62ನೇ ವಯಸ್ಸಿನಲ್ಲಿ 46 ವರ್ಷದ ಗೆಳತಿಯನ್ನು ಮದುವೆಯಾದ ಆಸ್ಟ್ರೇಲಿಯಾ ಪ್ರಧಾನಿ!

ಕ್ಯಾನ್‌ಬೆರಾ:

     ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಶನಿವಾರ ತಮ್ಮ ದೀರ್ಘಕಾಲದ ಗೆಳತಿ ಜೋಡಿ ಹೇಡನ್ ಅವರನ್ನು ವಿವಾಹವಾದರು. ಈ ಮೂಲಕ ಆಲ್ಬನೀಸ್ ಅವರು ಅಧಿಕಾರದಲ್ಲಿದ್ದಾಗ ವಿವಾಹವಾದ ಆಸ್ಟ್ರೇಲಿಯಾದ ಮೊದಲ ಪ್ರಧಾನಿಯಾಗಿದ್ದಾರೆ.

     62 ವರ್ಷದ ನಾಯಕ ಆಲ್ಬನೀಸ್ ಅವರು ಇಂದು ಕ್ಯಾನ್‌ಬೆರಾದ ತಮ್ಮ ಅಧಿಕೃತ ನಿವಾಸವಾದ ದಿ ಲಾಡ್ಜ್‌ನ ಉದ್ಯಾನದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ 46 ವರ್ಷದ ಹಣಕಾಸು ಸೇವಾ ಉದ್ಯೋಗಿ ಹೇಡನ್ ಅವರೊಂದಿಗೆ ವಿವಾಹವಾದರು. ಇದು ಆಂಥೋನಿ ಅಲ್ಬನೀಸ್ ಅವರಿಗೆ ಎರಡನೇ ಮದುವೆ. 

     “ನಮ್ಮ ಕುಟುಂಬ ಮತ್ತು ಹತ್ತಿರದ ಸ್ನೇಹಿತರ ಮುಂದೆ ನಮ್ಮ ಭವಿಷ್ಯದ ಜೀವನವನ್ನು ಒಟ್ಟಿಗೆ ಕಳೆಯುವ ನಮ್ಮ ಪ್ರೀತಿ ಮತ್ತು ಬದ್ಧತೆಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ” ಎಂದು ಆಲ್ಬನೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.”ವಿವಾಹಿತರು” ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪದದ ಪೋಸ್ಟ್‌ ಹಂಚಿಕೊಂಡಿದ್ದಾರೆ.

Recent Articles

spot_img

Related Stories

Share via
Copy link