ಮಾರ್ವೆಲಸ್ ಮಲ್ಲೇಶ್ವರಂ ಪ್ರಣಾಳಿಕೆ ಬಿಡುಗಡೆ:   ಅನೂಪ್ ಅಯ್ಯಂಗಾರ್

ಬೆಂಗಳೂರು

    ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ವಯೋಮಾನದವರ ಸುಗಮ ಜೀವನ ಮತ್ತು ಸುಲಲಿತ ಬದುಕಿಗೆ ಪೂರಕವಾಗಿರುವ ಮಾರ್ವೆಲಸ್ ಮಲ್ಲೇಶ್ವರಂ [ಅಧ್ಭುತ ಮಲ್ಲೇಶ್ವರಂ] ಹೆಸರಿನ ಸ್ಮಾರ್ಟ್ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಇಂದು ಬಿಡುಗಡೆ ಮಾಡಿದರು.

    ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆಮಾಡಿ ಮಾತನಾಡಿದ ಅವರು, ಕ್ಷೇತ್ರದ ಜನರ ಅಭಿಪ್ರಾಯಗಳ ಆಧಾರದ ಮೇಲೆ ಈ ಚುನಾವಣಾ ಭರವಸೆಗಳ ಪತ್ರ ಸಿದ್ಧಪಡಿಸಿದ್ದು, ತಾವು ಚುನಾಯಿತರಾದರೆ ಮಲ್ಲೇಶ್ವರಂ ಭಾಗದ ಗತವೈಭವವನ್ನು ಮರಳಿ ತರುವ ಜೊತೆಗೆ ಎಲ್ಲಾ ವಯೋಮಾನದವರ ಬದುಕನ್ನು ಸಹನೀಯವಾಗಿಸಲು ಶ್ರಮಿಸುತ್ತೇನೆ. ಮಲ್ಲೇಶ್ವರಂ ಬ್ರಾ÷್ಯಂಡ್ ಉಳಿಸಲು ಸೇವಾ ಮನೋಭಾವನೆಯಿಂದ ಶ್ರಮಿಸುತ್ತೇನೆ ಎಂದರು.

    ಮಲ್ಲೇಶ್ವರಂನಲ್ಲಿ ಚತುರ ಸಾರಿಗೆ ವ್ಯವಸ್ಥೆ, ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸಹಾಯವಾಣಿ, ದೇವಸ್ಥಾನಗಳು, ಪಾರಂಪರಿಕ ತಾಣಗಳನ್ನು ಪುನರುಜ್ಜೀವನಗೊಳಿಸಲು ಒತ್ತು ನೀಡುತ್ತೇನೆ. ಕ್ಷೇತ್ರದಲ್ಲಿ ಬೆಂಗಳೂರಿನ ಶೇ 50 ಕ್ಕೂ ಹೆಚ್ಚು ನವೋದ್ಯಮಗಳಿದ್ದು, ಇವುಗಳಿಗೆ ಸೂಕ್ತ ಹಣಕಾಸು ನೆರವು ಒದಗಿಸಿ, ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುತ್ತೇನೆ. ಬೀಗ ಹಾಕಿರುವ ಕ್ರೀಡಾಂಗಣಗಳನ್ನು ಕ್ಷೇತ್ರದ ಜನರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

  ಮಲ್ಲೇಶ್ವರಂನಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳಿದ್ದು, ತಾವು ಈ ವರೆಗೆ ನಕಾರಾತ್ಮಕ ಟೀಕೆ ? ಟಿಪ್ಪಣಿಗಳನ್ನು ಮಾಡಿಲ್ಲ. ಆದರೆ 45 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದು, ತಮಗೆ ಎಲ್ಲಾ ಕಡೆಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಬದಲಾವಣೆ ಬಯಸಿರುವ ಮತದಾರರನ್ನು ತಮ್ಮನ್ನು ಚುನಾಯಿಸಲಿದ್ದಾರೆ ಎಂದು ಅನೂಪ್ ಅಯ್ಯಂಗಾರ್ ವಿಶ್ವಾಸ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಹುಚ್ಚಪ್ಪ, ಕಾಂಗ್ರೆಸ್ ಮುಖಂಡ ಗಿರೀಶ್ ಲಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap