮುಂದಾಗಿವೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ನ್ಯಾಯ ಸಿಗಬೇಕಾದರೆ ಒಳಮೀಸಲಾತಿ ಜಾರಿ ಮಾಡುವುದು ತುಂಬಾ ಮುಖ್ಯವಾಗಿದೆ. ಹಾಗಾಗಿ ಮನೆಗೆ ಬರುವ ಅಧಿಕಾರಿಗಳಿಗೆ ಕಾಲಂ ನಂಬರ್ 0 61ರಲ್ಲಿ ಮೂಲಜಾತಿ ಮಾದಿಗ ಎಂದು ಬರೆಸುವಂತೆ ತಿಳಿಸಿದರು.
ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಯಾವುದೇ ಇರಲಿ ಎಲ್ಲರೂ ಮಾದಿಗ ಎಂದು ನಮೂದಿಸಿ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕಷ್ಟದ ಪರಿಸ್ಥಿತಿಯಲ್ಲಿಯೂ ವಿದ್ಯಾಭ್ಯಾಸ ಮಾಡಿ ಸಂವಿಧಾನವನ್ನು ಬರೆದಿದ್ದಾರೆ. ಹಾಗಾಗಿ ಯಾರು ಏನೇ ಹೇಳಿದರೂ ಗ್ರಾಮಕ್ಕೆ ಅಧಿಕಾರಿಗಳು ಬಂದಾಗ ಗ್ರಾಮದ ಮುಖಂಡರು ಹಾಗೂ ವಿದ್ಯಾವಂತ ಯುವಕರು ಜಾತಿಗಣತಿ ವರದಿಯಲ್ಲಿ ಮಾದಿಗ ಎಂದು ನಮೂದಿಸಿ. ಮಾದಿಗ ಎನ್ನುವುದನ್ನು ಬಿಟ್ಟು ಬೇರೆ ಜಾತಿಯ ಹೆಸರು ಬರಸಬೇಡಿ ಎಂದು ಹೇಳಿದರು.
