ಜಮ್ಮುವಿನಲ್ಲಿ ಮಾರುಕಟ್ಟೆಗಳು ಭಾಗಶ: ಪುನರಾರಂಭ..!

ಜಮ್ಮು

      370 ನೇ ವಿಧಿ ರದ್ದು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವ ಹಿನ್ನೆಲೆಯಲ್ಲಿ ಸೆಕ್ಷನ್ 144 ರಡಿ ಹೇರಲಾಗಿರುವ ನಿರ್ಬಂಧಗಳ ನಡುವೆಯೂ ಜಮ್ಮುವಿನಲ್ಲಿ ಗುರುವಾರ ಮಾರುಕಟ್ಟೆಗಳು ಭಾಗಶಃ ತೆರೆದಿದ್ದವು.

     ಜಿಲ್ಲಾಡಳಿತ ಅಧಿಕೃತವಾಗಿ ನಿರ್ಬಂಧಗಳನ್ನು ತೆಗೆದುಹಾಕದಿದ್ದರೂ ಮಾರುಕಟ್ಟೆಗಳು ಭಾಗಶಃ ತೆರೆದಿದ್ದು, ಅಗತ್ಯ ಸರಕುಗಳನ್ನು ಖರೀದಿಸಲು ಜನರು ಮಾರುಕಟ್ಟೆಗಳಿಗೆ ಧಾವಿಸಿದರು.ಈ ಮಧ್ಯೆ, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಸುಮಾರು ನಾಲ್ಕು ದಿನಗಳ ನಂತರ ಕಾರ್ಯ ನಿರ್ವಹಿಸಿದವು. ಆದರೆ ಮುಂದಿನ ಆದೇಶದವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.

     ಆದರೂ, ಸ್ವಾತಂತ್ರ್ಯ ದಿನಾಚರಣೆಯ ನಂತರವೇ ಶಾಲೆಗಳು ಮತ್ತು ಕಾಲೇಜುಗಳು ಪುನರಾರಂಭಗೊಳ್ಳಬಹುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಜಮ್ಮು ವಿಶ್ವವಿದ್ಯಾಲಯ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.ವಾಣಿಜ್ಯ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಆದರೆ ದ್ವಿಚಕ್ರ ಮತ್ತು ಕಾರುಗಳು ಸೇರಿದಂತೆ ಖಾಸಗಿ ವಾಹನಗಳು ರಸ್ತೆಯಲ್ಲಿ ಚಲಿಸುತ್ತಿರುವುದು ಕಂಡುಬಂತು. ಒಟ್ಟಾರೆ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿತ್ತು.ಜಮ್ಮು ವಿಭಾಗದ ಯಾವುದೇ ಪ್ರದೇಶದಿಂದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap