ಮಾಸ್ಕೋ : ಉಗ್ರರ ನರಮೇಧಕ್ಕೆ 60 ಬಲಿ ….!

ಮಾಸ್ಕೋ:

    ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಉಗ್ರರು ನಡೆಸಿದ ನರಮೇಧದಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಐವರು ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ನ ಕನ್ಸರ್ಟ್ ವೇದಿಕೆಗೆ ನುಗ್ಗಿದ್ದು, ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಇದರಿಂದಾಗಿ ನೋಡ ನೋಡುತ್ತಿದ್ದಂತೆಯೇ ಹೆಣಗಳ ರಾಶಿ ಬಿದಿದ್ದು, ಹಲವು ಜನರು ಗಾಯಗೊಂಡು ಸ್ಥಳದಲ್ಲಿ ಕಿರುಚಾಟ, ನರಳಾಟ ಹೇಳತೀರದಾಗಿತ್ತು. ಭಯೋತ್ಪಾದಕ ಸಂಘಟನೆ ಐಸಿಸ್ ಈ ದಾಳಿಯ ಹೊಣೆ ಹೊತ್ತಿಕೊಂಡಿದೆ. ಆದಾಗ್ಯೂ, ತನ್ನ ಹೇಳಿಕೆ ಬೆಂಬಲಿಸಲು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. 

    ಬಂದೂಕು ದಾಳಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡ ಧಗಧಗಿಸಿ ಹೊತ್ತಿ ಉರಿದಿದೆ. ವಿಶಾಲವಾದ ಸಭಾಂಗಣದಲ್ಲಿ ಗುಂಡಿನ ಸುರಿಮಳೆ ಪ್ರಾರಂಭವಾದಾಗ ಜನರು ಒಟ್ಟಿಗೆ ಸೇರಿಕೊಳ್ಳುವುದು, ಕಿರುಚುವುದು, ಆಸನದ ಹಿಂದೆ ಅವಿತುಕೊಳ್ಳುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಸ್ತ್ರ ಸಜ್ಜಿತ ವ್ಯಕ್ತಿಗಳು ಸ್ವಯಂ ಚಾಲಿತ ಬಂದೂಕುಗಳಿಂದ ದಾಳಿ ನಡೆಸಿದ್ದು, ಗ್ರೇನೆಡ್ ಅಥವಾ ಬಾಂಬ್ ಕೂಡಾ ಎಸೆದಿದ್ದಾರೆ. ಬಳಿಕ ಅವರು ಬಿಳಿ ಬಣ್ಣದ ರೆನಾಲ್ಟ್ ಕಾರಿನಲ್ಲಿ ಓಡಿ ಹೋಗಿರುವುದಾಗಿ ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ RIA ನೊವೊಸ್ಟಿ ವರದಿ ಮಾಡಿದೆ.

   6,000 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಬಹುದಾದ ಸಭಾಂಗಣದಲ್ಲಿ ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮಕ್ಕಾಗಿ ನೆರೆದಿದ್ದ ಜನರ ಮೇಲೆ ಈ ದಾಳಿ ನಡೆದಿದೆ. ಸಂತ್ರಸ್ಥರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ರಷ್ಯಾದ ಸುದ್ದಿ ವರದಿಗಳು ತಿಳಿಸಿವೆ, ಆದರೆ ಎಷ್ಟು ಸಂಖ್ಯೆಯ ಜನರು ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂಬುದನ್ನು ಹೇಳಿಲ್ಲ.

   ರಷ್ಯಾದ ಮಾಧ್ಯಮಗಳು ಮತ್ತು ಚಾನೆಲ್‌ಗಳು ಪೋಸ್ಟ್ ಮಾಡಿದ ಬಹು ವೀಡಿಯೊಗಳಲ್ಲಿ ಗುಂಡಿನ ಸುರಿಮಳೆಯ ಚಿತ್ರ ಕಂಡುಬಂದಿದೆ. ವಿಡಿಯೋವೊಂದರಲ್ಲಿ ಶಸ್ತ್ರ ಸಜ್ಜಿತ ಇಬ್ಬರು ಉಗ್ರರು ಬಂದೂಕಿನೊಂದಿಗೆ ಮಾಲ್ ಗೆ ಎಂಟ್ರಿ ನೀಡುವ ದೃಶ್ಯ ಸೆರೆಯಾಗಿದೆ. ಹೆಚ್ಚಿನ ವಿಡಿಯೋಗಳು ನಾಲ್ವರು ಉಗ್ರರನ್ನು ತೋರಿಸಿದ್ದು, ಅವರು ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಮತ್ತು ಕ್ಯಾಪ್‌ಗಳನ್ನು ಧರಿಸಿ, ಕಿರುಚುತ್ತಿರುವ ಜನರನ್ನು ಮನಬಂದಂತೆ ಗುಂಡಿಕ್ಕಿ ಹತ್ಯೆ ಮಾಡುತ್ತಿರುವುದು ಕಂಡುಬಂದಿದೆ. ಜನರನ್ನು ಸ್ಥಳಾಂತರಿಸುತ್ತಿದ್ದಂತೆ ಗಲಭೆ ನಿಗ್ರಹ ಪೊಲೀಸ್ ಘಟಕಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಯಿತು ಎಂದು ರಷ್ಯಾದ ಮಾಧ್ಯಮ ವರದಿಗಳು ತಿಳಿಸಿವೆ.

   ಮಾಸ್ಕೋದ ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಮಾಸ್ಕೋ ಮೇಯರ್ ವಾರಾಂತ್ಯದಲ್ಲಿ ನಿಗದಿಯಾಗಿದ್ದ ಎಲ್ಲಾ ಸಾಮೂಹಿಕ ಕೂಟಗಳನ್ನು ರದ್ದುಗೊಳಿಸಿದ್ದಾರೆ.ಎಲ್ಲಾ ವಿವರಗಳ ಬಗ್ಗೆ ಇನ್ನೂ ಮಾತನಾಡಲು ಸಾಧ್ಯವಿಲ್ಲಆದರೆ “ಚಿತ್ರಗಳು ಕೇವಲ ಭಯಾನಕವಾಗಿವೆ. ಮತ್ತು ವೀಕ್ಷಿಸಲು ಕಷ್ಟ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಅವರು ಹೇಳಿದ್ದಾರೆ.

  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾರ್ಚ್ 15-17 ರ ಅಧ್ಯಕ್ಷೀಯ ಮತದಾನದಲ್ಲಿ ಭಿನ್ನಾಭಿಪ್ರಾಯದ ಮೇಲೆ ವ್ಯಾಪಕವಾದ ದಮನದ ನಂತರ ರಷ್ಯಾದ ಮೇಲೆ ಆರು ವರ್ಷಗಳ ಕಾಲ ತನ್ನ ಹಿಡಿತವನ್ನು ವಿಸ್ತರಿಸಿದರು, ಈ ವಾರದ ಆರಂಭದಲ್ಲಿ ಪಾಶ್ಚಿಮಾತ್ಯ ಎಚ್ಚರಿಕೆಗಳನ್ನು ರಷ್ಯನ್ನರನ್ನು ಬೆದರಿಸುವ ಪ್ರಯತ್ನ ಎಂದು ಖಂಡಿಸಿದರು.

    ಈ ದಾಳಿ ಕುರಿತು ಐಸಿಸ್ ಹೇಳಿಕೆಯನ್ನು ಸ್ವಲ್ಪ ಸಮಯದ ನಂತರ ಯುಎಸ್ ಅಧಿಕಾರಿಗಳು ದೃಢಪಡಿಸಿದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸಂಭವನೀಯ ದಾಳಿಯ ಬಗ್ಗೆ ಗುಪ್ತಚರ ಮಾಹಿತಿಯ ಬಗ್ಗೆ ರಷ್ಯಾದ ಅಧಿಕಾರಿಗಳಿಗೆ ಖಾಸಗಿಯಾಗಿ ತಿಳಿಸಿರುವುದಾಗಿ ಯುಎಸ್ ಅಧಿಕಾರಿಗಳು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮಾರ್ಚ್‌ನಲ್ಲಿ ಐಸಿಸ್-ಕೆ ಎಂದು ಕರೆಯಲ್ಪಡುವ ಅಪ್ಘಾನಿಸ್ತಾನ ಮೂಲದ ಸಂಘಟನೆ ಮಾಸ್ಕೋದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಐಸಿಸ್ ಉಗ್ರರು ರಷ್ಯಾದಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಸಂಭಾವ್ಯ ದಾಳಿಯ ಬಗ್ಗೆ ಮಾರ್ಚ್ 7 ರಂದು ಸಾರ್ವಜನಿಕವಾಗಿ ಎಚ್ಚರಿಕೆ ನೀಡುವುದರ ಜೊತೆಗೆ, ಮುಂಬರುವ ದಾಳಿಯ ಬಗ್ಗೆ ರಷ್ಯಾದ ಅಧಿಕಾರಿಗಳಿಗೆ ಖಾಸಗಿಯಾಗಿ ತಿಳಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ, ಸಾರ್ವಜನಿಕ ಎಚ್ಚರಿಕೆಯಲ್ಲಿ ಏನಿದೆ ಎಂಬುದನ್ನು ಮೀರಿ ವಾಷಿಂಗ್ಟನ್ ಮಾಸ್ಕೋ ಅಧಿಕಾರಿಗಳಿಗೆ ಎಷ್ಟು ಮಾಹಿತಿಯನ್ನು ನೀಡಿದರು ಎಂಬುದು ಸ್ಪಷ್ಟವಾಗಿಲ್ಲ.

    ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap