ರಾಯಚೂರು:
ಮಂತ್ರಾಲಯದ ರಾಯರ ಮಠದ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಗೋಶಾಲೆಯಲ್ಲಿ ಸಂಗ್ರಹಿಸಿದ್ದ ಮೇವಿನ ಬಣವೆಗಳು ಹೊತ್ತಿ ಉರಿದಿವೆ. ನೂರಾರು ಹಸುಗಳಿರುವ ಈ ಗೋಶಾಲೆಯಲ್ಲಿ ಘಟನೆ ಸಂಭವಿಸಿದ್ದರಿಂದ ಆತಂಕದ ಸ್ಥಿತಿ ನಿರ್ಮಾಣವಾಗುತ್ತು. ಅದೃಷ್ಟವಶಾತ್, ಗೋವುಗಳಿಗೆ ಅಪಾಯವಾಗಿಲ್ಲ.
ಕ್ಷಣಮಾತ್ರದಲ್ಲಿ ಬೆಂಕಿಯ ಜ್ವಾಲೆಗಳು ಗೋಶಾಲೆಯ ಒಂದು ಭಾಗವನ್ನು ಆವರಿಸಿತು. ಗೋಶಾಲೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.








