ಬೀದರ್ ಜಿಲ್ಲೆ
ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ ಮಗಳನ್ನು ಕೊಲೆ ಮಾಡಿ ತಂದೆ ಪರಾರಿಯಾಗಿದ್ದಾನೆ.
ತಾಲೂಕಿನ ಬರ್ಗೆನ ತಾಂಡಾದ ಯುವತಿ ಸೋನಿ (18) ಎನ್ನುವ ಕೊಲೆಯಾಗಿದ್ದು, ಆಕೆಯನ್ನು ಕೊಲೆ ಮಾಡಿದ ತಂದೆ ಪರಶುರಾಮ ಪರಾರಿ ಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಸಿ ಪ್ರದೀಪ್ ಕುಂಟಿ, ಡಿವೈಎಸ್ಪಿ ಶಿವಾನಂದ ಪವರಶಟ್ಟ, ಸಿಪಿಐ ರಘುವೀರಸಿಂಗ್, ಪಿಎಸ್ಐ ನಂದಕುಮಾರ ಮೂಳೆ ಭೇಟಿ ನೀಡಿ ಮುಂದಿನ ತನಿಖೆ ನಡೆಸಿದ್ದಾರೆ.
