ವಿಧಾನ ಸಭಾ ಚುನಾವಣೆ ಮುಂದೂಡಿಕೆಗೆ ಆಗ್ರಹ

ಪಾಟ್ನಾ:

     ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕು ಎಂದು ಮಾಜಿ ಕೇಂದ್ರ ಸಚಿವ ಯಶವಂತಾ ಸಿನ್ಹಾ ಆಗ್ರಹಿಸಿದ್ದಾರೆ.ಕೊರೊನಾದಿಂದಾಗಿ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ, ಚುನಾವಣೆಯನ್ನು ಮುಂದೂಡಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಅಲ್ಲದೇ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಈ ಅವಧಿಯಲ್ಲಿ ಚುನಾವಣೆ ನಡೆಸಿದರೆ ಮತಗಟ್ಟೆಗಳು ಕೊರೊನಾ ಕೇಂದ್ರಗಳಾಗಿ ಬದಲಾಗಬಹುದು, ಆಗ ಕೊರೊನಾ ಎಷ್ಟು ಪ್ರಮಾಣದಲ್ಲಿ ಹರಡಿದೆ ಎಂಬುದನ್ನು ಅಂದಾಜಿಸುವುದು ಬಹಳ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
    ಇನ್ನು ಬಿಹಾರ ಸರ್ಕಾರವು ಚುನಾವಣಾ ಆಯೋಗದ ಮುಂದೆ ಕೊರೊನಾ ಪ್ರಕರಣಗಳು ಕಡಿಮೆಯಿದೆ ಎಂದು ತೋರಿಸಲು ನಿಜವಾದ ಅಂಕಿಅಂಶಗಳನ್ನು ಮರೆಮಾಚುತ್ತಿವೆ ಎಂದು ಆರೋಪಿಸಿರುವ ಸಿನ್ಹಾ, ಒಂದು ವೇಳೆ ನವೆಂಬರ್ ಅಂತ್ಯದ ಬಳಿಕ ಚುನಾವಣೆ ನಡೆದರೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಬರಬಹುದು. ಆಗ ತಾನು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಬಹುದು ಎಂಬ ಭಯದಿಂದ ನಿತಿಶ್ ಕುಮಾರ್ ಚುನಾವಣೆ ಮುಂದೂಡಲು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link